ಪೀಡಿಸಿದ ನಿರ್ದೇಶಕನಿಂದ ಬಚಾವಾದ ಕತೆ ಹೇಳಿದ ನಟಿ

'ಮೀ ಟೂ' ಅಭಿಯಾನದ ಜೋರು ಈಗ ತುಸು ಕಡಿಮೆ ಆಗಿದೆ. ಆದರೆ ಆಗೊಮ್ಮೆ ಈಗೊಮ್ಮೆ ನಟಿಯರು ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವಗಳನ್ನು ಹೇಳಿಕೊಳ್ಳುತ್ತಲೇ ಇರುತ್ತಾರೆ. ಆ ಮೂಲಕ ಸಿನಿಮಾ ರಂಗಕ್ಕೆ ಬರುವ ಹೊಸಬರು ಎಚ್ಚರಿಕೆಯಿಂದಿರುವಂತೆ ಸಂದೇಶ ನೀಡುತ್ತಿರುತ್ತಾರೆ.

ಇದೀಗ ನಟಿ ಪ್ರಾಚಿ ದೇಸಾಯಿ ಬಾಲಿವುಡ್‌ನಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. 'ರಾಕ್ ಆನ್', ರಾಕ್‌ ಆನ್ 2, ವಿಲನ್, 'ಬೋಲ್ ಬಚ್ಚನ್' ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಪ್ರಾಚಿ ತಮಗೆ ಎದುರಾಗಿದ್ದ 'ಮೀ ಟೂ' ಸಂದರ್ಭಗಳು ಹಾಗೂ ಅದನ್ನು ತಾವು ಎದುರಿಸಿದ ಬಗೆಯ ಬಗ್ಗೆ ಮಾತನಾಡಿದ್ದಾರೆ.

ನಟಿ ಪ್ರಾಚಿ ದೇಸಾಯಿ ತಮ್ಮ 19 ನೇ ವಯಸ್ಸಿನಲ್ಲಿಯೇ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡವರು. ಅದಕ್ಕೂ ಎರಡು ವರ್ಷ ಮುನ್ನ ಹದಿನೇಳನೇ ವಯಸ್ಸಿನಲ್ಲಿಯೇ ಹಿಂದಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ದೊಡ್ಡ ಅಭಿಮಾನಿವರ್ಗವನ್ನು ಸಂಪಾದಿಸಿದ್ದರು.

ಸಾಕಷ್ಟು ಮಂದಿ ನನಗೆ ತೊಂದರೆ ಕೊಟ್ಟಿದ್ದರು: ಪ್ರಾಚಿ

ಸಾಕಷ್ಟು ಮಂದಿ ನನಗೆ ತೊಂದರೆ ಕೊಟ್ಟಿದ್ದರು: ಪ್ರಾಚಿ

ಇತ್ತೀಚೆಗೆ ಪ್ರಾಚಿ ನೀಡಿರುವ ಸಂದರ್ಶನದಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಹೇಳಿರುವ ಪ್ರಾಚಿ, 'ನಾನು ಸಿನಿಮಾರಂಗಕ್ಕೆ ಬಂದಾಗ ಬಹಳ ಚಿಕ್ಕವಳಾಗಿದ್ದೆ ಆಗ ನನಗೆ ಯಾರೂ ಹೆಚ್ಚೇನು ಸಮಸ್ಯೆ ಕೊಟ್ಟಿರಲಿಲ್ಲ. ಆದರೆ ಚಿತ್ರರಂಗದಲ್ಲಿ ಕೆಲ ವರ್ಷ ಕಳೆದ ಬಳಿಕ ಕೆಲವರು ತೊಂದರೆಗಳನ್ನು ಕೊಟ್ಟರು' ಎಂದಿದ್ದಾರೆ.

