ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಈ ಬಟ್ಟೆಯ ಬೆಲೆ ಎಷ್ಟು ಗೊತ್ತಾ?
ಬಾಲಿವುಡ್ ನಟಿ, ಯುಎಸ್ ಸೊಸೆ ಪ್ರಿಯಾಂಕಾ ಚೋಪ್ರಾ ಒಂದಲ್ಲೊಂದು ವಿಚಾರದ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಾರೆ. ಭಿನ್ನ ವಿಭಿನ್ನ ಕಾಸ್ಟ್ಯೂಮ್ ಗಳ ಮೂಲಕ ಅಭಿಮಾನಿಗಳ ಗಮನ ಸಳೆಯುತ್ತಿರುವ ಪ್ರಿಯಾಂಕಾ ಇತ್ತೀಚಿಗೆ ಧರಿಸಿದ್ದ ಕಾಸ್ಯ್ಟೂಮ್ ಒಂದು ವೈರಲ್ ಆಗಿದೆ. ಪದೇ ಪದೇ ಟ್ರೋಲ್ ಗಳಿಗೆ ಆಹಾರವಾಗುವ ಪ್ರಿಯಾಂಕಾ ಈ ಬಾರಿ ದುಬಾರಿ ಬೆಲೆಯ ಡ್ರೆಸ್ ಧರಿಸಿ ಸುದ್ದಿಯಾಗಿದ್ದಾರೆ.
ಇತ್ತೀಚಿಗೆ ಪ್ರಿಯಾಂಕಾ ಅಮೆರಿಕಾದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಮನಸೆಳೆದಿದ್ದರು. ನಂತರ ಇತ್ತೀಚಿಗೆ ಪ್ರಿಯಾಂಕಾ ಸಲೂನ್ ನಿಂದ ರಾತ್ರಿ ಪತಿಯ ಜೊತೆ ಹೊರಬರುವ ವೇಳೆ ಮತ್ತೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.
ಈ ವೇಳೆ ಪ್ರಿಯಾಂಕಾ ಬಿಳಿ ಮತ್ತು ಗೋಲ್ಡನ್ ಬಣ್ಣದ ಲೈನ್ ಇರುವ ಡೀಪ್ ನೆಕ್ ನ ಬಟ್ಟೆಯನ್ನು ಧರಿಸಿದ್ದರು. ಈ ಡ್ರೆಸ್ ಮೇಲೆ ಪ್ರಿಯಾಂಕಾ ಕಪ್ಪು ಬಣ್ಣದ ಕೋಟ್ ಅನ್ನು ಧರಿಸಿದ್ದಾರೆ. ಈ ಡ್ರೆಸ್ ನಲ್ಲಿ ಪ್ರಿಯಾಂಕಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಚ್ಚರಿ ಅಂದರೆ ಈ ಬಟ್ಟೆಯ ಬೆಲೆ ಬರೋಬ್ಬರಿ 1.2 ಲಕ್ಷ ರೂಪಾಯಿಯಂತೆ. ರಾತ್ರಿ ಹೊರಡುವ ವೇಳೆಯೂ ಪ್ರಿಯಾಂಕಾ ದುಬಾರಿ ಡ್ರೆಸ್ ಧರಿಸಿ ಸಲೂನ್ ನಿಂದ ಬರಬೇಕಾ ಎಂದು ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಆ ಬಟ್ಟೆಯಲ್ಲಿ ಅಂತಹ ವಿಶೇಷತೆ ಏನಿದೆ ಎಂದು ಕೇಳುತ್ತಿದ್ದಾರೆ.

ಮದುವೆಯ ನಂತರ ಪ್ರಿಯಾಂಕಾ ವೈಟ್ ಟೈಗರ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ ಕುಮಾರ್ ರಾವ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮದುವೆಯ ನಂತರ ಪ್ರಿಯಾಂಕಾ ಒಪ್ಪಿಕೊಂಡಿರುವ ಸಿನಿಮಾವಿದು.


Click it and Unblock the Notifications











