ಅಮೇರಿಕಾ ಉಪಾಧ್ಯಕ್ಷೆ ಜೊತೆ ಪ್ರಿಯಾಂಕಾ ಚೋಪ್ರಾ ವಿಶೇಷ ಸಂದರ್ಶನ

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯ ನಟಿ ಎನಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್‌, ಅಮೇರಿಕಾದ ಶೋಗಳಲ್ಲಿ ಮಿಂಚುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಬಾಲಿವುಡ್‌ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಚೋಪ್ರಾ, ಅಮೇರಿಕಾದಲ್ಲಿ ಪ್ರಸಾರವಾಗುತ್ತಿರುವ ಟಿವಿ ಶೋ ಕ್ವಾಂಟಿಕೋ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ಹಾಲಿವುಡ್‌ ಚಿತ್ರಗಳತ್ತ ಮುಖ ಮಾಡಿರುವ ಪ್ರಿಯಾಂಕಾ ಚೋಪ್ರಾ ಅವರ 'ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ' ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಪ್ರಿಯಾಂಕಾ ಚೋಪ್ರಾ ಸದ್ಯ ಬ್ಯಾಕ್‌ ಟು ಬ್ಯಾಕ್ ಹಾಲಿವುಡ್‌ ಚಿತ್ರಗಳಲ್ಲೇ ಬ್ಯುಸಿಯಾಗಿದ್ದು,ರುಸ್ಸೋ ಬ್ರದರ್ಸ್‌ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿಟಾಡೆಲ್‌ ಮೂಲಕ ಓಟಿಟಿ ಸೀರಿಸ್‌ಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

ಭಾರತೀಯ ಮೂಲದ ಚಿತ್ರ ನಟಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸುತ್ತಿದ್ದು, ಪ್ರಿಯಾಂಕಾ ಚೋಪ್ರಾ ಮತ್ತೊಂದು ಪ್ರಮುಖ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ನಟಿಯಾಗಿ ಮಿಂಚುತ್ತಿದ್ದ ಪ್ರಿಯಾಂಕಾ ಇದೀಗ ಅಮೇರಿಕಾದಲ್ಲಿ ನಿರೂಪಕಿಯಾಗಿ ಜನಪ್ರಿಯತೆ ಪಡೆಯುತ್ತಿದ್ದು, ಇತ್ತೀಚಿಗೆ ನಡೆಸಿದ ಸಂದರ್ಶನವೊಂದರಿಂದ ಪ್ರಿಯಾಂಕ ಖ್ಯಾತಿ ಮತ್ತಷ್ಟು ಹೆಚ್ಚಿದೆ.

ಪ್ರಿಯಾಂಕಾ ಚೋಪ್ರಾ ಅಮೇರಿಕಾದ ವೈಟ್‌ ಹೌಸ್‌ಗೆ ಭೇಟಿ ನೀಡಿದ್ದು, ವಿಶ್ವದ ದೊಡ್ಡಣ್ಣ ಅಮೇರಿಕಾದ ಉಪಾಧ್ಯಕ್ಷೆ ಕಮಲ ಹ್ಯಾರಿಸ್‌ ಅವರೊಂದಿಗೆ ಸಂದರ್ಶನ ನಡೆಸಿದ್ದಾರೆ.ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ವುಮೆನ್ಸ್‌ ಲೀಡರ್‌ಶಿಪ್‌ ವೇದಿಕೆಯಲ್ಲಿ ಕಮಲ ಹ್ಯಾರಿಸ್‌ ಅವರನ್ನು ಸಂದರ್ಶಿಸಿ ಪ್ರಿಯಾಂಕಾ ಚೋಪ್ರಾ, ಮಹಿಳೆಯರಿಗೆ ಸಮಾನ ವೇತನ ಹಾಗೂ ಇತರ ಪ್ರಮುಖ ಕಾನೂನುಗಳ ವಿಚಾರದ ಕುರಿತು ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಿದರು.

