ಕೊಡಗು ಜನರ ಜೊತೆ ನಿಂತ ಪ್ರಿಯಾಂಕಾ ಉಪೇಂದ್ರ
Recommended Video

ಪ್ರವಾಹದಿಂದ ಕಷ್ಟದ ದಿನಗಳನ್ನು ಎದುರಿಸುತ್ತಿರುವ ಕೊಡಗು ಜನತೆಯನ್ನು ಇಡೀ ಕರುನಾಡು ಕಾಪಾಡುತ್ತಿದೆ. ಸಿನಿಮಾ ನಟ, ನಟಿಯರು ಸಹ ತಾವೇ ಕೊಡಗುಗೆ ಭೇಟಿ ನೀಡಿ ಅಲ್ಲಿನ ಕಷ್ಟಗಳನ್ನು ಆಲಿಸುತ್ತಿದ್ದಾರೆ.
ಸದ್ಯ ಪ್ರಿಯಾಂಕಾ ಉಪೇಂದ್ರ ಕೂಡ ಕೊಡಗುಗೆ ಹೋಗಿದ್ದಾರೆ. ಕೊಡಗಿನ ಅನೇಕ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ, ಅವರಿಗೆ ಧೈರ್ಯ ತುಂಬಿದ್ದಾರೆ. ಜೊತೆಗೆ ಉಪ್ಪಿ ಫೊಂಡೆಷನ್ ಅಡಿಯಲ್ಲಿ ಆ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

ಕೊಡಗಿನ ಸದ್ಯದ ಪರಿಸ್ಥಿತಿಯ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಿಯಾಂಕಾ ವಿವರ ನೀಡಿದ್ದಾರೆ. "ಇಲ್ಲಿನ ಜನರು ಮನೆ, ಆಸ್ತಿ, ಕೆಲಸ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅವರಿಗೆ ನಿಮ್ಮ ಸಹಾಯ ಬೇಕಿದೆ. ಮತ್ತೆ ಅವರ ಹೊಸ ಜೀವನ ಶುರು ಆಗಲು ಎಲ್ಲರೂ ಸಹಾಯ ಮಾಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಹಿಂದೆ ಕೊಡಗಿನ ಸ್ಥಿತಿಯ ಬಗ್ಗೆ ಮಾತಾನಾಡಿದ್ದ ಉಪೇಂದ್ರ "ಈ ರೀತಿಯ ಪರಿಸ್ಥಿತಿ ಬಂದಾಗ ಸರ್ಕಾರ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಅವರಿಗೆ ಮನೆ ಮಾಡಿ ಅವರ ಜೀವನ ಮತ್ತೆ ಸರಿಯಾಗುವ ತನಕ ಸರ್ಕಾರ ಅವರ ಜೊತೆಗೆ ಇರಬೇಕು. ನನ್ನ ಪ್ರಕಾರ ಪ್ರಕೃತಿ ವಿಕೋಪದ ಬಗ್ಗೆಯೇ ಒಬ್ಬ ಸಚಿವ ಇರಬೇಕು. ಅವರು ಯಾವಾಗಲೂ ಸರ್ವ ಸಿದ್ಧರಾಗಿರಬೇಕು." ಎಂಬ ಸಲಹೆ ನೀಡಿದ್ದರು.


Click it and Unblock the Notifications











