For Quick Alerts
  ALLOW NOTIFICATIONS  
  For Daily Alerts

  ಅಕ್ರಮ ಸಂಬಂಧ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ಮೇಲೆ ಹಲ್ಲೆ ಮಾಡಿದ ನಟನ ಪತ್ನಿ

  |

  ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಡು ರಸ್ತೆಯಲ್ಲಿ ತೀವ್ರ ಮುಖಭಂಗ, ಮುಜುಗರ ಅನುಭವಿಸಿದ ಘಟನೆ ಒಡಿಶಾದ ಭುವನೇಶ್ವದಲ್ಲಿ ನಡೆದಿದೆ.

  ಒಡಿಯಾ ಸಿನಿಮಾಗಳ ಜನಪ್ರಿಯ ನಟಿ ಪ್ರಕೃತಿ ಮಿಶ್ರಾ, ನಾಯಕ ಬಾಬುಶಾನ್ ಮೊಹಂತಿಯ ಜೊತೆ ಭುವನೇಶ್ವರದಲ್ಲಿ ಕಾರಿನಲ್ಲಿ ಹೋಗುವಾಗ ಬಾಬುಶಾನ್‌ ಮೊಹಂತಿಯ ಪತ್ನಿ ಅವರಿಬ್ಬರನ್ನು ನಡು ರಸ್ತೆಯಲ್ಲಿ ಅಡ್ಡಗಟ್ಟಿದ್ದು, ನಟಿಯನ್ನು ನಡು ರಸ್ತೆಯಲ್ಲಿಯೇ ಅಟ್ಟಾಡಿಸಿಕೊಂಡು ಹೋಗಿ ಥಳಿಸಿದ್ದಾರೆ.

  ಬಾಬುಶಾನ್ ಮೊಹಂತಿಯ ಪತ್ನಿ ತೃಪ್ತಿ ಹೀಗೆ ಪ್ರಕೃತಿ ಮಿಶ್ರಾ ಅನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆಯುತ್ತಿರುವ ದೃಶ್ಯವನ್ನು ಹಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋಗಳು ಸಖತ್ ವೈರಲ್ ಆಗಿವೆ.

  ಬಾಬುಶಾನ್ ಮೊಹಂತಿ ಹಾಗೂ ಪ್ರಕೃತಿ ಮಿಶ್ರಾ ಒಡಿಯಾ ಸಿನಿಮಾ 'ಪ್ರೇಮಂ'ನಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದೀಗ ಹೊಸದೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು ಇಬ್ಬರೂ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದರು. ಆದರೆ ಬಾಬುಶಾನ್ ಮೊಹಂತಿ ಹಾಗೂ ಪ್ರಕೃತಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಬಾಬುಶಾನ್ ಪತ್ನಿ ತೃಪ್ತಿ ಆರೋಪಿಸಿದ್ದು ರಸ್ತೆಯಲ್ಲಿ ಅಡ್ಡಗಟ್ಟಿ ಹೊಡೆದಿದ್ದಾರೆ.

  ನಟಿಗೆ ಹಿಗ್ಗಾ-ಮುಗ್ಗ ಥಳಿಸಿರುವ ನಟನ ಪತ್ನಿ

  ನಟಿಗೆ ಹಿಗ್ಗಾ-ಮುಗ್ಗ ಥಳಿಸಿರುವ ನಟನ ಪತ್ನಿ

  ಪ್ರಕೃತಿ ಮಿಶ್ರಾ, ಬಾಬುಶಾನ್ ಪ್ರಯಾಣಿಸುತ್ತಿದ್ದ ಕಾರು ಅಡ್ಡಗಟ್ಟಿ, ಕಾರಿನ ಒಳಗೆ ಏರಿ ನಟಿಯ ಕೂದಲು ಹಿಡಿದು ಎಳೆದಾಡಿ, ಕಾಲಿನಿಂದ ಒದ್ದು, ಹೊಡೆದು ರಂಪಾಟ ಮಾಡಿದ್ದಾರೆ ತೃಪ್ತಿ. ಆಕೆಯ ಹೊಡೆತ ತಡೆಯಲಾಗದೆ ಓಡಿ ಹೋಗಲು ನಟಿ ಪ್ರಕೃತಿ ಪ್ರಯತ್ನಿಸಿದ್ದಾರೆ ಆದರೂ ಬಿಡದ ತೃಪ್ತಿ ಅಟ್ಟಿಸಿಕೊಂಡು ಓಡಿಹೋಗಿ ನಟಿಯನ್ನು ಹೊಡೆದಿದ್ದಾರೆ. ನಟಿಯು ಕಾಪಾಡಿ ಎಂದು ಕೇಳಿಕೊಂಡರೂ ಯಾರೂ ಸಹಾಯಕ್ಕೆ ಬರಲಿಲ್ಲ ಬದಲಿಗೆ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದಾರೆ.

