ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಪ್ರಕರಣ: 19 ವರ್ಷದ ಯುವಕನನ್ನು ಬಂಧಿಸಿದ ದೆಹಲಿ ಪೊಲೀಸರು

ದೇಶದಲ್ಲಿ ಭಾರಿ ಹಲ್‌ಚಲ್ ಎಬ್ಬಿಸಿದ್ದ, ಈಗಲೂ ಹಲವು ನಟ, ನಟಿಯರು ಸಂಕಷ್ಟಕ್ಕೆ ಒಳಗಾಗುತ್ತಿರುವುದು ಡೀಪ್‌ಫೇಕ್ ವಿಡಿಯೋಗಳಿಂದ. ಇದು ಮೊದಲಿಗೆ ಹೆಚ್ಚು ಸುದ್ದಿಯಾಗಿದ್ದು ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬಳಿಕ. ಈಗ ಈ ಪ್ರಕರಣದ ಮಹತ್ವದ ಬೆಳವಣಿಗೆ ವರದಿಯಾಗಿದೆ.

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 19 ವರ್ಷದ ಬಿಹಾರದ ಯುವಕನನ್ನು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದ ವೈರಲ್ ವಿಡಿಯೋವನ್ನು ಕೋಟ್ಯಾಂತರ ಮಂದಿ ಹಂಚಿಕೊಂಡಿದ್ದರು. ಅಸಲಿಗೆ ಇದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಜಾರಾ ಪಟೇಲ್ ವಿಡಿಯೋವಾಗಿತ್ತು. ಅವರ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಜೋಡಿಸಲಾಗಿತ್ತು.

Actress Rashmika Mandanna DeepFake Video Case: Delhi Police Arrests 19-year-old youth from Bihar

ರಶ್ಮಿಕಾ ಮಂದಣ್ಣ ಕೇಸ್‌ನಲ್ಲಿ ಬಿಹಾರದ ಯುವಕ ಅರೆಸ್ಟ್

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಪ್ರಕರಣದಲ್ಲಿ ತನಿಖೆ ನಡೆಸಿದ್ದ ಪೊಲೀಸರು ನಂತರ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್ ಆದ ಮೂಲ ವಿಡಿಯೋವನ್ನು ಈ ಯುವಕರ ಸೃಷ್ಠಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ಬಹಿರಂಗಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಡಿಫ್‌ಫೇಕ್ ವಿಡಿಯೋ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುವ ಮೊದಲು ಬಂಧಿತ ಆರೋಪಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಡೀಪ್‌ಫೇಕ್ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ವರದಿಗಳು ತಿಳಿಸಿದೆ. ಅವರ ಸಾಮಾಜಿಕ ಮಾಧ್ಯಮ ಖಾತೆಯಿಂದ ವೀಡಿಯೊದ ಮೂಲ ಸಿಕ್ಕಿದ್ದು, ಅದನ್ನು ಪರಿಗಣಿಸಿ ತನಿಖೆಗೆ ಸಹಕರಿಸುವಂತೆ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದರು. ಬಳಿಕ ಬಂಧಿಸಲಾಗಿದೆ ಎಂದು ಪಿಟಿಐಗೆ ಹಿರಿಯ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು

ನವೆಂಬರ್ 10 ರಂದು, ದೆಹಲಿ ಪೊಲೀಸ್‌ನ ಗುಪ್ತಚರ ಮತ್ತು ಕಾರ್ಯತಂತ್ರದ ಕಾರ್ಯಾಚರಣೆ (IFSO) ಘಟಕವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ನಕಲಿ ಮಾಡುವುದಕ್ಕೆ ಶಿಕ್ಷೆ) ಮತ್ತು 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶಕ್ಕಾಗಿ ನಕಲಿ ಮಾಡುವುದು) ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66C ಮತ್ತು 66E ಅಡಿಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಿದೆ.

ಬಂಧಿತ ಯುವಕನು ಆರಂಭದಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವನ್ನು ಡೌನ್‌ಲೋಡ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಹೀಗಾಗಿ ಕಾನೂನು ಜಾರಿ ಘಟಕದಿಂದ ವಿಚಾರಣೆ ನಡೆಸಲು ಕಾರಣವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಹಾರ ಮೂಲದ ವ್ಯಕ್ತಿಗೆ ಐಎಫ್‌ಎಸ್‌ಒ ಘಟಕದ ಮುಂದೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು.

ಆರೋಪಿ ಐಎಫ್‌ಎಸ್‌ಒ ಘಟಕದ ಮುಂದೆ ಅವರು ವಿವಾದಾತ್ಮಕ ವೀಡಿಯೊವನ್ನು ಅಪ್‌ಲೋಡ್ ಮಾಡಲು ಬಳಸಿದ ಮೊಬೈಲ್ ಫೋನ್ ಅನ್ನು ತರಬೇಕಾಗಿತ್ತು. ಅದೇ ಸಮಯದಲ್ಲಿ, ಎಫ್‌ಐಆರ್ ನೋಂದಣಿಯ ನಂತರ, ಐಎಫ್‌ಎಸ್‌ಒ ಘಟಕವು ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿಯಾದ ಮೆಟಾಗೆ ಮಾಹಿತಿ ಮತ್ತು ಆರೋಪಿಯನ್ನು ಗುರುತಿಸಲು ಯುಆರ್‌ಎಲ್ ಸೇರಿದಂತೆ ಹಲವು ವಿವರಗಳನ್ನು ಕೋರಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

More from Filmibeat

English summary
Delhi police arrests bihar youth in Rashmika Mandanna Deepfake video case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X