ಹಲ್ಲೆ ಮತ್ತು ಕಿರುಕುಳ ಆರೋಪ: ನಟಿ ಪೂನಂ ಪಾಂಡೆ ಪತಿ ಸ್ಯಾಮ್ ಗೆ ಜಾಮೀನು
ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಪತಿ ಸ್ಯಾಮ್ ಬಾಂಬೆಗೆ ಗೋವಾ ನ್ಯಾಯಾಲಯ ಜಾಮೀನು ನೀಡಿದೆ. 20,000 ಬಾಂಡ್ ನ್ಯಾಯಾಲಯಕ್ಕೆ ನೀಡಬೇಕು ಮತ್ತು ಬುಧವಾರದಿಂದ 4 ದಿನಗಳು ಪೋಲಿಸ್ ಠಾಣೆಗೆ ವರದಿ ಸಲ್ಲಿಸಬೇಕೆಂದು ಕೋರ್ಟ್ ಸೂಚಿಸಿದೆ.
ಪತಿ ಸ್ಯಾಮ್ ಬಾಂಬೆ ತನಗೆ ಕಿರುಕುಳ ನೀಡಿದ್ದಾರೆ, ಹಲ್ಲೆ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆಂದು ಸೋಮವಾರ ತಡರಾತ್ರಿ ಗೋವಾದ ಕೆನಕೋನಾ ಪೊಲೀಸ್ ಠಾಣೆಯಲ್ಲಿ ಪೂನಂ ದೂರು ನೀಡಿದ್ದರು. ಮಂಗಳವಾರ ಗೋವಾ ಪೊಲೀಸರು ಸ್ಯಾಮ್ ನನ್ನು ಬಂಧಿಸಿದ್ದರು.
ದಕ್ಷಿಣ ಗೋವಾದ ಕೆನಕೋನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೂನಂ ಪಾಂಡೆ ಚಿತ್ರದ ಚಿತ್ರೀಕರಣಕ್ಕೆಂದು ಗೋವಾಗೆ ತೆರಳಿದ್ದಾರೆ. ಪೂನಂ ಪಾಂಡೆ ಸೆಪ್ಟಂಬರ್ 10 ರಂದು ಮುಂಬೈನಲ್ಲಿ ಸ್ಯಾಮ್ ಬಾಂಬೆ ಜೊತೆ ಸಪ್ತಪದಿ ತುಳಿದಿದ್ದರು. ಪೂನಂ ಪಾಂಡೆ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮದುವೆಯಾದ ಕೆಲವು ದಿನಗಳ ಬಳಿಕ ಈ ಜೋಡಿ ಗೋವಾ ವಿಮಾನ ನಿಲ್ದಾಣದಲ್ಲಿ ಕಾಣಸಿಕೊಂಡಿದ್ದರು. ಇದೀಗ ಈ ದಂಪತಿ ಕಿತ್ತಾಡಿಕೊಂಡಿದ್ದು ಪೊಲೀಸ್ ಸ್ಟೇಷನ್, ಕೋರ್ಟ್ ಅಂತ ಅಲೆಯುತ್ತಿದ್ದಾರೆ. ಮದುವೆಯಾಗಿ 12 ದಿನಗಳಲ್ಲಿ ಇವರ ನಡುವೆ ಬಿರುಕು ಮೂಡಿದೆ.


Click it and Unblock the Notifications











