ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಬಾಲಿವುಡ್ ನ ಬೋಲ್ಡ್ ನಟಿ?

ಬಾಲಿವುಡ್ ನ ಖ್ಯಾತ ನಟಿ ರಾಧಿಕಾ ಆಪ್ಟೆ ಹಾಲಿವುಡ್ ಕಡೆ ಮುಖ ಮಾಡುವ ಸಾಧ್ಯತೆ ಇದೆ. ಬೋಲ್ಡ್ ಅಂಡ್ ಟ್ಯಾಲೆಂಟೆಡ್ ನಟಿ ರಾಧಿಕಾ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ವೆಬ್ ಸಿರೀಸ್ ಎರಡು ರಂಗದಲ್ಲಿ ಖ್ಯಾತಿಗಳಿಸಿರುವ ರಾಧಿಕಾ ಆಪ್ಟೆ ಹಾಲಿವುಡ್ ಕಡೆಯಿಂದ ದೊಡ್ಡ ಆಫರ್ ಬಂದಿದೆಯಂತೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಾಧಿಕಾ ಹಾಲಿವುಡ್ ನ ಬಾಂಡ್ ಸಿನಿಮಾಗೆ ಆಡಿಷನ್ ನೀಡುವಂತೆ ಕರೆ ಬಂದಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಜೇಮ್ಸ್ ಬಾಂಡ್ ನ ಹೊಸ ಆವೃತ್ತಿ 'ನೋ ಟೈಂ ಟು ಡೈ' ಚಿತ್ರದಲ್ಲಿ ಅಭಿನಯಿಸಲು ಮತ್ತು ಸ್ಟಾರ್ ವಾರ್ ಚಿತ್ರಗಳಿಗಾಗಿ ಆಡಿಷನ್ ನೀಡುವಂತೆ ಅವರೆ ಕೇಳಿಕೊಂಡಿದ್ದಾರಂತೆ.

ಈಗಾಗಲೆ ರಾಧಿಕಾ ಮನೆಯಲ್ಲಿಯೆ ರೆಕಾರ್ಡ್ ಮಾಡಿ ಕಳುಹಿಸಿದ್ದಾರಂತೆ. ಬಾಂಡ್ ಸಿನಿಮಾಗೆ ರಾಧಿಕಾ ಅಂತಹ ನಟಿಯರನ್ನು ಹುಡುಕುತ್ತಿದ್ದಾರಂತೆ. "ಒಂದು ನಿರ್ದಿಷ್ಟ ನಟರಿಗೆ ಮಾತ್ರ ಸೀಮಿತಗೊಳಿಸದೆ, ನನಗೂ ಆಡಿಷನ್ ಕಳುಹಿಸಲು ಹೇಳಿದ್ದು ಒಳ್ಳೆಯ ವಿಚಾರ" ಎಂದು ರಾಧಿಕಾ ಹೇಳಿಕೊಂಡಿದ್ದಾರೆ.

Actress Radhika Apte Got Audition Calls For The New James Bond Film

ರಾಧಿಕಾ ಆಪ್ಟೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದ್ದು 'ಅಂಧಾದುನ್' ಮತ್ತು 'ಪ್ಯಾಡ್ ಮ್ಯಾನ್' ಅಂತಹ ಪ್ರಸಿದ್ಧ ಚಿತ್ರಗಳು. ಈ ಎರಡು ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ. 34 ವರ್ಷದ ಈ ನಟಿ ಸದ್ಯ 'ರಾತ್ ಅಕೆಲಿ ಹೈ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ಮಿಂಚಿರುವ ರಾಧಿಕಾಗೆ, ಹಾಲಿವುಡ್ ನ ಬಾಂಡ್ ಸಿನಿಮಾದಲ್ಲಿ ಮಿಂಚುವ ಅವಕಾಶ ಸಿಗುತ್ತಾ ಕಾದುನೋಡಬೇಕು.

More from Filmibeat

English summary
Bollywood bold and talented actress Radhika Apte got audition calls for the new James Bond film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X