ರಶ್ಮಿಕಾ ಮಂದಣ್ಣ ಹೃದಯ ಕದಲಿಸಿದ ಉಡುಗೊರೆ: "ಐ ಲವ್ ಯು" ಎಂದ ಕೊಡಗಿನ ಕುವರಿ
ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಚೆಲುವೆ ಮೋಡಿ ಮಾಡುತ್ತಿದ್ದಾರೆ. ಮೊನ್ನೆ ನಟ ಬಾಲಕೃಷ್ಣ, ನಿನ್ನೆ ಕ್ರಿಕೆಟಿಗ ಶುಬ್ಮಾನ್ ಗಿಲ್, ರಶ್ಮಿಕಾ ಅಂದ್ರೆ ಕ್ರಶ್ ಎಂದು ಹೇಳಿದ್ದರು. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಸಾನ್ವಿ ಆಗಿ ನಟಿಸಿದ್ದ ರಶ್ಮಿಕಾ ನೋಡ ನೋಡುತ್ತಲೇ ಟಾಲಿವುಡ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿಬಿಟ್ಟರು.
ಸೆಲೆಬ್ರೆಟಿಗಳಿಗೆ ಅಭಿಮಾನಿಗಳು ಉಡುಗೊರೆ ಕೊಡೋದು ಸಾಮಾನ್ಯ. ಹುಟ್ಟುಹಬ್ಬದ ಸಂಭ್ರಮದಲ್ಲಿ ಮನೆ ಮುಂದೆ ಜಮಾಯಿಸಿ ತರಹೇವಾರಿ ಉಡುಗೊರೆ ಕೊಟ್ಟು ಶುಭಾಶಯ ಕೋರುತ್ತಾರೆ. ದೇಶ ವಿದೇಶಗಳಲ್ಲೂ ಕೊಡಗಿನ ಚೆಲುವೆಗೆ ಅಭಿಮಾನಿಗಳಿದ್ದಾರೆ. ಇದೀಗ ವಿದೇಶದ ಅಭಿಮಾನಿಯಿಂದ ನಟಿಗೆ ವಿಶೇಷ ಉಡುಗೊರೆ ಬಂದಿದೆ. ಅದನ್ನು ನೋಡಿ ರಶ್ಮಿಕಾ ಫಿದಾ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಸದ್ಯ ಕೊಡಗಿನ ಚೆಲುವೆ ಪೋಸ್ಟ್ ಸಖತ್ ವೈರಲ್ ಆಗಿದೆ.

ಅಷ್ಟಕ್ಕೂ ಯಾರಪ್ಪಾ ಈ ಉಡುಗೊರೆ ಕಳುಹಿಸಿದ್ದು, ಅದರಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ, ಹೂಗುಚ್ಚ ರೀತಿಯ ಉಡುಗೊರೆಯನ್ನು ಅಭಿಮಾನಿ ಕಳುಹಿಸಿದ್ದಾರೆ. ಚಿಟ್ಟೆಗಳ ಆಕಾರದಲ್ಲಿ ಬಹಳ ವಿಶೇಷವಾಗಿ ಆ ಉಡುಗೊರೆ ಕಾಣಿಸುತ್ತಿದ್ದು, ಅದರಲ್ಲಿ ಚಿಕ್ಕ ಚೀಟಿ ಕೂಡ ಇದೆ. ಅದರಲ್ಲಿ "ರಶ್ಮಿಕಾ ಮಂದಣ್ಣಗೆ" ಎಂದು ಇಂಗ್ಲೀಷ್ ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ. "ನಿಮ್ಮನ್ನು ಪ್ರೀತಿಸುವ ಅಭಿಮಾನಿಗಳಲ್ಲಿ ಅತಿ ಹೆಚ್ಚು ಪ್ರೀತಿಸುವ ಅಭಿಮಾನಿ" ಎಂದು ಬರೆಯಲಾಗಿದೆ. ಅಂದಹಾಗೆ ಯುಕೆ ಮೂಲದ ಅಭಿಮಾನಿ ಎಂದು ಹೇಳಿದ್ದಾರೆ.
ಇದೇ ಈಗ ರಶ್ಮಿಕಾ ಹೃದಯವನ್ನು ಕದಲಿಸಿದೆ. "ಈ ಉಡುಗೊರೆ ನನಗೆ ಇಂದು ಸಿಕ್ತು. ಇದು ನನ್ನ ಹೃದಯ ಕದಲಿಸಿದೆ. ಇದರಲ್ಲಿ ಹೆಸರಿಲ್ಲ. ಆದರೆ ಅವರನ್ನು ನಾನು ಎಂದು ಪ್ರೀತಿಸುತ್ತಿರುತ್ತೇನೆ. ನೀನು ನಿಜಕ್ಕೂ ನನ್ನಲ್ಲಿ ಸಂತೋಷ ತುಂಬಿದ್ದೀಯಾ. ಬಿಗ್ ಟೆಡ್ಡಿ ಬೇರ್ ಹಗ್ಸ್ ಟು ಯು" ಎಂದು ರಶ್ಮಿಕಾ ಇನ್‌ಸ್ಟಾ ಸ್ಟೋರಿ ಬರೆದುಕೊಂಡು ಆ ಅಭಿಮಾನಿಗೆ ಸಂತಸ ತಂದಿದ್ದಾರೆ. ಈ ಪೋಸ್ಟ್ ಈಗ ಸಖತ್ ವೈರಲ್ ಆಗುತ್ತಿದೆ.

ಸದ್ಯ ರಶ್ಮಿಕಾ ಮಂದಣ್ಣ 'ಪುಷ್ಪ'- 2 ಹಾಗೂ 'ಅನಿಮಲ್' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇತ್ತೀಚಿಗೆ ಕೊಡಗಿನ ಕುವರಿ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಕಥೆಗಳ ಆಯ್ಕೆಯಲ್ಲಿ ಬಹಳ ಚೂಸಿಯಾಗಿರೋ ಚೆಲುವೆ ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಹಾಟ್ ಹಾಟ್ ಫೋಟೋಶೂಟ್, ರೆಡ್ ಕಾರ್ಪೆಟ್ ಈವೆಂಟ್‌ಗಳಲ್ಲಿ ಕಾಣಿಸಿಕೊಂಡು ಸದ್ದು ಮಾಡುತ್ತಿದ್ದಾರೆ.


Click it and Unblock the Notifications











