ಕೋವಿಡ್ ಲಸಿಕೆ ಪಡೆದ ನಟಿ ರಾಧಿಕಾ ಆಪ್ಟೆ
ಕೊರೊನಾ ಭೀಕರ ಪರಿಸ್ಥಿತಿಯ ನಡುವೆಯೂ ಅನೇಕರು ಲಸಿಕೆ ಪಡೆಯುತ್ತಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೆ ಸಿನಿ ಸೆಲೆಬ್ರಿಟಿಗಳು ಸಹ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಎಲ್ಲರೂ ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.
ಈಗಾಗಲೇ ಅನೇಕ ಸಿನಿ ಸೆಲೆಬ್ರಿಟಿಗಳು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಸಂಜಯ್ ದತ್, ಮೋಹನ್ ಲಾಲ್, ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಲಸಿಕೆ ಪಡೆದಿದ್ದಾರೆ.
ಇದೀಗ ಬಹುಭಾಷಾ ನಟಿ ರಾದಿಕಾ ಆಪ್ಟೆ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ರಾಧಿಕಾ ಆಪ್ಟೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಅಂತಿಮವಾಗಿ ನಾನು ನನ್ನ ಕೆಲಸ ಮಾಡಿದ್ದೇನೆ, ಲಸಿಕೆ ಪಡೆದೆ ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳು ರಾಧಿಕಾ ಪೋಸ್ಟ್ ಗ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ರಾಧಿಕಾ ತನ್ನ ಬೆತ್ತಲೆ ವಿಡಿಯೋ ವೈರಲ್ ಆದ ಬಗ್ಗೆ ಪ್ರತಿಕ್ರಿಯೆ ನೀಡಿ ಸುದ್ದಿಯಾಗಿದ್ದರು. ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಾಧಿಕಾ ಆ ಸಮಯದಲ್ಲಿ ತಾನು ಅನುಭವಿಸಿದ ಹಿಂಸೆಯನ್ನು ಬಹಿರಂಗ ಪಡಿದ್ದರು.
'ನನ್ನ ನಗ್ನ ವಿಡಿಯೋ ಕ್ಲಿಪ್ ಲೀಕ್ ಆದಾಗ ನಾನು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದೆ. ಆಗ ನಾನು ಕ್ಲೀನ್ ಶೆವೆನ್ ಚಿತ್ರದಲ್ಲಿ ನಟಿಸುತ್ತಿದ್ದೆ. ಅದು ನನಗೆ ತುಂಬಾ ಕೆಟ್ಟದಾಗಿ ಪರಿಣಾಮ ಬೀರಿತು. ನಾಲ್ಕು ದಿನಗಳು ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ನನ್ನ ಕಾರು ಚಾಲಕ, ಬಾಡಿಗಾರ್ಡ್ ಮತ್ತು ನನ್ನ ಸ್ಟೈಲಿಸ್ಟ್ ವಿಡಿಯೋವನ್ನು ನೋಡಿ ನನ್ನನ್ನು ಗುರುತಿಸುತ್ತಿದ್ದರು' ಎಂದು ಹಳಿದ್ದರು.


Click it and Unblock the Notifications











