ಬಾಲಿವುಡ್ ನಿರ್ಮಾಪಕನ ಜೊತೆ ಮದುವೆಗೆ ಸಿದ್ಧರಾದ 'ಗಿಲ್ಲಿ' ನಟಿ ರಾಕುಲ್ ಪ್ರೀತ್ ಸಿಂಗ್
ಕನ್ನಡದ 'ಗಿಲ್ಲಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ಈಗ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚುತ್ತಿರುವ ನಟಿ ರಾಕುಲ್ ಪ್ರೀತ್ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಮತ್ತು ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಟಿ ಸಿದ್ಧರಾಗಿದ್ದಾರೆ.
ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ರಾಕುಲ್ ಪ್ರೀತ್ ಸಿಂಗ್ ಮತ್ತು ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮುದ್ದಾದ ಜೋಡಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

'ಗಿಲ್ಲಿ' ಬೆಡಗಿ ರಾಕುಲ್ ಪ್ರೀತ್ ಸಿಂಗ್ ಮದುವೆ
ಥಾಯ್ಲೆಂಡ್‌ನಲ್ಲಿ 2024 ರ ಹೊಸ ವರ್ಷವನ್ನು ಸ್ನೇಹಿತರೊಂದಿಗೆ ಆಚರಿಸಿದ್ದ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ, ಫೆಬ್ರವರಿ 22 ರಂದು ಗೋವಾದಲ್ಲಿ ಮದುವೆಯಾಗುತ್ತಿದ್ದಾರೆ. ಅವರು ಈ ವಿಷಯವನ್ನು ತುಂಬಾ ಅನ್ಯೋನ್ಯವಾಗಿ ಇಟ್ಟುಕೊಳ್ಳಲು ಬಯಸುತ್ತಿರುವುದರಿಂದ ಅವರು ಅದರ ಬಗ್ಗೆ ಮೌನವಾಗಿದ್ದಾರೆ. ಮದುವೆಯನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುತ್ತಾರೆ" ಎಂದು ಮೂಲಗಳು ಹೇಳುತ್ತವೆ.
ಮದುವೆಯ ಸಂಭ್ರಮದಲ್ಲಿ ಭಾಗಿಯಾಗುವ ಮೊದಲು ಇಬ್ಬರು ವೆಕೇಷನ್ ಏಂಜಾಯ್ ಮಾಡುತ್ತಿದ್ದಾರೆ. "ಜಾಕಿ ಭಗ್ನಾನಿ ಪ್ರಸ್ತುತ ತಮ್ಮ ಬ್ಯಾಚುಲರ್ ಪಾರ್ಟಿಗಾಗಿ ಬ್ಯಾಂಕಾಕ್ (ಥೈಲ್ಯಾಂಡ್) ನಲ್ಲಿದ್ದಾರೆ. ವಾಸ್ತವವಾಗಿ, ರಾಕುಲ್ ಪ್ರೀತ್ ಸಿಂಗ್ ಕೂಡ ಥೈಲ್ಯಾಂಡ್‌ನಲ್ಲಿದ್ದಾರೆ. ಇಬ್ಬರು ತಮ್ಮ ವೆಕೇಷನ್ ಆನಂದಿಸುತ್ತಿದ್ದಾರೆ" ಎಂದು ಮೂಲವೊಂದು ವಿವರಿಸಿದೆ.
ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ
ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ನಟ, ನಿರ್ಮಾಕಪ ಜಾಕಿ ಭಗ್ನಾನಿ ಅಕ್ಟೋಬರ್ 2021 ರಲ್ಲಿ ಇಬ್ಬರ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದರು. ರಾಕುಲ್ ಪ್ರೀತ್ ಸಿಂಗ್ ಅವರ ಜನ್ಮದಿನದಂದು, ಜಾಕಿ ಭಗ್ನಾನಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಪ್ರೀತಿಯ ಗೆಳತಿಯೊಂದಿಗಿನ ರೋಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿದ್ದರು. ಇಬ್ಬರು ಕೈ ಕೈ ಹಿಡಿದು ಮುದ್ದಾಗಿ ಕಾಣಿಸುತ್ತಿದ್ದರು.

ಅಂದಿನಿಂದ ಇಬ್ಬರು ಪರಸ್ಪರ ಹಲವಾರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಕೈ ಕೈ ಹಿಡಿದು ಒಟ್ಟಿಗೆ ಅನೇಕ ಕಾರ್ಯಕ್ರಮಗಳು ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ, ನಟಿ ರಾಕುಲ್ ತಮ್ಮ ಗೆಳೆಯ ನಿರ್ಮಾಪಕ, ನಿರ್ದೇಶಕ, ನಟ ಜಾಕಿ ಭಗ್ನಾನಿ ಅವರ 39 ನೇ ಹುಟ್ಟುಹಬ್ಬದಂದು ಸಿಹಿಯಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ರಾಕುಲ್ ಪ್ರೀತ್ ಸಿಂಗ್
ರಾಕುಲ್ ಪ್ರೀತ್ ಸಿಂಗ್ ಸದ್ಯ ನಟ ಕಮಲ್ ಹಾಸನ್ ಜೊತೆಗೆ ಇಂಡಿಯನ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಬಾಬಿ ಸಿಂಹ ಮತ್ತು ಪ್ರಿಯಾ ಭವಾನಿ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಂಡಿಯನ್ ಸಿನಿಮಾದ ಮೊದಲ ಭಾಗವು 1996 ರಲ್ಲಿ ಬಿಡುಗಡೆಯಾಗಿತ್ತು.
ಮತ್ತೊಂದೆಡೆ, ಜಾಕಿ ಭಗ್ನಾನಿ ತನ್ನ ಮುಂದಿನ ನಿರ್ಮಾಣದ 'ಬಡೇ ಮಿಯಾನ್ ಚೋಟೆ ಮಿಯಾನ್' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಜಾಫರ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ , ಸೋನಾಕ್ಷಿ ಸಿನ್ಹಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ 2024 ರ ಈದ್ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.


Click it and Unblock the Notifications











