For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಆಪ್ಟೆ ಜೊತೆ ಲಿಫ್ಟ್ ನಲ್ಲಿ ಅಸಭ್ಯವಾಗಿ ವರ್ತಿಸಿದ ನಟ

  |

  ರಾಧಿಕಾ ಆಪ್ಟೆ ಬೋಲ್ಡ್ ಆಗಿ ನಟಿಸುವುದು ಮಾತ್ರವಲ್ಲ, ಬೋಲ್ಡ್ ಆಗಿ ಮಾತನಾಡುವುದರಲ್ಲೂ ಎತ್ತಿದ ಕೈ. ಯಾರಿಗೂ ಭಡದೆ, ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ತನಗೆ ಅನಿಸಿದ್ದನ್ನ ನೇರವಾಗಿ ಹೇಳಿಬಿಡುತ್ತಾರೆ ರಾಧಿಕಾ.

  ಇಂತಹ ರಾಧಿಕಾ ಈಗಾಗಲೇ ಹಲವು ಭಯಾನಕ, ಕ್ರೂರ, ಕಿರುಕುಳದ ಘಟನೆಗಳನ್ನ ಬಹಿರಂಗಪಡಿಸಿದ್ದಾರೆ. ಇಂಡಸ್ಟ್ರಿಯಲ್ಲಿ 'ಕಾಸ್ಟಿಂಗ್ ಕೌಚ್' ಇದೆ ಎಂದು ಹೇಳಿ, ಕೆಲವರ ಕೆಟ್ಟ ಮುಖವಾಡಗಳನ್ನ ಬಿಚ್ಚಿಟ್ಟಿದ್ದರು.

  ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ.!ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ.!

  ಇಂತಹ ನಟಿ ಈಗ ಮತ್ತೊಂದು ಘಟನೆ ಬಗ್ಗೆ ಬಹಿರಂಗಪಡಿಸಿದ್ದಾರೆ. ಇತ್ತೀಚಿಗೆ ನಡೆದ ತಾಜಾ ಘಟನೆಯೊಂದನ್ನ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ತಾನು ಅಭಿನಯಿಸುತ್ತಿದ್ದ ಚಿತ್ರದ ಸಹನಟನಿಂದಲೇ ಅಸಭ್ಯ ವರ್ತನೆ ಎದುರಿಸಿದ ಸನ್ನಿವೇಶವನ್ನ ಹೇಳಿಕೊಂಡಿದ್ದಾರೆ. ಹೌದು, ರಾಧಿಕಾ ಆಪ್ಟೆ ಜೊತೆ ಸಹನಟನೊಬ್ಬ ಲಿಫ್ಟ್ ನಲ್ಲಿ ಅಸಭ್ಯವಾಗಿ ವರ್ತಿಸಿದ್ದನಂತೆ. ಅಷ್ಟಕ್ಕೂ ಯಾರು ಆ ನಟ.? ಯಾವಾಗ ನಡೆಯಿತು ಈ ಘಟನೆ.? ಮುಂದೆ ಓದಿ.....

  ಶೂಟಿಂಗ್ ಮುಗಿಸಿ ಬರುತ್ತಿದ್ದೆ....

  ಶೂಟಿಂಗ್ ಮುಗಿಸಿ ಬರುತ್ತಿದ್ದೆ....

  'ಸಿನಿಮಾವೊಂದರ ಶೂಟಿಂಗ್ ಮಾಡುವಾಗ ನನಗೆ ಸೊಂಟು ನೋವು ಕಾಣಿಸಿಕೊಂಡಿತು. ಹೇಗೋ ಕಷ್ಟಪಟ್ಟು ಆ ಸೀನ್ ಮುಗಿಸಿದೆ. ದಿನದ ಸಂಪೂರ್ಣ ಚಿತ್ರೀಕರಣ ಮುಗಿಸಿ ರೂಂಮಿಗೆ ಹೊರಟೆ. ಲಿಫ್ಟ್ ನಲ್ಲಿ ರೂಂಮಿಗೆ ಹೋಗುವಾಗ, ನನ್ನ ಜೊತೆಯಲ್ಲಿ ಚಿತ್ರದ ಸಹನಟನೊಬ್ಬ ಬಂದ'.

  ಮತ್ತೆ ಬಿಚ್ಚಮ್ಮಳಾಗಿ ಕಾಣಿಸಿಕೊಂಡು ಸುದ್ದಿಯಾದ ರಾಧಿಕಾ ಆಪ್ಟೆಮತ್ತೆ ಬಿಚ್ಚಮ್ಮಳಾಗಿ ಕಾಣಿಸಿಕೊಂಡು ಸುದ್ದಿಯಾದ ರಾಧಿಕಾ ಆಪ್ಟೆ

  ನನಗೆ ಪರಿಚಯವೇ ಇಲ್ಲ

  ನನಗೆ ಪರಿಚಯವೇ ಇಲ್ಲ

  ನಾನು ನಟಿಸುತ್ತಿದ್ದ ಚಿತ್ರದಲ್ಲಿ ಆ ನಟ ಕೂಡ ನಟಿಸುತ್ತಿದ್ದ ಎನ್ನುವುದು ಬಿಟ್ಟರೇ, ನನಗೆ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ಇದುವರೆಗೂ ಮಾತನಾಡಿರಲಿಲ್ಲ. ಪರಿಚಯ ಕೂಡ ಇರಲಿಲ್ಲ. ಆದ್ರೆ, ಲಿಫ್ಟ್ ನಲ್ಲಿ ಆತ ನಡೆದುಕೊಂಡ ರೀತಿ ಮಾತ್ರ ನನಗೆ ಕಿರಿಕಿರಿ ಉಂಟು ಮಾಡಿತು.

