ಮೀಟೂ ಬಗ್ಗೆ ರಾಣಿ ಮುಖರ್ಜಿ ಹೇಳಿಕೆಗೆ ನೆಟ್ಟಿಗರ ಟೀಕೆ
ಕಳೆದ ವರ್ಷ ಮರೆಯಲಾಗದ ಘಟನೆಗಳಲ್ಲಿ ಮೀಟೂ ವಿವಾದ ಕೂಡ ಒಂದಾಗಿತ್ತು. ಕಳೆದ ವರ್ಷಕ್ಕೆ ಮುಗಿಯದ ಈ ವಿವಾದ ಸುದ್ದಿ ಈಗಲೂ ಮುಂದುವರೆದಿದೆ. ಬಾಲಿವುಡ್ ನಟಿ ರಾಣಿ ಮುಖರ್ಜಿ ಮೀಟೂ ಬಗ್ಗೆ ನೀಡಿದ್ದ ಹೇಳಿಕೆ ಈಗ ನೆಟ್ಟಿಗರ ಟೀಕೆಗೆ ಕಾರಣವಾಗಿದೆ.
ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಮೀಟೂ ಬಗ್ಗೆ ಮಾತನಾಡಿದ್ದ ನಟಿ ರಾಣಿ ಮುಖರ್ಜಿ ''ನಾವು ಯಾವಾಗಲೂ ನಮ್ಮ ವಿರುದ್ಧ ಇರುವ ವ್ಯಕ್ತಿಯ ಮೇಲೆ ಆರೋಪ ಮಾಡಿಕೊಂಡು ಇರಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳು ಕೂಡ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವುದನ್ನು ಕಲಿಯಬೇಕು. ಇದಕ್ಕೆ ಶಾಲಾ ದಿನಗಳಲ್ಲಿ ತಯಾರಿ ನೀಡಬೇಕು'' ಎಂದು ಹೇಳಿದ್ದರು.
ಇದೇ ಸಂದರ್ಶನದಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ಅಲಿಯಾ ಭಟ್ ಕೂಡ ಭಾಗಿಯಾಗಿದ್ದು, ರಾಣಿ ಮುಖರ್ಜಿ ಮಾತನ್ನು ಒಪ್ಪಿಕೊಂಡಿರಲಿಲ್ಲ.

ಅದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿಯೂ ಅನೇಕರು ರಾಣಿ ಮುಖರ್ಜಿ ವಿರುದ್ಧ ಕಿಡಿಕಾರಿದ್ದಾರೆ. ರಾಣಿ ಮುಖರ್ಜಿ ಹೇಳಿಕೆ ಸರಿಯಲ್ಲ, ಅವರ ಮಾತಿನಲ್ಲಿ ಯಾವುದೇ ಸತ್ಯ ಇಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
English summary
Bollywood actress Rani Mukherjee gets trolled for her statement on Metoo in her recent interview.


Click it and Unblock the Notifications