For Quick Alerts
  ALLOW NOTIFICATIONS  
  For Daily Alerts

  ವಿವಾಹದಲ್ಲಿ ನಂಬಿಕೆ ಇಲ್ಲದಿದ್ದರೂ ಮದುವೆಯಾದ ಕಾರಣ ಬಹಿರಂಗ ಪಡಿಸಿದ ನಟಿ ರಾಧಿಕಾ

  |

  ಬಾಲಿವುಡ್ ನ ಖ್ಯಾತ ನಟಿ ರಾಧಿಕಾ ಆಪ್ಟೆ ಮದುವೆಯಾದ ಹಿಂದಿನ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. ಮದುವೆಯಲ್ಲಿ ನಂಬಿಕೆ ಇಲ್ಲದಿದ್ದರೂ ಮದುವೆಯಾಗಬೇಕಾಯಿತು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

  ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ರಾಧಿಕಾ ಆಪ್ಟೆ ಕೂಡ ಒಬ್ಬರು. ಸಿನಿಮಾ ಮತ್ತು ವೆಬ್ ಸೀರಿಸ್ ಲೋಕದಲ್ಲಿ ಮಿಂಚುತ್ತಿರುವ ರಾಧಿಕಾ ಇತ್ತೀಚಿಗೆ ಮದುವೆ ವಿಚಾರ ಬಹಿರಂಗ ಪಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು, ರಾಧಿಕಾಗೆ ವಿವಾಹ ಮತ್ತು ಸಂಪ್ರದಾಯದಲ್ಲಿ ಯಾವುದೇ ವಿಶ್ವಾಸವಿಲ್ಲವಂತೆ. ಆದರೆ ವೀಸಾ ಪಡೆಯುವುದು ಸುಲಭ ಎನ್ನುವ ಕಾರಣಕ್ಕೆ ಮದುವೆಯಾಗಿದ್ದಾರಂತೆ.

  ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಬಾಲಿವುಡ್ ನ ಬೋಲ್ಡ್ ನಟಿ?ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಬಾಲಿವುಡ್ ನ ಬೋಲ್ಡ್ ನಟಿ?

  ಅಂದ್ಹಾಗೆ ರಾಧಿಕಾ ಆಪ್ಟೆ, 2012ರಲ್ಲಿ ಬ್ರಿಟಿಷ್ ಗಾಯಕ ಬೆನೆಡಿಕ್ಟ್ ಟೇಲರ್ ನನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ರಾಧಿಕಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

  ರಾಧಿಕಾ ಆಪ್ಟೆ ಯಾವಾಗ ಮದುವೆಯಾದರು? ಎನ್ನುವ ಪ್ರಶ್ನೆಗೆ ರಾಧಿಕಾ, "ನೀವು ಮದುವೆಯಾದಾಗ ವೀಸಾ ಪಡೆಯುವುದು ಸುಲಭ ಎಂದು ತಿಳಿದಾಗ. ಯಾವುದೇ ಗಡಿ ಇರಬಾರದು ಎಂದು ನಾನು ಭಾವಿಸುತ್ತೇನೆ. ನನಗೆ ಮದುವೆಯಲ್ಲಿ ನಂಬಿಕೆ ಇಲ್ಲ. ಆದರೆ ನಾನು ಮತ್ತು ಬೆನೆಡಿಕ್ಟ್ ಒಟ್ಟಿಗೆ ವಾಸಿಸಲು ಬಯಸಿದ್ದವು, ಆಗ ನಿಜವಾಗಿಯೂ ವೀಸಾ ಸಮಸ್ಯೆಯಾಯಿತು. ಹಾಗಾಗಿ ನಾನು ಮದುವೆಯಾದೆ. ವೀಸಾ ಸುಲಭವಾಗಿ ಸಿಕ್ಕಿತು" ಎಂದಿದ್ದಾರೆ.

  ರಾಧಿಕಾ ಮತ್ತು ಬೆನೆಡಿಕ್ಟ್ ಇಬ್ಬರೂ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. 2012ರಲ್ಲಿ ಈ ಜೋಡಿ ವಿವಾಹಬಂಧನಕ್ಕೆ ಒಳಗಾಗಿದೆ. ರಾಧಿಕಾ ದಂಪತಿ ಸದ್ಯ ಲಂಡನ್ ನಲ್ಲಿ ನೆಲೆಸಿದ್ದಾರೆ. ಕೆಲಸದ ನಿಮಿತ್ತ ರಾಧಿಕಾ ಹೆಚ್ಚಾಗಿ ಭಾರತದಲ್ಲೇ ಕಾಲಕಳೆಯುತ್ತಿದ್ದರು. ಆದರೀಗ ಲಾಕ್ ಡೌನ್ ಬಳಿಕ ರಾಧಿಕಾ ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ.

  ಕತ್ತಿ ಹಿಡಿದು ಕುದುರೆ ಏರಿದ ಶ್ರೀಲೀಲಾ ಲುಕ್ ನೋಡಿ ಎಲ್ಲರೂ ಶಾಕ್ | SreeLeela Photoshoot | Filmibeat Kannada

  ಸಿನಿಮಾ ವಿಚಾರಕ್ಕೆ ಬರುವುದಾದರೆ ರಾಧಿಕಾ ಹೆಚ್ಚಾಗಿ ಒಟಿಟಿಯಲ್ಲಿ ಮಿಂಚುತ್ತಿದ್ದಾರೆ. ರಾಧಿಕಾ ಕೊನೆಯ ಬಾರಿಗೆ 'ರಾತ್ ಅಕೇಲಿ ಹೈ' ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನವಾಜುದ್ದೀನ್ ಸಿದ್ಕಿಕಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

  English summary
  Radhika Apte reveals why she married to Benedict Taylor. She says got married for easier to get a visa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X