4 ತಿಂಗಳಲ್ಲಿ ಎರಡು ಫ್ಲಾಟ್ ಮಾರಾಟ ಮಾಡಿದ ಪ್ರೀತಿ ನಟಿ ಜಿಂಟಾ; ಅಷ್ಟಕ್ಕೂ ಕಾರಣ ಏನು?

ಬಾಲಿವುಡ್ ಅಂಗಳದ ಡಿಂಪಲ್ ಕ್ವೀನ್ ಪ್ರೀತಿ ಜಿಂಟಾ ಸದ್ಯ ಸುದ್ದಿಯಲ್ಲಿದ್ದಾರೆ. ಬೆಳ್ಳಿತೆರೆಯಿಂದ ಸ್ವಲ್ಪ ದೂರವಿದ್ದರೂ ಅವರ ಇತ್ತೀಚಿನ ನಡೆ ಕುತೂಹಲ ಮೂಡಿಸಿದೆ. ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶದಲ್ಲಿ ನಟಿ ದೊಡ್ಡ ವ್ಯವಹಾರವೊಂದನ್ನು ಮುಗಿಸಿದ್ದಾರೆ.

ಈ ನಟಿ ತಮ್ಮ ಆಸ್ತಿಯನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಪಾಲಿ ಹಿಲ್ ಅತ್ಯಂತ ದುಬಾರಿ ಏರಿಯಾ. ಅಲ್ಲಿನ ತಮ್ಮ ಫ್ಲಾಟ್ ಅನ್ನು ನಟಿ ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

Actress Preity Zinta Sells Luxury Pali Hill Flat in Mumbai for 18 5 Crore

ನಟಿ ಪ್ರೀತಿ ಜಿಂಟಾ ಈ ಆಸ್ತಿಯನ್ನು ಮಾರಾಟ ಮಾಡಲು ಒಂದು ಕಾರಣವಿದೆ. ಪುನರಾಭಿವೃದ್ಧಿ ಯೋಜನೆ ಅಡಿಯಲ್ಲಿ ಈ ಫ್ಲಾಟ್ ಅವರಿಗೆ ಸಿಕ್ಕಿತ್ತು. ಈಗ ಅದರ ಬೆಲೆ ಕೇಳಿದರೆ ನೀವು ಖಂಡಿತ ಶಾಕ್ ಆಗ್ತೀರಾ. ಅಷ್ಟೊಂದು ದೊಡ್ಡ ಮೊತ್ತಕ್ಕೆ ಈ ಫ್ಲಾಟ್ ಮಾರಾಟವಾಗಿದೆ.

18.50 ಕೋಟಿ ರೂಪಾಯಿಗೆ ಫ್ಲಾಟ್ ಮಾರಾಟ

ಮುಂಬೈನ ಬಾಂದ್ರಾ ಭಾಗದಲ್ಲಿ ಜಾಗ ಸಿಗುವುದು ತುಂಬಾ ಕಷ್ಟ. ಅಂತಹದರಲ್ಲಿ ಪಾಲಿ ಹಿಲ್ ಪ್ರದೇಶ ಅಂದರೆ ಕೇಳಬೇಕೆ? ಅಲ್ಲಿ ಪ್ರೀತಿ ಜಿಂಟಾ ಅವರಿಗೆ ಸೇರಿದ ಒಂದು ಸುಂದರ ಅಪಾರ್ಟ್ಮೆಂಟ್ ಇತ್ತು. ಇದನ್ನು ಅವರು ಬರೋಬ್ಬರಿ 18.50 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ಆಸ್ತಿ ನೋಂದಣಿ ದಾಖಲೆಗಳ ಮೂಲಕ ಈ ವಿಚಾರ ಈಗ ಬೆಳಕಿಗೆ ಬಂದಿದೆ.

4 ತಿಂಗಳಲ್ಲಿ ಎರಡನೇ ವ್ಯವಹಾರ...

ಪ್ರೀತಿ ಜಿಂಟಾ ಅವರು ಆಸ್ತಿ ಮಾರಾಟ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ನಾಲ್ಕು ತಿಂಗಳಲ್ಲಿ ಇದು ಅವರ ಎರಡನೇ ದೊಡ್ಡ ವ್ಯವಹಾರವಾಗಿದೆ. ಕಳೆದ ವರ್ಷ ಅಂದರೆ ನವೆಂಬರ್ 2025ರಲ್ಲಿ ಕೂಡ ಅವರು ಒಂದು ಫ್ಲಾಟ್ ಮಾರಾಟ ಮಾಡಿದ್ದರು. ಆಗ ಸುಮಾರು 14 ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಆ ಫ್ಲಾಟ್ ಸೇಲ್ ಆಗಿತ್ತು. ಈಗ ಕೇವಲ ನಾಲ್ಕು ತಿಂಗಳ ಅಂತರದಲ್ಲಿ ಮತ್ತೊಂದು ಫ್ಲಾಟ್ ಮಾರಾಟ ಮಾಡಿ ಸುದ್ದಿಯಾಗಿದ್ದಾರೆ.

