ಆ ವ್ಯಕ್ತಿಯಿಂದ ಹಿಂಸೆ ಅನುಭವಿಸಿ ಸಾಕಾಗಿದೆ, ಆತ್ಮಹತ್ಯೆಯೊಂದೆ ನನಗೆ ದಾರಿ: 'ಮಾಸ್ತ್ರಾಮ್' ನಟಿಯ ಅಳಲು
ಭೋಜ್ ಪುರಿಯ ಖ್ಯಾತ ನಟಿ ರಾಣಿ ಚಟರ್ಜಿ, 'ಮಾನಸಿಕ ಕಿರುಕುಳ ಮತ್ತು ಖಿನ್ನತೆಯಿಂದ ಬಳಲಿ ಸಾಕಾಗಿದೆ ನನಗೀಗ ಉಳಿದಿರುವುದು ಸಾಯುವುದೊಂದೆ ಮಾರ್ಗ' ಎಂದು ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪತ್ರ ಬರೆದು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಭೋಜ್ ಪುರಿ ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ರಾಣಿ, 'ಕತ್ರೋಂಕಿ ಖಿಲಾಡಿ 10' ಶೋನ ಸ್ಪರ್ಧಿ ಕೂಡ ಆಗಿದ್ದರು. ಅಲ್ಲದೆ ಎಂಎಕ್ಸ್ ಪ್ಲೇಯರ್ ನ ವೆಬ್ ಸರಣಿ 'ಮಸ್ತ್ರಾಮ್'ನಲ್ಲಿ ಹಾಟ್ ಪಾತ್ರದ ಮೂಲಕ ಯುವಕರ ನಿದ್ದೆಗಿಡೆಸಿದ್ದರು. ಇದೀಗ ಸಾಯುವ ನಿರ್ಧಾರ ಮಾಡಿ ಎಲ್ಲರನ್ನು ಬೆಚ್ಚಿಬೀಲಿಸಿದ್ದಾರೆ.
ರಾಣಿ ಚಟರ್ಜಿ ಕಳೆದ ಕೆಲವು ವರ್ಷಗಳಿಂದ ಧನಂಜಯ್ ಎನ್ನುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರಂತೆ. ಆತನಿಂದ ಕಾಪಾಡಿ, ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮುಂಬೈ ಪೊಲೀಸರ ಮೊರೆ ಹೋಗಿದ್ದಾರೆ. ಮುಂದೆ ಓದಿ.

ಸೈಬರ್ ಪೊಲೀಸರಿಗೆ ದೂರು ಕೊಟ್ಟರು ಪ್ರಯೋಜನವಾಗಿಲ್ಲ
ಈಗಾಗಲೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು ಏನು ಪ್ರಯೋಜನವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ ನಲ್ಲಿ ಧನಂಜಯ್ ಎನ್ನುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದು, ಅಲ್ಲದೆ ವಯಸ್ಸಾದ ನಟಿ ಎಂದು ಹಿಯಾಳಿಸುವುದು, ಬಾಡಿ ಶೇಮಿಂಗ್ ಮಾಡುವುದಲ್ಲದೆ ಸಾರ್ವಜನಿಕವಾಗಿ ನಿಂದಿಸುತ್ತಾನೆ" ಎಂದು ಆರೋಪ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡರೆ ಆ ವ್ಯಕಿಯೇ ನೇರಹೊಣೆ
ಸ್ನೇಹಿತರು ಮತ್ತು ಸಹೋದ್ಯೋಗಿಗಳ ಬಳಿ ಹೇಳಿದರೆ ಕಾಮೆಂಟ್ ಗಳನ್ನು ನಿರ್ಲಕ್ಷಿಸಿ ಎಂದು ಸಲಹೆ ನೀಡುತ್ತಾರಂತೆ. ಆದರೆ ರಾಣಿ ಅತಿರೇಕದ ನಿಂದನೆಯಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರಂತೆ. ಹಾಗಾಗಿ ಆತ್ಮಹತ್ಯೆಯೊಂದೆ ದಾರಿ. ಅದಕ್ಕೆ ನೇರ ಕಾರಣ ಧನಂಜಯ್ ಎನ್ನುವ ವ್ಯಕ್ತಿ. ಅದಕ್ಕೆ ಸಾಕ್ಷಿಗಳನ್ನು ನೀಡಿರುವುದಾಗಿ ರಾಣಿ ಹೇಳಿದ್ದಾರೆ.

ಮುಂಬೈ ಪೊಲೀಸರಿಗೆ ಮನವಿ
"ನಾನು ಆತ್ಮಹತ್ಯೆ ಮಾಡಿಕೊಂಡರೆ ಧನಂಜಯ್ ನನ್ನ ಸಾವಿಗೆ ಕಾರಣವೆಂದು ಪರಿಗಣಿಸುವಂತೆ ಮುಂಬೈ ಪೊಲೀಸರಿಗೆ ಹೇಳಿದ್ದೀನಿ. ನನಗೆ ಈಗ ಯಾವುದೆ ಶಕ್ತಿ ಉಳಿದಿಲ್ಲ. ಇವೆಲ್ಲವುಗಳಿಂದಾಗಿ ಇಷ್ಟು ವರ್ಷಗಳಿಂದ ಖಿನ್ನತೆಯಿಂದ ಬಳಲುತಿದ್ದ ನಾನಗೀಗ ಸಾಯುವುದೊಂದೆ ಏಕೈಕ ಆಯ್ಕೆ. ಇನ್ನು ಮುಂದೆ ಇನ್ನ ಮುಂದೆ ಇದನ್ನ ಸಹಿಸಲಾರೆ" ಎಂದು ದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನೆಟ್ಟಿಗರ ಬೆಂಬಲ
ನಟಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಸಮಾಧಾನ ಪಡಿಸಿ ಆತ್ಮಹತ್ಯೆ ನಿರ್ಧಾರ ಸರಿಯಲ್ಲ, ಧೈರ್ಯವಾಗಿರಿ ಎಂದು ಹೇಳುತ್ತಿದ್ದಾರೆ. ಈ ಹಿಂದೆಯೂ ಒಮ್ಮೆ ಅವಮಾನ ಮಾಡುವರ ವಿರುದ್ಧ ಬರೆದುಕೊಂಡಿದ್ದರು.


Click it and Unblock the Notifications











