ಕೊರೆವ ಚಳಿಯಲ್ಲಿ.. ಮಂಜುಗಡ್ಡೆ ನೀರಲ್ಲಿ.. ಟೂ ಪೀಸ್‌ನಲ್ಲಿ ರಕುಲ್ ಸಾಹಸ
ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಕ್ರೇಜ್ ಕಮ್ಮಿ ಆಗಿದೆ. ಕನ್ನಡದ 'ಗಿಲ್ಲಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ದೆಹಲಿ ಚೆಲುವೆ ಮುಂದೆ ಬಾಲಿವುಡ್‌ನಲ್ಲೂ ಮಿಂಚಿದರು. ಆದರೆ ಆರಕ್ಕೇರದ ಮೂರಕ್ಕಿಳಿದ ನಟಿಯಾಗಿಯೇ ಉಳಿದುಬಿಟ್ಟರು. ಸ್ಕಿನ್ ಶೋಗೆ ಸೈ ಎಂದರೂ ಪ್ರಯೋಜನವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಈ ಚೆಲುವೆ ಹೊಸದೊಂದು ಸಾಹಸ ಮಾಡಿದ್ದಾರೆ.
ಬೆಂಗಳೂರು ಚಳಿಗೆ ಕೆಲವರು ಸ್ವೆಟರ್, ಜರ್ಕಿನ್ ಹಾಕಿಕೊಳ್ಳುತ್ತಾರೆ. ಇನ್ನು ಹಿಮ ಪರ್ವತಗಳಿಗೆ ಹೋದರಂತೂ ದಪ್ಪನೆಯ ಸ್ವೆಟರ್, ಜರ್ಕಿನ್ ಹಾಕಿಕೊಳ್ಳಲೇಬೇಕು. ಆದರೆ ನಟಿ ರಕುಲ್ ಪ್ರೀತ್ ಸಿಂಗ್ ಮೈನಸ್ 15 ಡಿಗ್ರಿ ಐಸ್ ನೀರಲ್ಲಿ ಬಿಕಿನಿ ತೊಟ್ಟು ಮಿಂದೆದ್ದಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಟೂ ಪೀಸ್ ಬಿಕಿನಿಯಲ್ಲಿ ರಕುಲ್ ಅಂದ ಚೆಂದ ನೋಡಿದ ಪಡ್ಡೆ ಹುಡುಗರಂತೂ ಫಿದಾ ಆಗೋಗಿದ್ದಾರೆ.

ಅಂದಹಾಗೆ ಕ್ರಿಯಾ ಥೆರಪಿ ಭಾಗವಾಗಿ ರಕುಲ್ ಈ ರೀತಿ ಮಂಜುಗಡ್ಡೆ ನೀರಿನಲ್ಲಿ ಮಿಂದೆದ್ದಿದ್ದಾರೆ. ಕಟ್ಟಿಗೆ ಮನೆಯಿಂದ ಬಿಕಿನಿಯಲ್ಲಿ ನಡೆದುಕೊಂಡು ಬಂದ ರಕುಲ್ ಅಲ್ಲಿ ಗಟ್ಟಿಯಾದ ಮಂಜಿನ ನಡುವೆ ಇರುವ ನೀರಿನ ಕೊಳದಲ್ಲಿ ಕೆಲ ಸೆಕೆಂಡ್ ಇದ್ದು ನಂತರ ನಗುತ್ತಲೇ ಅಲ್ಲಿಂದ ಎದ್ದು ಹೊರ ಬಂದಿದ್ದಾರೆ. ರಕುಲ್ ಶೇರ್ ಮಾಡಿರುವ ಈ ವೀಡಿಯೊವನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಂತಹ ಚಳಿಯಲ್ಲಿ ಅಷ್ಟು ತಣ್ಣನೆಯ ನೀರಿನಲ್ಲಿ ಬಿಕಿನಿ ತೊಟ್ಟು ಐಸ್ ಬಾತ್ ಮಾಡುವುದು ನಿಜವಾಗಿಯೂ ಸಾಹಸವೇ ಸರಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ನಟಿ ಸಮಂತಾ ಕೂಡ ಮಯೋಸೈಟಿಸ್ ಚಿಕಿತ್ಸೆಯ ಭಾಗವಾಗಿ ಇಂತದ್ದೇ ಥೆರಪಿ ಪಡೆದಿದ್ದರು. ದೇಹಕ್ಕೆ ಚೈತನ್ಯ ನೀಡುವಂತಹ ಸಾಕಷ್ಟು ಪ್ರಯೋಜನಗಳು ಈ ಐಸ್ ಬಾತ್‌ನಿಂದ ಸಿಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ದೇಹದ ಉರಿಯೂತ ಕಮ್ಮಿ ಆಗುತ್ತದೆ. ವರ್ಕೌಟ್ ನಂತರ ಸ್ನಾಯುಗಳ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಸ್ನಾಯುಗಳ ನೋವು ಕಮ್ಮಿ ಆಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಚೆನ್ನಾಗಿ ನಿದ್ದೆ ಬರುತ್ತದೆ. ಆಹ್ಲಾದಕರ ಅನುಭೂತಿ ನೀಡುತ್ತದೆ ಎನ್ನಲಾಗುತ್ತಿದೆ. ಹಾಗಾಗಿಯೇ ಇತ್ತೀಚೆಗೆ ಈ ಥೆರಪಿ ಹೆಚ್ಚು ಜನಪ್ರಿಯವಾಗುತ್ತಿದೆ.
