ಮರಳುಗಾಡಿನಲ್ಲಿ ರಶ್ಮಿಕಾ ಮಂದಣ್ಣ ಬಿಕಿನಿ ಬಿರುಗಾಳಿ: ಬಾಲಿವುಡ್ ಬಿಕಿನಿ ಬೆಡಗಿಯರಿಗೆ ನ್ಯಾಷನಲ್ ಕ್ರಶ್ ಸವಾಲ್!

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಿಕಿನಿ ತೊಟ್ಟು ದರ್ಶನ ಕೊಟ್ಟಿದ್ದಾರೆ. ಅಬುದಾಬಿಯ ಮರಳುಗಾಡಿನಲ್ಲಿ ರೋಶ್ ಬಿಂದಾಸ್ ಫೋಟೊಶೂಟ್ ಫೋಟೊಗಳು ವೈರಲ್ ಆಗಿದೆ. ಇಷ್ಟು ದಿನ ಬೋಲ್ಡ್ ಸೀನ್‌ಗಳಲ್ಲಿ ಕಾಣಿಸಿಕೊಂಡರೂ ಬಿಕಿನಿ ತೊಡುವ ಸಾಹಸ ಮಾಡಿರಲಿಲ್ಲ. ಆದರೆ ಕಿರಿಕ್ ಬೆಡಗಿಗೆ ನಿಧಾನವಾಗಿ ಬಾಲಿವುಡ್ ಗಾಳಿ ಬೀಸಿದಂತಿದೆ. ಅದಕ್ಕೆ ತಕ್ಕಂತೆ ಈಗ ಸ್ಕಿನ್‌ ಶೋಗೆ ಸೈ ಎನ್ನುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅವಕಾಶಗಳು ಹೆಚ್ಚಾದಂತೆ ಮೈಮಾಟ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ ಮುಂದೆ ತೆಲುಗು ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಅಲ್ಲಿಂದ ಬಾಲಿವುಡ್ ಅಂಗಳಕ್ಕೆ ಜಿಗಿದ ಚೆಲುವೆ ಅಲ್ಲೇ ಸೆಟ್ಲ್ ಆಗುವ ಸುಳಿವು ಕೊಟ್ಟಿದ್ದಾರೆ. ಅದಕ್ಕಾಗಿ ಏನೆಲ್ಲಾ ಮಾಡಬೇಕೋ ಅದನ್ನು ಮಾಡಲು ಶುರು ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ 'ಗುಡ್‌ಬೈ' ಚಿತ್ರದಲ್ಲಿ ಬಿಗ್‌ಬಿ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ಕೊಡಗಿನ ಕುವರಿ ಮಿಂಚಿದ್ದರು. 'ಅನಿಮಲ್' ಹಾಗೂ 'ಮಿಷನ್ ಮಜ್ನು' ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಮಾಲ್ಡೀವ್ಸ್‌ಗೆ ಟೂರ್ ಹೋಗಿ ಬಂದ ಬೆಡಗಿ ಈಗ ಬಿಕಿನಿ ಫೋಟೊಶೂಟ್‌ನಿಂದ ಸುದ್ದಿಯಲ್ಲಿದ್ದಾರೆ.

ರಶ್ಮಿಕಾ ಸಾಕಷ್ಟು ಫೋಟೊಶೂಟ್‌ಗಳಲ್ಲಿ ಪೋಸ್ ಕೊಟ್ಟಿದ್ದಾರೆ. ಅದರೆ ಬಿಕಿನಿಯಲ್ಲಿ ಫೋಟೊಶೂಟ್ ಮಾಡಿಸಿರೋದು ಇದೇ ಮೊದಲು. ಆ ಮೂಲಕ ತೆರೆಮೇಲೂ ಬಿಕಿನಿ ತೊಡಲು ಸಿದ್ಧ ಎನ್ನುವ ಸಂದೇಶವನ್ನು ಬಾಲಿವುಡ್‌ಗೆ ಪರೋಕ್ಷವಾಗಿ ರವಾನಿಸಿದ್ದಾರೆ.

