ಆರು ಸಲ ಮದುವೆಯಾಗುತ್ತೇನೆ ಎಂದ ಪ್ರಿಯಾಂಕಾ

By ಉದಯರವಿ

ಬಾಲಿವುಡ್ ಚಿತ್ರರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಬೆಡಗಿ ಎಂದರೆ ಪ್ರಿಯಾಂಕಾ ಚೋಪ್ರಾ. ಈಗ ಅವರ ವಯಸ್ಸು ಮೂವತ್ತು ಪ್ಲಸ್ ಒಂದು. ಮದುವೆ ಬಗ್ಗೆ ಪ್ರಿಯಾಂಕಾ ತನ್ನದೇ ಆದಂತಹ ಕನಸುಗಳನ್ನು ಕಟ್ಟಿಕೊಂಡಿದ್ದಾರೆ.

ಇತ್ತೀಚೆಗೆ ತಮ್ಮ ಮದುವೆ ಬಗ್ಗೆ ಮಾತನಾಡುತ್ತಾ, ತಾನು ಆರು ಸಲ ಮದುವೆಯಾಗುತ್ತೇನೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು. ಆರು ಸಲ ಮದುವೆಯಾಗುತ್ತೇನೆ ಎಂದರೆ ಹೊರತು ಆರು ಜನರನ್ನು ಅಲ್ಲವಲ್ಲಾ? ಒಬ್ಬರನ್ನೇ ಆರು ಸಲ ಮದುವೆಯಾಗುತ್ತೇನೆ ಎಂಬುದು ಪ್ರಿಯಾಂಕಾ ಪ್ಲಾನ್.

ಇದರಲ್ಲೇನು ತಪ್ಪಿಲ್ಲ ಬಿಡಿ ಎಂದು ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಒಬ್ಬರನ್ನೇ ಆರು ತರಹ ಆರು ಸಲ ಮದುವೆಯಾಗುತ್ತಾರಂತೆ. ಇತ್ತೀಚೆಗಿನ 'ಫಿಲಂಫೇರ್' ನಿಯತಕಾಲಿಕೆಗೆ ಕೊಟ್ಟ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿದ್ದರು.

ಎಲ್ಲ ಹೆಣ್ಣುಮಕ್ಕಳ ತರಹ ನನಗೂ ಚಿಕ್ಕಂದಿನಿಂದಲೂ ಮದುವೆ ಬಗ್ಗೆ ಸಾಕಷ್ಟು ಪ್ಲಾನ್ಸ್ ಇವೆ. ವಿಭಿನ್ನ ಪದ್ಧತಿಗಳಲ್ಲಿ ಆರು ಸಲ ಮದುವೆಯಾಗಬೇಕೆಂದಿದ್ದೇನೆ...ಅಪ್ ಕೋರ್ಸ್ ಒಬ್ಬರನ್ನೇ ಎಂದುಕೊಳ್ಳಿ. ಪ್ರತಿ ಸಲವೂ ಡಿಫರೆಂಟ್ ಆಗಿ ಮದುವೆ ಮಾಡಿಕೊಳ್ಳಬೇಕು ಎಂದಿದ್ದಾರೆ.

ಮೊದಲು ನಮ್ಮ ಪೂರ್ವಿಕ ಸ್ವಂತ ಊರಾದ ಅಂಬಾಲಾದಲ್ಲಿ ನನ್ನ ಮದುವೆ ನಡೆಯಬೇಕು. ಅಲ್ಲಿ ಕುಟುಂಬ, ಫ್ರೆಂಡ್ಸ್ ಜೊತೆ ಸಂಭ್ರಮ ಆಚರಿಸಿಕೊಳ್ಳಬೇಕು. ಎರಡನೇ ಸಲ ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಪ್ ನಲ್ಲಿ ಅಂಡರ್ ವಾಟರ್ ನಲ್ಲಿ ಮದುವೆಯಾಗಬೇಕು.

ಮೂರನೇ ಸಲ ಹಾಲಿವುಡ್ ಸ್ಟೈಲ್ ನಲ್ಲಿ ಡ್ರೆಸ್ ಹಾಕಿಕೊಂಡು ಲಾಸ್ ವೆಗಾಸ್ ನಲ್ಲಿ ಮದುವೆಯಾಗಬೇಕು. ಆ ಬಳಿಕ ಸ್ವಿಟ್ಜರ್ ಲ್ಯಾಂಡ್ ನ ಸಣ್ಣ ಚರ್ಚ್ ಲಾಕಾರ್ನೋದಲ್ಲಿ, ಬಳಿಕ ನಿಖಾ ಪದ್ಧತಿಯಲ್ಲಿ ಮದುವೆಯಾಗಬೇಕೆಂದಿದ್ದೇನೆ. ನಿಖಾ ಎಂಬುದು ಸುಂದರವಾದ ಹಾಗೂ ರೊಮ್ಯಾಂಟಿಕ್ ಮದುವೆ ಎಂಬುದು ನನ್ನ ಭಾವನೆ.

ಆರನೆ ತರಹದ ಮದುವೆ ಯಾವ ರೀತಿ ಆಗಬೇಕು ಎಂಬುದನ್ನು ತನ್ನ ಭಾವಿ ಪತಿಗೆ ಬಿಟ್ಟಿದ್ದೇನೆ. ಇಷ್ಟೆಲ್ಲಾ ಹೇಳಿದ ಪ್ರಿಯಾಂಕಾ ತನ್ನ ಮದುವೆ ಯಾವಾಗ? ಮದುವೆ ಗಂಡು ಯಾರು? ಎಂಬುದನ್ನು ಮಾತ್ರ ಹೇಳಿಲ್ಲ. ಅಲ್ಲಿಗೆ ಪ್ರಿಯಾಂಕಾ ಇಷ್ಟೊತ್ತೂ ಹೇಳಿದ್ದೆಲ್ಲಾ ಬರಿ ಓಳಾ? ಗೊತ್ತಿಲ್ಲ.

More from Filmibeat

English summary
Priyanka Chopra is one of the most gorgeous and ravishing looking actress in the industry. She is also considered to be one of the most eligible bachelorette in the country. So when Priyanka was asked about her marriage plans, she shocked everyone by saying that she wanted to get married six times. Before you get any ideas, she wants those six marriages with the same man but each time in a different manner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X