Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಕೈಯಲ್ಲಿ ಕಾಣಿಸಿದ ಈ ಹಾವಿನ ರೀತಿಯ ವಾಚ್ ಬೆಲೆ ಲಕ್ಷ ಅಲ್ಲ.. ಕೋಟಿ!

ತಮ್ಮ ಫ್ಯಾಶನ್ ಸೆನ್ಸ್‌ನಿಂದ ಯಾವಾಗಲೂ ಸುದ್ದಿಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್. ಇತ್ತೀಚೆಗೆ ಜಿಯೋ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್ 2023 ರ ಉದ್ಘಾಟನಾ ಸಮಾರಂಭದಲ್ಲಿ ಸಕತ್ ಆಗಿ ಮಿಂಚಿದ್ದಾರೆ. ಈ ಚಲನಚಿತ್ರೋತ್ಸವ ಸಮಿತಿಯ ಅಧಿಕೃತ ಅಧ್ಯಕ್ಷರಾಗಿದ್ದ ಪ್ರಿಯಾಂಕಾ ಚೋಪ್ರಾ ಅವರ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಫ್ಯಾನ್ಸ್ ಪ್ರಿಯಾಂಕಾ ಚೋಪ್ರಾ ಲುಕ್‌ಗೆ, ಸೌಂದರ್ಯಕ್ಕೆ ಬೋಲ್ಡ್ ಆಗಿದ್ದರೇ, ಮಹಿಳಾ ಮಣಿಗಳು ಮಾತ್ರ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ವಾಚಿನ ಕಡೆ ಕಣ್ಣು ಬಿಟ್ಟಿದ್ದಾರೆ. ಕೈಗೆ ಹಾವಿನ ರೀತಿ ಸುತ್ತಿಕೊಂಡಿದ್ದ ವಾಚ್‌ ಮೇಲೆ ಕಣ್ಣು ಹಾಕಿದ್ದಾರೆ. ಟೋನಿ ವಾರ್ಡ್ ಡಿಸೈನ್ ಮಾಡಿದ ಬಾಡಿಕಾನ್ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಿದ್ದ ವೇಳೆ ಅವರ ಕೈಯಲ್ಲಿನ ಈ ವಾಚ್ ಜನರನ್ನು ತನ್ನತ್ತ ಆಕರ್ಷಿಸಿದೆ.

Actress Priyanka Chopra Wears rs 1.5 Crore Watch at MAMI Film Festival

ಪ್ರಿಯಾಂಕಾ ಚೋಪ್ರಾ ಧರಿಸಿದ್ದು ಕೋಟಿ ರೂಪಾಯಿಯ ವಾಚ್!

ಮಿನಿಮಮ್ ಮೇಕಪ್ ಲುಕ್ ಮತ್ತು ತುಟಿಗಳಿಗೆ ನ್ಯೂಡ್ ಲಿಪ್‌ಸ್ಟಿಕ್ ಹಾಕಿದ್ದ ಅವರು ತಮ್ಮ ಟೋನಿ ವಾರ್ಡ್ ಡಿಸೈನ್ ಮಾಡಿದ ಗೌನ್‌ಗೆ ಸೂಟ್ ಆಗುವಂತೆ ಇತ್ತ ಗಡಿಯಾರವೂ ಅಲ್ಲದ, ಬ್ರೇಸ್ಲೆಟ್ ಅಲ್ಲದ ಆಭರಣ ಧರಿಸಿದ್ದರು. ಇದು ಹಾವಿನ ರೀತಿಯಲ್ಲಿ ಕೈಗೆ ಸುತ್ತಿಕೊಂಡಿತ್ತು. ಜನರ ಕೂಡ ಅದನ್ನು ಗಮನಿಸಿದ್ದರು. ಕೊನೆಗೆ ಅದು ಬಲ್ಗಾರಿ ಬ್ರ್ಯಾಂಡ್​ನ ವಾಚ್ ಎಂಬುದು ತಿಳಿದಿದೆ.

