For Quick Alerts
  ALLOW NOTIFICATIONS  
  For Daily Alerts

  ದೆಹಲಿ ವಾಯುಮಾಲಿನ್ಯದ ಬಗ್ಗೆ ಪ್ರಿಯಾಂಕಾ ಚೋಪ್ರಾ ಬೇಸರ

  |

  ಕಳೆದ ಒಂದು ವಾರದಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಉಸಿರಾಟ ತೊಂದರೆಯಿಂದ ಅಲ್ಲಿನ ಶಾಲೆಗಳಿಗೆ ರಜೆ ನೀಡಲಾಗಿದೆ. ನಿನ್ನೆ (ಭಾನುವಾರ) ಈ ಸಮಸ್ಯೆ ಗಂಭೀರ ಸ್ಥಿತಿಗೆ ಬಂದಿತ್ತು.

  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ದೆಹಲಿ ಮಾಲಿನ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ತಮ್ಮ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿದ್ದು, ಮಾಲಿನ್ಯದಿಂದ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ. ಸದ್ಯ, ಪ್ರಿಯಾಂಕಾ ಚೋಪ್ರಾ ನೆಟ್ ಫ್ಲಿಕ್ಸ್ ನ 'ದಿ ವೈಟ್ ಟೈಗರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ಪ್ರಿಯಾಂಕಾ ಪತಿಯ ಭಾವನಾತ್ಮಕ ಪೋಸ್ಟ್ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ಪ್ರಿಯಾಂಕಾ ಪತಿಯ ಭಾವನಾತ್ಮಕ ಪೋಸ್ಟ್

  ಉಸಿರಾಟದ ತೊಂದರೆಯಿಂದ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಪೋಸ್ಟ್ ಮಾಡಿದ್ದಾರೆ. ''ದಿ ವೈಟ್ ಟೈಗರ್' ಸಿನಿಮಾದ ಶೂಟಿಂಗ್ ಇತ್ತು. ಆದರೆ, ಈಗ ಶೂಟಿಂಗ್ ಮಾಡಲು ಬಹಳ ಕಷ್ಟ ಆಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ವಾಸಿಸುವುದು ಹೇಗೆ ಎಂದು ಊಹಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಎಲ್ಲರೂ ಸುರಕ್ಷಿತವಾಗಿ ಇರಿ'' ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.

  ಪ್ರಿಯಾಂಕಾ ಚೋಪ್ರಾ ನಟಿಸುತ್ತಿರುವ 'ದಿ ವೈಟ್ ಟೈಗರ್' ಸಿನಿಮಾ ಕರ್ನಾಟಕದ ಅರವಿಂದ್ ಅಡಿಗ ಅವರ ಕಾದಂಬರಿ ಆಧಾರಿತ ಸಿನಿಮಾವಾಗಿದೆ. ಸದ್ಯ, ಆಸ್ಟೇಲಿಯಾದಲ್ಲಿ ಇರುವ ಅರವಿಂದ್ ಇಂಗ್ಲೀಷ್ ಲೇಖಕರಾಗಿದ್ದಾರೆ. ಈ ಸಿನಿಮಾ ಒಬ್ಬ ಟೀ ಅಂಗಡಿ ಮಾಲೀಕ ಹೇಗೆ ದೊಡ್ಡ ಉದ್ಯಮಿಯಾದ ಎನ್ನುವ ಕಥೆ ಹೊಂದಿದೆ.

  ಅಂದಹಾಗೆ, ದೆಹಲಿಯ ವಾಯು ಮಾಲಿನ್ಯ ಕಡಿಮೆ ಮಾಡಲು ತಾಜ್ ಮಹಲ್ ಆವರಣದಲ್ಲಿ ಗಾಳಿ ಶುದ್ಧಿಕರಣ ಯಂತ್ರಗಳನ್ನು ಅಳವಡಿಸಲಾಗಿದೆ.

  English summary
  Actress Priyanka Chopra comment on delhi air pollution

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X