  ಬಾಬುಶಾನ್‌ ಮೇಲೂ ಹಲ್ಲೆ ಮಾಡಿರುವ ಪತ್ನಿ ತೃಪ್ತಿ

  ಬಾಬುಶಾನ್‌ ಮೇಲೂ ಹಲ್ಲೆ ಮಾಡಿರುವ ಪತ್ನಿ ತೃಪ್ತಿ

  ಬಾಬುಶಾನ್‌ಗೂ ಸಹ ಪತ್ನಿ ತೃಪ್ತಿ ಹೊಡೆದಿದ್ದಾರೆ. ತೃಪ್ತಿ ಮಾತ್ರವೇ ಅಲ್ಲದೆ ಆಕೆಯೊಂದಿಗೆ ಇನ್ನೂ ಕೆಲವರಿದ್ದರು, ಅವರು ತೃಪ್ತಿಯ ಸಂಬಂಧಿಗಳು ಎಂದು ಹೇಳಲಾಗಿದೆ. ಪತ್ನಿಯ ಹೊಡೆತಕ್ಕೆ ಬಾಬುಶಾನ್‌ರ ಶರ್ಟ್ ಹರಿದು ಹೋಗಿದೆ. ಇನ್ನು ನಟಿ ಪ್ರಕೃತಿ ಅಂತೂ ಅಲ್ಲಿಂದ ನೆಡದುಕೊಂಡೆ ಹೊರಟು ಹೋದರು, ಬಾಬುಶಾನ್ ಕರೆದರೂ ಸಹ ಕೈಮುಗಿದು ಅಲ್ಲಿಂದ ಹೋದರು.

  ಗೂಂಡಾಗಳ ಜೊತೆ ಬಂದು ಹಲ್ಲೆ

  ಗೂಂಡಾಗಳ ಜೊತೆ ಬಂದು ಹಲ್ಲೆ

  ಈ ಬಗ್ಗೆ ನಟಿ ಪ್ರಕೃತಿ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ''ಎಲ್ಲ ಕತೆಗಳಿಗೂ ಎರಡು ಮುಖ ಇರುತ್ತದೆ. ಆದರೆ ನಾವು ಬದುಕುತ್ತಿರುವ ಸಮಾಜದಲ್ಲಿ ಮಹಿಳೆಯನ್ನು ಅಕಾರಣವಾಗಿ ದೂಷಿಯನ್ನಾಗಿಸಲಾಗುತ್ತದೆ. ನಾನು ಮತ್ತು ಸಹ ನಟ ಬಾಬುಶಾನ್ ಚೆನ್ನೈಗೆ ತೆರಳುತ್ತಿದ್ದೆವು, ಉತ್ಕಲ್ ಅಸೋಸಿಯೇಷನ್‌ನವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾವು ಪಾಲ್ಗೊಳ್ಳಬೇಕಿತ್ತು. ಆದರೆ ಅಷ್ಟರಲ್ಲಿ ಬಾಬುಶಾನ್ ಪತ್ನಿ ತೃಪ್ತಿ ಕೆಲವು ಗೂಂಡಾಗಳೊಡನೆ ಬಂದು ನಮ್ಮನ್ನು ಅಡ್ಡಗಟ್ಟಿ ನನ್ನ ಮೇಲೆ ದೈಹಿಕವಾಗಿ, ಮಾನಸಿಕವಾಗಿ ಹಲ್ಲೆ ನಡೆಸಿದರು. ಅವರ ಆ ವರ್ತನೆ ನನ್ನಿಂದ ಸಹಿಸಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಉತ್ತರ ನೀಡುತ್ತೇನೆ'' ಎಂದಿದ್ದಾರೆ.

  ಆ ನಟಿಯ ಜೊತೆ ನಟಿಸುವುದಿಲ್ಲ ಎಂದ ಬಾಬುಶಾನ್

  ಆ ನಟಿಯ ಜೊತೆ ನಟಿಸುವುದಿಲ್ಲ ಎಂದ ಬಾಬುಶಾನ್

  ಇನ್ನು ಇದೇ ವಿಷಯವಾಗಿ ವಿಡಿಯೋ ಮಾಡಿ ಮಾತನಾಡಿರುವ ನಟ ಬಾಬುಶಾನ್ ಮೊಹಂತಿ, ''ನನ್ನ ವಿಡಿಯೋಗಳನ್ನು ನೋಡಿ ನೀವು ಖುಷಿ ಪಟ್ಟಿರಬಹುದು. ನನ್ನ ಕುಟುಂಬ ಈ ರೀತಿಯ ಒಂದು ಸ್ಥಿತಿಯಲ್ಲಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಅವರಿಗೆ ಬೇಸರವಾಗುವುದಾದರೆ ನಾನು ನಟಿ ಪ್ರಕೃತಿ ಜೊತೆ ನಟಿಸುವುದಿಲ್ಲ. ಪ್ರಕೃತಿ ಮಾತ್ರವಲ್ಲ ಯಾವ ನಟಿಯೊಟ್ಟಿಗೂ ನಾನು ನಟಿಸುವುದಿಲ್ಲ. ನಾವಿಬ್ಬರೂ ಹೊಸ ಸಿನಿಮಾದ ಘೋಷಣೆ ಮಾಡುವವರಿದ್ದೆವು ಆದರೆ ಆ ಸಿನಿಮಾದಲ್ಲಿ ನಟಿಸದಿರಲು ನಾನು ನಿಶ್ಚಯಿಸಿದ್ದೇನೆ'' ಎಂದಿದ್ದಾರೆ. ಇನ್ನು ನಟಿ ಪ್ರಕೃತಿಯ ತಾಯಿ, ಮಗಳ ಮೇಲೆ ನಡೆದ ಹಲ್ಲೆ ಯತ್ನದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  English summary
  National award winning actress Prakruti Misra attacked by actor Odiya actor Babusan Mohanti's wife Trupti. Prakruti's mother gave complaint to police station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X