ಅಬುದಾಬಿಯಲ್ಲಿ ಬಿಕಿನಿ ಫೋಟೊಶೂಟ್

ಅಬುದಾಬಿಯಲ್ಲಿ ಬಿಕಿನಿ ಫೋಟೊಶೂಟ್

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಗಲ್ಫ್‌ ರಾಷ್ಟ್ರಕ್ಕೆ ಹೋಗಿ ಬಂದಿದ್ದರು. ಮರಳುಗಾಡಿನ ಬಳಿಯ ರೆಸಾರ್ಟ್‌ನಲ್ಲಿ ವೆರೈಟಿ ವೆರೈಟಿ ಕಾಸ್ಟ್ಯೂಮ್ಸ್ ತೊಟ್ಟು ಕಿರಿಕ್ ಬೆಡಗಿ ಪೋಸ್ ಕೊಟ್ಟಿದ್ದಾರೆ. ಅದರಲ್ಲೂ ಬ್ಲ್ಯಾಕ್ ಕಲರ್ ಬಿಕಿನಿಯಲ್ಲಿ ವಿರಹ ವೇದನೆಯಲ್ಲಿರುವಂತೆ ಕ್ಯಾಮೆರಾ ಮುಂದೆ ದರ್ಶನ ಕೊಟ್ಟಿದ್ದಾರೆ. ಸದ್ಯ ಈ ಫೋಟೊಗಳು ಫುಲ್ ವೈರಲ್ ಆಗಿದೆ. ಟ್ರಾವೆಲ್ ಲೀಶರ್ ಮ್ಯಾಗಝೀನ್‌ನ 16ನೇ ವರ್ಷ ಆನಿವರ್ಸರಿ ಸ್ಪೆಷಲ್ಲಾಗಿ ಈ ಫೋಟೊಶೂಟ್ ನಡೆದಿದೆ.

ಮೊನೊಕಿನಿಯಲ್ಲೂ ರಶ್ಮಿಕಾ ಪೋಸ್

ಮೊನೊಕಿನಿಯಲ್ಲೂ ರಶ್ಮಿಕಾ ಪೋಸ್

ಈ ಹಿಂದೆ ಹಲವು ಬಾಲಿವುಡ್ ನಟಿಯರು ಇದೇ ರೀತಿ ಟ್ರಾವೆಲ್ ಲೀಶರ್ ಮ್ಯಾಗಜೀನ್‌ಗಾಗಿ ಫೋಟೊಶೂಟ್ ಮಾಡಿಸಿದ್ದರು. ಬ್ಲ್ಯಾಕ್ ಕಲರ್ ಟಸೆಲ್ ಬಿಕಿನಿ ಜೊತೆಗೆ ಗೋಲ್ಡನ್ ಸೀಕ್ವೆನ್ ಮೊನೊಕಿನಿಯಲ್ಲೂ ರಶ್ಮಿಕಾ ಮೈಮಾಟ ಪ್ರದರ್ಶಿಸಿದ್ದಾರೆ. ಆ ಮೂಲಕ ಬಾಲಿವುಡ್ ನಟಿಯರಿಗೆ ಎಲ್ಲಾ ವಿಧದಲ್ಲೂ ಪೈಪೋಟಿ ಕೊಡಲು ಸಿದ್ಧ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ರಶ್ಮಿಕಾ- ವಿಜಯ್ ಫೋಟೊಶೂಟ್

ರಶ್ಮಿಕಾ- ವಿಜಯ್ ಫೋಟೊಶೂಟ್

ಮ್ಯಾಗಝೀನ್ ಫೋಟೊಶೂಟ್‌ಗಾಗಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮಾಲ್ಡೀವ್ಸ್‌ಗೆ ಹೋಗಿದ್ದರು ಎನ್ನುವ ಗುಸುಗುಸು ಶುರುವಾಗಿದೆ. ಇಬ್ಬರು ಕವರ್‌ಫೋಟೊಗಾಗಿ ಫೋಟೊಶೂಟ್ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರು ಬೇರೆ ಬೇರೆಯಾಗಿ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರೂ ಒಟ್ಟಿಗೆ ದ್ವೀಪರಾಷ್ಟ್ರಕ್ಕೆ ಹೋಗಿ ಬಂದಿದ್ದರು ಎನ್ನಲಾಗಿತ್ತು. ವಿಜಯ್ ದೇವರಕೊಂಡ ತೊಟ್ಟಿದ್ದ ಸನ್‌ಗ್ಲಾಸ್‌ನ ತೊಟ್ಟು ರಶ್ಮಿಕಾ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ ಎಂದು ಕೆಲವರು ಹೇಳಿದ್ದರು.

ಜೋರಾಗಿದೆ ರಶ್ಮಿಕಾ ಕ್ರೇಜ್

ಜೋರಾಗಿದೆ ರಶ್ಮಿಕಾ ಕ್ರೇಜ್

ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಜೊತೆಗೆ ಕಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ದಳಪತಿ ವಿಜಯ್ ಜೋಡಿಯಾಗಿ 'ವಾರಿಸು' ಚಿತ್ರದಲ್ಲಿ ನಟಿಸ್ತಿದ್ದಾರೆ. ಕಾರ್ತಿ ಜೊತೆ ಮತ್ತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ತೆಲುಗಿನಲ್ಲಿ 'ಪುಷ್ಪ- 2' ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಮತ್ತಷ್ಟು ಸಿನಿಮಾಗಳ ಬಗ್ಗೆ ಚರ್ಚೆ ನಡೀತಿದೆ.

More from Filmibeat

English summary
Actress Rashmika Mandanna Bikini PhotoShoot For Travel Leisure Magazine. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X