Actress Priyanka Chopra Interviews US Vice President Kamala Harris

ಪ್ರಿಯಾಂಕಾ ಚೋಪ್ರಾ ಅವರ ಪ್ರಶ್ನೆಗಳಿಗೆ ಕಮಲ ಹ್ಯಾರಿಸ್‌ ಉತ್ತರಿಸಿದ್ದು, ತಮ್ಮ ರಾಜಕೀಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮಹಿಳಾ ಸಮಾನತೆಯ ಬಗ್ಗೆ ಅಮೇರಿಕಾದ ಉಪಾಧ್ಯಕ್ಷೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ಪ್ರಿಯಾಂಕ್ ಚೋಪ್ರಾ ಕೂಡ ತಮ್ಮ ವೃತ್ತಿ ಬದುಕಿನ ಏರಿಳಿತಗಳ ಬಗ್ಗೆ ಮಾತನಾಡಿದ್ದು, ತಮ್ಮ 22 ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ ಈ ವರ್ಷವೇ ಮೊದಲ ಬಾರಿಗೆ ನಟನಷ್ಟೇ ಸಮಾನ ಸಂಭಾವನೆಯನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ಅಮೇರಿಕಾದ ಉಪಾಧ್ಯಕ್ಷೆ ಕಮಲ ಹ್ಯಾರಿಸ್‌ ಅವರ ಸಂದರ್ಶಿಸುವ ಅವಕಾಶ ಪಡೆದ ಪ್ರಿಯಾಂಕಾ ಚೋಪ್ರಾ ಅವರನ್ನು ಅಭಿಮಾನಿಗಳು ಅಭಿನಂದಿಸಿದ್ದು, ನಿಮ್ಮ ವೃತ್ತಿ ಜೀವನ ಹೀಗೆ ಉನ್ನತ ಮಟ್ಟದಲ್ಲಿ ಸಾಗಲಿ ಎಂದು ಕಮೆಂಟ್‌ ಮಾಡಿದ್ದಾರೆ.

ಮಹಿಳಾ ಸಮಾನತೆಯ ಬಗ್ಗೆ ದಿಟ್ಟವಾಗಿ ಮಾತನಾಡುವ ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ಗರ್ಭಪಾತದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಶ್ಲಾಘಿಸಿದ್ದರು. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದ ಪ್ರಿಯಾಂಕ ಚೋಪ್ರಾ ಆಯ್ಕೆ ಮಾಡುವ ಹಕ್ಕು ಪ್ರಪಂಚದಾದ್ಯಂತ ಮಹಿಳೆಯರಿಗೆ ಇರಬೇಕಾದ ಏಕೈಕ ಹಕ್ಕಾಗಿದೆ. ಇದೊಂದು ಪ್ರಗತಿಪರ ಹೆಜ್ಜೆ ಎಂದು ಭಾರತದಲ್ಲಿ ಬಂದಿರುವ ಹೊಸ ಕಾನೂನಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸದ್ಯ ಅಮೇರಿಕಾದಲ್ಲಿ ಸಮಯ ಕಳೆಯುತ್ತಿರುವ ಪ್ರಿಯಾಂಕಾ ಚೋಪ್ರಾ ತಮ್ಮ ವೈಟ್ ಹೌಸ್‌ ಪ್ರವಾಸದ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈಟ್‌ ಹೌಸ್‌ನಲ್ಲಿ ತೆಗೆದ ಕೆಲವು ಫೋಟೋಗಳನ್ನು ನಟಿ ಶೇರ್‌ ಮಾಡಿದ್ದಾರೆ. ಇನ್ನು ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ಕೂಡ ಮಗಳೊಂದಿಗೆ ಪಿಕ್ ನಿಕ್‌ ಎಂದು ಹಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

More from Filmibeat

English summary
Bollywood actress Priyanka Chopra interviews US Vice President Kamala Harris at White House.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X