For Quick Alerts
  ALLOW NOTIFICATIONS  
  For Daily Alerts

  ವಯಸ್ಸಾದಂತೆ ನನ್ನ ದೇಹವೂ ಬದಲಾಗಿದೆ; ಪ್ರಿಯಾಂಕಾ ಚೋಪ್ರಾ

  |

  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಅಮೆರಿಕದ ಗಾಯಕ ನಿಕ್ ಜೋನಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಪತಿ ಜೊತೆ ಯು ಎಸ್ ಎಯಲ್ಲಿ ನೆಲೆಸಿದ್ದಾರೆ. ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ.

  ಬೋಲ್ಡ್ ಹೇಳಿಕೆ ಮೂಲಕ ಆಗಾಗ ಸುದ್ದಿಯಾಗುವ ಪ್ರಿಯಾಂಕಾ ಇತ್ತೀಚಿಗೆ ತನ್ನ ದೇಹದ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ತನ್ನ ದೇಹದಲ್ಲಾದ ಬದಲಾವಣೆ ಬಗ್ಗೆ ವಿವರಿಸಿದ್ದಾರೆ. ಮುಂದೆ ಓದಿ...

  ಭಾರತಕ್ಕೆ ಸಹಾಯ ಮಾಡಿ: ಪ್ರಿಯಾಂಕಾ ಪತಿ ನಿಕ್ ಜೋನಸ್ ಮನವಿಭಾರತಕ್ಕೆ ಸಹಾಯ ಮಾಡಿ: ಪ್ರಿಯಾಂಕಾ ಪತಿ ನಿಕ್ ಜೋನಸ್ ಮನವಿ

  ವಯಸ್ಸಾದಂತೆ ದೇಹ ಬದಲಾಗಿದೆ

  ವಯಸ್ಸಾದಂತೆ ದೇಹ ಬದಲಾಗಿದೆ

  ವಯಸ್ಸಾದಂತೆ ತನ್ನ ದೇಹದಲ್ಲಾಗುವ ಬದಲಾವಣೆಯನ್ನು ಒಪ್ಪಿಕೊಂಡು ಮಾನಸಿಕವಾಗಿ ಹೊಂದಿಕೊಳ್ಳಬೇಕು ಎಂದಿದ್ದಾರೆ. 38 ವರ್ಷದ ನಟಿ ಪ್ರಿಯಾಂಕಾ ದೇಹದಲ್ಲಾದ ಬದಲಾವಣೆ ಬಗ್ಗೆ, 'ನಾನು ಪ್ರಭಾವಿತಳಾಗಿಲ್ಲ ಎಂದು ನಾನು ಸುಳ್ಳು ಹೇಳುವುದಿಲ್ಲ. ವಯಸ್ಸಾದಂತೆ ಎಲ್ಲರ ದೇಹದ ಹಾಗೆ ನನ್ನ ದೇಹವೂ ಬದಲಾಗಿದೆ. ನಾನು ಇದಕ್ಕೆ ಮಾನಸಿಕವಾಗಿ ಹೊಂದಿಕೊಳ್ಳಬೇಕಾಯಿತು' ಎಂದಿದ್ದಾರೆ.

  10, 20 ವರ್ಷಗಳ ಹಿಂದಿನ ದೇಹ ಈಗಿಲ್ಲ

  10, 20 ವರ್ಷಗಳ ಹಿಂದಿನ ದೇಹ ಈಗಿಲ್ಲ

  ಈಗ ಇರುವುದು ನನ್ನ 10 ಅಥವಾ 20 ವರ್ಷಗಳ ಹಿಂದಿನ ದೇಹ ಅಲ್ಲ. ಆತ್ಮವಿಶ್ವಾಸದ ಪ್ರಜ್ಞೆಯನ್ನು ಹೊಂದಬೇಕು ಎಂದು ಪ್ರಿಯಾಂಕಾ ಹೇಳಿದ್ದಾರೆ. 'ನಾನು ಯಾವಾಗಲು ಯೋಚಿಸುತ್ತೇನೆ ನಾನು ಏನು ಕೊಡುಗೆ ನೀಡಬೇಕು? ನನ್ನ ಉದ್ದೇಶವೇನು? ನಾನು ಮಾಡುವ ಕಾರ್ಯಗಳಲ್ಲಿ ಉತ್ತಮವಾಗಿ ನಿರ್ವಹಿಸುತ್ತಿದ್ದೀನಾ?' ಎಂದು ಹೇಳಿದ್ದಾರೆ.

  'ನನಗೆ ಸಿಗಬೇಕಾಗಿದ್ದ ಪಾತ್ರ ಪ್ರಿಯಾಂಕಾ ಚೋಪ್ರಾ ಪಾಲಾಯಿತು''ನನಗೆ ಸಿಗಬೇಕಾಗಿದ್ದ ಪಾತ್ರ ಪ್ರಿಯಾಂಕಾ ಚೋಪ್ರಾ ಪಾಲಾಯಿತು'

  ಸಂತೋಷ ನೀಡುವ ಕೆಲಸದ ಕಡೆ ಗಮನ ಹರಿಸಿ

  ಸಂತೋಷ ನೀಡುವ ಕೆಲಸದ ಕಡೆ ಗಮನ ಹರಿಸಿ

  'ದೇಹದಲ್ಲಾಗುವ ಬದಲಾವಣೆ ನನ್ನ ಮೇಲೆ ಪರಿಣಾಮ ಬೀರುತ್ತದೆಯಾದರೂ, ಇತರ ಒಳ್ಳೆಯ ವಿಷಯಗಳ ಬಗ್ಗೆ ಗಮನ ಹರಿಸುವ ಮೂಲಕ ಸಂತೋಷವಾಗಿ ಇರಬೇಕು' ಎಂದಿದ್ದಾರೆ. 'ನನ್ನ ದೇಹದ ಬಗ್ಗೆ ನನಗೆ ಉತ್ತಮ ಭಾವನೆ ಇಲ್ಲದ ಸಮಯದಲ್ಲಿ ನಾನು ನನಗೆ ಸಂತೋಷ ನೀಡುವ ಕೆಲಸಗಳಲ್ಲಿ ನಿರತಳಾಗುತ್ತೇನೆ' ಎಂದಿದ್ದಾರೆ.

  ನನ್ನ ತಾಯಿ ಯಾರು ಅಂತಾ ಗೊತ್ತಾಗೋದೇ ಬೇಡ ಅಂದ್ರು ಶರಣ್ | Filmibeat Kannada
  ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ

  ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ

  ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಪ್ರಪಂಚದಾದ್ಯಂತ ಅಪಾರ ಸಂಖ್ಯೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಬಾಲಿವುಡ್ ನಿಂದ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಮುಂದಿನ ವರ್ಷ ಹಿಂದಿ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಪ್ರಿಯಾಂಕಾರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

  English summary
  Actress Priyanka Chopra opens up about her body image. She says My body has changed I have older.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X