ಹಲವಾರು ರೀತಿ 'ಟ್ರೈ' ಮಾಡುತ್ತಿದ್ದರು: ಪ್ರಾಚಿ ದೇಸಾಯಿ

ಹಲವಾರು ರೀತಿ 'ಟ್ರೈ' ಮಾಡುತ್ತಿದ್ದರು: ಪ್ರಾಚಿ ದೇಸಾಯಿ

'ನಿರ್ದೇಶಕರು, ನಟರು ಇನ್ನಿತರರು ಹಲವಾರು ರೀತಿಗಳಲ್ಲಿ 'ಟ್ರೈ' ಮಾಡುತ್ತಿದ್ದರು. ಸಮಯವಲ್ಲದ ಸಮಯದಲ್ಲಿ ಕರೆ ಮಾಡುವುದು. ಕರೆ ಮಾಡಿ 'ಭಿನ್ನ'ವಾಗಿ ಮಾತನಾಡುವುದು ಮಾಡುತ್ತಿದ್ದರು. ತಡರಾತ್ರಿ ಕರೆ ಮಾಡಿ ಭೇಟಿ ಆಗೋಣ ಎನ್ನುತ್ತಿದ್ದರು. ಆದರೆ ಅದ್ಯಾವುದಕ್ಕೂ ನಾನು ಆಸ್ಪದ ಕೊಡುತ್ತಿರಲಿಲ್ಲ. ಕೆಲವರಿಗೆ ನೇರವಾಗಿ ಬೈದುಬಿಡುತ್ತಿದ್ದೆ. ಕೆಲವರ ಕರೆಯನ್ನು ಅಲಕ್ಷಿಸುತ್ತಿದ್ದೆ' ಎಂದಿದ್ದಾರೆ ಪ್ರಾಚಿ.

ದೊಡ್ಡ ನಿರ್ದೇಶಕನೊಬ್ಬ ಪೀಡಿಸಿದ್ದ: ಪ್ರಾಚಿ ದೇಸಾಯಿ

ದೊಡ್ಡ ನಿರ್ದೇಶಕನೊಬ್ಬ ಪೀಡಿಸಿದ್ದ: ಪ್ರಾಚಿ ದೇಸಾಯಿ

'ಒಬ್ಬ ಪ್ರಭಾವಿ ಸಿನಿಮಾ ನಿರ್ದೇಶಕನಂತೂ ನೇರವಾಗಿಯೇ ನನ್ನನ್ನು ಕೇಳಿದ್ದ. ಆತ ನಿರ್ದೇಶಿಸುತ್ತಿದ್ದ ಬಿಗ್ ಬಜೆಟ್, ದೊಡ್ಡ ಸ್ಟಾರ್ ನಟರ ಸಿನಿಮಾದಲ್ಲಿ ಅವಕಾಶ ಸಿಗಬೇಕೆಂದರೆ ನನ್ನೊಂದಿಗೆ ಸಹಕರಿಸು ಎಂದು ಕೇಳಿದ್ದ. ಆದರೆ ನಾನು ಖಡಾಖಂಡಿತವಾಗಿ ಆತನ ಸಿನಿಮಾವನ್ನು ನಿರಾಕರಿಸಿದೆ. ಸಾಕಷ್ಟು ಬಾರಿ ಪೀಡಿಸಿದ್ದ ಸಹ. ನಿನ್ನ ಸಿನಿಮಾದಲ್ಲಿ ಕೆಲಸ ಮಾಡಲು ನನಗೆ ಇಷ್ಟವಿಲ್ಲ ಎಂದು ನೇರವಾಗಿ ಹೇಳಿದ್ದೆ' ಎಂದಿದ್ದಾರೆ ಪ್ರಾಚಿ.

Recommended Video

Radhika Kumaraswamy ಮಗಳ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು? | Filmibeat Kannada
ನೀನು ಹಾಟ್ ಆಗಿಲ್ಲ ಎನ್ನುತ್ತಿದ್ದರು: ಪ್ರಾಚಿ ದೇಸಾಯಿ

ನೀನು ಹಾಟ್ ಆಗಿಲ್ಲ ಎನ್ನುತ್ತಿದ್ದರು: ಪ್ರಾಚಿ ದೇಸಾಯಿ

ಮುಂದುವರೆದು ಮಾತನಾಡಿರುವ ಪ್ರಾಚಿ, 'ನಾನು ಆರಂಭದಲ್ಲಿ ಸಿನಿಮಾ ರಂಗಕ್ಕೆ ಬಂದಾಗ ನಾನು 'ಹಾಟ್' ಆಗಿಲ್ಲ ಎಂದು ಹಲವರು ನನ್ನ ಬಳಿ ಹೇಳಿದ್ದರು. ''ನೀನು ಹಾಟ್ ಆಗಿ ಕಾಣಿಸಿಕೊಳ್ಳಬೇಕು. ಐಟಂ ಡಾನ್ಸ್‌ಗಳಲ್ಲಿ ನರ್ತಿಸಬೇಕು'' ಎಂದೆಲ್ಲಾ ಹೇಳುತ್ತಿದ್ದರು. ''ನನಗೆ ನಟಿಸುವುದು ಗೊತ್ತು ಹಾಗಿದ್ದ ಮೇಲೆ ಏಕೆ ನಾನು ಗ್ಲಾಮರಸ್ ಆಗಿದ್ದು ಪ್ರೇಕ್ಷಕರನ್ನು ಸೆಳೆಯಬೇಕು'' ಎಂಬುದು ನನ್ನ ಪ್ರಶ್ನೆಯಾಗಿರುತ್ತಿತ್ತು'' ಎಂದಿದ್ದಾರೆ ಪ್ರಾಚಿ

More from Filmibeat

English summary
Actress Prachi Desai talked about her casting couch experience and said how she get herself out from that situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X