ಯಾರು ಈ ಆಸ್ತಿಯ ಹೊಸ ಒಡೆಯರು?

ಇತ್ತೀಚಿನ ದಾಖಲೆಗಳ ಪ್ರಕಾರ, ಮಾರ್ಚ್ 2, 2026 ರಂದು ಈ ಆಸ್ತಿ ನೋಂದಣಿಯಾಗಿದೆ. ಪ್ರೀತಿ ಜಿಂಟಾ ಅವರ ಈ 1,770 ಚದರ ಅಡಿ ಅಳತೆಯ ಫ್ಲಾಟ್ ಅನ್ನು ಭಾರತೀಯ ಮೂಲದ ಅಮೆರಿಕನ್ ದಂಪತಿಗಳು ಖರೀದಿಸಿದ್ದಾರೆ. ಪ್ರಿಯಾ ನಗರ ಮತ್ತು ರಾಜೀವ್ ನಗರ ಎಂಬುವವರು ಈ ಐಷಾರಾಮಿ ಮನೆಯ ಹೊಸ ಮಾಲೀಕರು. ಈ ಒಂದು ವ್ಯವಹಾರಕ್ಕಾಗಿ ಬರೋಬ್ಬರಿ 1.11 ಕೋಟಿ ರೂಪಾಯಿ ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಲಾಗಿದೆ.

ಪುನರಾಭಿವೃದ್ಧಿ ನಂತರ ಸಿಕ್ಕಿದ್ದ ಫ್ಲಾಟ್...

ಈ ಕಟ್ಟಡವು ಹಳೆಯದಾಗಿತ್ತು ಮತ್ತು ಪುನರಾಭಿವೃದ್ಧಿಗೆ ಒಳಪಟ್ಟಿತ್ತು. ರುಸ್ತೋಮ್ಮಿ ಸಮೂಹವು ಈ ಕಟ್ಟಡವನ್ನು ಹೊಸದಾಗಿ ನಿರ್ಮಾಣ ಮಾಡಿತ್ತು. ಏಪ್ರಿಲ್ 2025 ರಲ್ಲಿ ಈ ಹೊಸ ಅಪಾರ್ಟ್ಮೆಂಟ್ ಅನ್ನು ಪ್ರೀತಿ ಜಿಂಟಾ ಅವರಿಗೆ ಹಸ್ತಾಂತರಿಸಲಾಗಿತ್ತು. ಶಾಶ್ವತ ಪರ್ಯಾಯ ವಸತಿ ಒಪ್ಪಂದದ ಅಡಿಯಲ್ಲಿ ಈ 11 ನೇ ಮಹಡಿಯ ಫ್ಲಾಟ್ ಅವರಿಗೆ ಸಿಕ್ಕಿತ್ತು. ಆದರೆ ಅದನ್ನು ಪಡೆದ ಕೆಲವೇ ತಿಂಗಳಲ್ಲಿ ನಟಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಪ್ರೀತಿ ಜಿಂಟಾ ಅವರು ಸದ್ಯ ಐಪಿಎಲ್ ಮತ್ತು ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಮುಂಬೈನ ಆಸ್ತಿಗಳನ್ನು ಮಾರಾಟ ಮಾಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅವರು ವಿದೇಶದಲ್ಲಿ ನೆಲೆಸಲು ಪ್ಲಾನ್ ಮಾಡಿದ್ದಾರಾ ಅಥವಾ ಬೇರೆ ಎಲ್ಲಾದರೂ ಹೂಡಿಕೆ ಮಾಡುತ್ತಿದ್ದಾರಾ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಆಸ್ತಿ ವ್ಯವಹಾರದ ಬಗ್ಗೆ ನಟಿ ಕಡೆಯಿಂದ ಅಧಿಕೃತ ಪ್ರತಿಕ್ರಿಯೆ ಬರಬೇಕಿದೆ.

More from Filmibeat

Read more about: preity zinta actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X