ಆದರೆ ಈ ಬಲ್ಗಾರಿ ಬ್ರ್ಯಾಂಡ್​ನ ವಾಚ್ ಬೆಲೆ ಸಾವಿರವೋ, ಲಕ್ಷವೋ ಅಲ್ಲ. ಅದು ಕೋಟಿ ರೂಪಾಯಿ. ಹೌದು, ಚಿನ್ನ ಮತ್ತು ವಜ್ರದ ಕಸೂರಿ ಇರುವ ಈ ಬಲ್ಗಾರಿ ಸರ್ಪೆಂಟಿ ಸ್ಪಿಗಾ ಐಷಾರಾಮಿ ಕೈ ಗಡಿಯಾರದ ಬೆಲೆ ಬರೋಬ್ಬರಿ 1.5 ಕೋಟಿ ರೂಪಾಯಿ. ಪೇವ್ ಸೆಟ್ ಡೈಮಂಡ್ ಡಯಲ್ ಮತ್ತು ಡೈಮಂಡ್ ಸ್ಟಡ್ಡ್ ಡಬಲ್ ಸ್ಪೈರಲ್ ಬ್ರೇಸ್ಲೆಟ್ ಸೇರಿದಂತೆ 18 ಕ್ಯಾರಟ್ ರೋಸ್ ಗೋಲ್ಡ್ ಕೇಸ್‌ನಿಂದ ಕೈಗಡಿಯಾರವನ್ನು ಮಾಡಲಾಗಿದೆ.

Actress Priyanka Chopra Wears rs 1.5 Crore Watch at MAMI Film Festival

ಅಕ್ಟೋಬರ್ 27 ರಂದು ಅಮೆರಿಕಾದಿಂದ ಮುಂಬೈಗೆ ಬಂದಿರುವ ಪ್ರಿಯಾಂಕಾ ಚೋಪ್ರಾ ಅವರ ಏರ್‌ಪೋರ್ಟ್ ಲುಕ್‌ ಕೂಡ ಭಾರಿ ವೈರಲ್ ಆಗಿತ್ತು. ಕುತ್ತಿಗೆಯಲ್ಲಿ ಮಗಳ ಹೆಸರಿರುವ ಚೈನ್ ಧರಿಸಿ ಗಮನ ಸೆಳೆದಿದ್ದರು. ತಮ್ಮ ಮಗಳು ಮಾಲ್ಟಿ ಮೇರಿ ಹೆಸರನ್ನು ಉಲ್ಲೇಖಿಸಿದ ಸರವನ್ನು ಧರಿಸಿದ್ದರು.

ಕೋಟ್ಯಾಂತರ ರೂಪಾಯಿ ಒಡತಿ ಪ್ರಿಯಾಂಕಾ ಚೋಪ್ರಾ

ಹಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿ ಪ್ರಿಯಾಂಕಾ ಚೋಪ್ರಾ, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಒಡತಿ. 21 ವರ್ಷಗಳಿಂದ ಸಿನಿರಂಗದಲ್ಲಿ ಸಕ್ರಿಯರಾಗಿರುವ ಅವರ ಆಸ್ತಿ 625 ಕೋಟಿಗೂ ಹೆಚ್ಚು. ಚಿತ್ರವೊಂದಕ್ಕೆ 15 ರಿಂದ 25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜೊತೆಗೆ ಬ್ರಾಂಡ್ ಎಂಡಾರ್ಸ್‌ಮೆಂಟ್‌ನಿಂದ ಕೂಡ ಹಣ ಗಳಿಸುತ್ತಾರೆ.

ಇತ್ತೀಚೆಗೆ ಬಿಡುಗಡೆಯಾದ ಸಿಟಾಡೆಲ್ ವೆಬ್ ಸೀರಿಸ್‌ನ ಒಂದು ಸಂಚಿಕೆಗೆ ಅವರು 1.5 ರಿಂದ 2 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ಪರ್ಪಲ್ ಪೆಬಲ್ ಪಿಕ್ಚರ್ಸ್ ಎಂಬ ಸ್ವಂತ ಪ್ರೊಡಕ್ಷನ್ ಹೌಸ್ ಇದೆ. ಜಾಹೀರಾತುಗಳಲ್ಲಿಯೂ ಕೆಲಸ ಮಾಡುವ ಅವರು ಅಲ್ಲಿಯೂ ಕೋಟಿ ಕೋಟಿ ಗಳಿಸುತ್ತಾರೆ. ಹೀಗಾಗಿ ಈ ಐಷಾರಾಮಿ ವಸ್ತುಗಳು ಅವರಿಗೆ ಲೆಕ್ಕವೆ ಇಲ್ಲ. ಇನ್ನು, ಅಕ್ಟೋಬರ್ 27 ರಿಂದ ಪ್ರಾರಂಭವಾಗಿರುವ ಜಿಯೋ ಮಾಮಿ ಮುಂಬೈ ಚಲನಚಿತ್ರೋತ್ಸವವು ನವೆಂಬರ್ 5 ರವರೆಗೆ ನಡೆಯಲಿದೆ.

More from Filmibeat

English summary
Priyanka Chopra Wears rs 1.5 Crore Watch at MAMI.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X