ಪೂನಂ ಕೋಮಲ ತೋಳಿನ ಮೇಲೆ ಸಚಿನ್ ಟ್ಯಾಟೂ
ಬ್ಯಾಟು, ಬಾಲು, ಕ್ರಿಕೆಟಿಗೂ ಬಾಲಿವುಡ್ ಹಾಟ್ ಸೆನ್ಸೇಷನ್ ಪೂನಂ ಪಾಂಡೆಗೂ ಏನೋ ಒಂಥರಾ ನಂಟು. ಕ್ರಿಕೆಟ್ ಜ್ವರ ಏರಿವುದಕ್ಕೂ ಈ ಹಾಟ್ ಬೆಡಗಿ ಗರಿಗೆದರಿ ನಿಲ್ಲುವುದಕ್ಕೂ ಪಡ್ಡೆಗಳು ಪಲ್ಟಿ ಹೊಡೆಯುವುದಕ್ಕೂ ಒಂದಕ್ಕೊಂದು ಲಿಂಕು ಇದ್ದೇ ಇರುತ್ತದೆ.
ಟೀಂ ಇಂಡಿಯಾ ವರ್ಲ್ಡ್ ಕಪ್ ಗೆದ್ದಾಗ ಹಾಗೆ ಮಾಡ್ತೀನಿ ಹೀಗೆ ಮಾಡ್ತೀನಿ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಈಗ ಟೆಸ್ಟ್ ಮ್ಯಾಚ್ ಗೆ ಭಾರತ ರತ್ನ ಸಚಿನ್ ತೆಂಡೂಲ್ಕರ್ ನಿವೃತ್ತಿ ಘೋಷಿಸಿದ್ದನ್ನು ಪಬ್ಲಿಸಿಟಿಗಾಗಿ ಬಳಸಿಕೊಂಡಿದ್ದಾರೆ.
ಇದು ಒಂಥರಾ ಹೂವಿನ ಜೊತೆಗೆ ನಾರೂ ಸ್ವರ್ಗಕ್ಕೆ ಹೋದಂತೆ. ಇಡೀ ಜಗತ್ತೇ ಸಚಿನ್ ಬಗ್ಗೆ ಚರ್ಚಿಸುತ್ತಿರುವ ಸಮಯದಲ್ಲಿ ತಮ್ಮಿಂದಲೂ ಏನಾದರೂ ಅಳಿಲುಸೇವೆ ಸಾಧ್ಯವೇ ಎಂದು ಯೋಚಿಸಿದ ಈ ಬೆಡಗಿ ಸಚಿನ್ ಹಚ್ಚೆಯನ್ನು ತನ್ನ ಕೋಮಲವಾದ ತೋಳಿನ ಮೇಲೆ ಹಾಕಿಸಿಕೊಂಡಿದ್ದಾರೆ.ತನ್ನ ಬಲಗೈ ತೋಳಿನ ಮೇಲೆ ಸಚಿನ್ ಟ್ಯಾಟೂ ಹಾಕಿಸಿಕೊಂಡು ತಾನೂ ಸಚಿನ್ ಆರಾಧಕಳೆಂದು ಜಗತ್ತಿಗೆ ಹೇಳಿಕೊಂಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸಚಿನ್ 200ನೇ ಟೆಸ್ಟ್ ಮ್ಯಾಚ್ ಗೂ ಪೂನಂ ಹಾಜರಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇತ್ತೀಚೆಗೆ ಪೂನಂ ಪಾಂಡೆ ಕನ್ನಡದ 'ಲವ್ ಈಸ್ ಪಾಯಿಸನ್' ಚಿತ್ರದಲ್ಲೂ ತಮ್ಮ ಮೈಮಾಟ ಮೆರೆದಿದ್ದಾರೆ. ಆದರೆ ಆ ಚಿತ್ರದ ನಾಯಕ ನಟ 'ಹಳ್ಳಿಹೈದ' ರಾಜೇಶ್ ದುರಂತ ಸಾವಪ್ಪಿದ ಬಳಿಕ ಚಿತ್ರದ ಕಥೆ ಮುಂದೇನು ಎಂಬುದು ಸದ್ಯಕ್ಕೆ ಬಗೆಹರಿಯುತ್ತಿಲ್ಲ.


Click it and Unblock the Notifications