"ಕ್ರಿಯೋ ಇನ್ - 15 ಬೇರೆ ಯಾರಾದರೂ ಮಾಡ್ತೀರಾ?" ಎಂದು ಬರೆದು ರಕುಲ್ ಐಸ್ ಬಾತ್ ವಿಡಿಯೋ ಶೇರ್ ಮಾಡಿ ಸವಾಲ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ನೋಡಿ ಕೆಲವರು ಯಾಕೆ ಇದೆಲ್ಲಾ? ಇಂದೆಂಥ ಸಾಹಸ? ಅಂತೆಲ್ಲಾ ಕೇಳುತ್ತಿದ್ದಾರೆ. ದೆಹಲಿ ಬ್ಯೂಟಿ ಅಭಿಮಾನಿಗಳಂತೂ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಇನ್ನು ಬಿಂದಾಸ್ ಬೆಡಗಿಯ ಬಿಕಿನಿ ಟ್ರೀಟ್‌ಗೆ ಪಡ್ಡೆ ಹುಡುಗರು ಬೋಲ್ಡ್ ಆಗಿದ್ದಾರೆ. ನೀರಿನಲ್ಲಿ ರಕುಲ್ ಮುಳುಗಿ ಎದ್ದ ಮೇಲೆ ಆ ನೀರು ಬಿಸಿಯಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ರಕುಲ್ ಸದ್ಯ 'ಮೇರಿ ಪತ್ನಿ ಕಾ ರೀಮೆಕ್', 'ಅಯಲಾನ್' ಹಾಗೂ ಕಮಲ್ ಹಾಸನ್ ನಟನೆಯ 'ಇಂಡಿಯನ್- 2' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ರಕುಲ್ ನಟನೆಯ ಯಾವುದೇ ಸಿನಿಮಾ ಹಿಟ್ ಆಗಲಿಲ್ಲ. ಇನ್ನು ರಶ್ಮಿಕಾ, ಶ್ರೀಲೀಲಾರಂತಹ ಹೊಸ ನಟಿಯರ ದರ್ಬಾರ್ ನಡುವೆ ದೆಹಲಿ ಬೆಡಗಿಯ ಹವಾ ಕಮ್ಮಿ ಆಗಿದೆ.
ಬಾಲಿವುಡ್ ಮಾತ್ರವಲ್ಲ ಸೌತ್ ಸಿನಿಮಾಗಳು ಕೂಡ ಆಕೆಯ ಕೈ ಹಿಡಿತ್ತಿಲ್ಲ. ಕಳೆದ ವರ್ಷ ಈಕೆಯ 5 ಬಾಲಿವುಡ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದ್ದವು. ಯಾವ್ದು ಕೂಡ ಸಕ್ಸಸ್ ಕಾಣಲಿಲ್ಲ. ಈ ವರ್ಷ 'ಛತ್ರಿವಾಲಿ' ಎನ್ನುವ ಕಾಮಿಡಿ ಡ್ರಾಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಲೈಂಗಿಕ ಶಿಕ್ಷಣದ ಕತೆ ಹೇಳಲಾಗಿತ್ತು.


Click it and Unblock the Notifications