  'ಕ್ಯಾಸ್ಟಿಂಗ್ ಕೌಚ್' ಭೂತ ರಾಧಿಕಾ ಆಪ್ಟೆ ಅವರನ್ನೂ ಬಿಟ್ಟಿಲ್ಲಾ'ಕ್ಯಾಸ್ಟಿಂಗ್ ಕೌಚ್' ಭೂತ ರಾಧಿಕಾ ಆಪ್ಟೆ ಅವರನ್ನೂ ಬಿಟ್ಟಿಲ್ಲಾ

  ಮಧ್ಯರಾತ್ರಿ ಸಹಾಯ ಮಾಡ್ತೀನಿ...

  ಮಧ್ಯರಾತ್ರಿ ಸಹಾಯ ಮಾಡ್ತೀನಿ...

  ನಿನಗೆ ಏನಾದರೂ ಸಹಾಯ ಬೇಕು ಅಂದ್ರೆ ನನ್ನ ಕೇಳು. ಮಧ್ಯರಾತ್ರಿ ಆದರೂ ಪರವಾಗಿಲ್ಲ ಬಂದು ನಿನಗೆ ಸೊಂಟ ಮಸಾಜ್ ಮಾಡ್ತೀನಿ ಎಂದ ಎಂದು ರಾಧಿಕಾ ಹೇಳಿಕೊಂಡಿದ್ದಾರೆ. ನಂತರ ಈ ವಿಷ್ಯವನ್ನ ಚಿತ್ರದ ಯುನಿಟ್ ನಲ್ಲಿದ್ದ ಕೆಲವರ ಜೊತೆ ರಾಧಿಕಾ ಹೇಳಿದರಂತೆ.

  ಟ್ರೋಲ್ ಮಾಡಿದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ರಾಧಿಕಾ ಆಪ್ಟೆಟ್ರೋಲ್ ಮಾಡಿದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ರಾಧಿಕಾ ಆಪ್ಟೆ

  ನಂತರ ಕ್ಷಮೆ ಕೇಳಿದ

  ನಂತರ ಕ್ಷಮೆ ಕೇಳಿದ

  ಯುನಿಟ್ ನಲ್ಲಿದ್ದ ಕೆಲವು ದೊಡ್ಡವರು ಆತನನ್ನ ಕರೆದು ಮಾತನಾಡಿದರು. ನಂತರ ಅವನು ನನ್ನ ಬಳಿ ಕ್ಷಮೆ ಕೇಳಿದ. ಆದ್ರೆ, ನನ್ನ ಬಳಿ ಆತ ಮಾತನಾಡಿದ್ದು ಎಷ್ಟು ಅಸಭ್ಯವಾಗಿತ್ತು ಅಂತ ಅವನಿಗೆ ಅರ್ಥವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ರಾಧಿಕಾ ಆಪ್ಟೆ ತಮ್ಮ ನೋವು ತೋಡಿಕೊಂಡಿದ್ದಾರೆ.

  ಕಾಲಿಗೆ ಕಚಗುಳಿ ಕೊಟ್ಟ ದಕ್ಷಿಣದ ಖ್ಯಾತ ನಟನ ಕಪಾಳಕ್ಕೆ ಹೊಡೆದ ರಾಧಿಕಾ!ಕಾಲಿಗೆ ಕಚಗುಳಿ ಕೊಟ್ಟ ದಕ್ಷಿಣದ ಖ್ಯಾತ ನಟನ ಕಪಾಳಕ್ಕೆ ಹೊಡೆದ ರಾಧಿಕಾ!

  ರಾಧಿಕಾ ಆಪ್ಟೆ ಸಿನಿಮಾಗಳು

  ರಾಧಿಕಾ ಆಪ್ಟೆ ಸಿನಿಮಾಗಳು

  ಬಾಲಿವುಡ್ ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಆಪ್ಟೆ, ಸೌತ್ ಸಿನಿಮಾರಂಗದಲ್ಲೂ ಮೋಡಿ ಮಾಡಿದ್ದಾರೆ. ತೆಲುಗಿನಲ್ಲಿ 'ರಕ್ತ ಚರಿತ್ರ', 'ಲೆಜೆಂಡ್', 'ಧೋನಿ', ತಮಿಳಿನಲ್ಲಿ 'ಧೋನಿ', 'ಆಲ್ ಇನ್ ಆಲ್ ಅಳಗು ರಾಜಾ', 'ವೇಟ್ರಿ ಸೆಲ್ವನ್' ಹಾಗೂ 'ಕಬಾಲಿ' ಸಿನಿಮಾಗಳಲ್ಲಿ ರಾಧಿಕಾ ಆಪ್ಟೆ ನಟಿಸಿದ್ದಾರೆ.

  English summary
  Actor Radhika Apte says to bring #MeToo movement to Indian entertainment industry the artistes need to have a good support system.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X