ರಶ್ಮಿಕಾ ಕೈಯಲ್ಲಿ ಮತ್ತೊಂದು ಬಾಲಿವುಡ್ ಸಿನಿಮಾ: ಟೈಗರ್ ಶ್ರಾಫ್ ಹೀರೊ!

ನಟಿ ರಶ್ಮಿಕಾ ಮಂದಣ್ಣ ಸದ್ಯ ಸಿನಿಮಾ ಕೆರಿಯರ್‌ನ ಉತ್ತುಂಗದಲ್ಲಿದ್ದಾರೆ. ಸಾಲು ಸಾಲು ದೊಡ್ಡ ಸಿನಿಮಾಗಳಲ್ಲಿ ನಟಿಸುವ ಮೂಲಕ ರಶ್ಮಿಕಾ ಮಂದಣ್ಣ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ತಮ್ಮ ಸಿನಿ ಪಯಣವನ್ನು ಶುರುಮಾಡಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ನಟಿ ರಶ್ಮಿಕಾ ಕನ್ನಡದ ಮೂಲಕ ತಮ್ಮ ಬಣ್ಣದ ಬದುಕಿನ ಪಯಣವನ್ನು ಶುರುಮಾಡಿದರು. ಕನ್ನಡದಲ್ಲೂ ಕೂಡ ದೊಡ್ಡ ಮಟ್ಟಿನ ಯಶಸ್ಸು ಕಂಡ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿ ಸೈ ಎನಿಸಿಕೊಂಡರು. ಬಳಿಕ ಬಾಲಿವುಡ್ ಗಮನಸೆಳೆದ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಇದೀಗ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಲಿರುವ ಮುಂದಿನ ಬಾಲಿವುಡ್ ಚಿತ್ರದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಯಾವ ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಮುಂದೆ ಓದಿ...

ರಶ್ಮಿಕಾಗೆ ಬಾಲಿವುಡ್‌ನಲ್ಲಿ ಹೆಚ್ಚಿದ ಬೇಡಿಕೆ!

ರಶ್ಮಿಕಾಗೆ ಬಾಲಿವುಡ್‌ನಲ್ಲಿ ಹೆಚ್ಚಿದ ಬೇಡಿಕೆ!

ರಶ್ಮಿಕಾ ಮಂದಣ್ಣ ಅವರನ್ನು ಅದೃಷ್ಟದ ಗಣಿ ಎಂದು ಕರೆಯಬಹುದು. ಯಾಕೆಂದರೆ ರಶ್ಮಿಕಾ ಮುಟ್ಟಿದ್ದೆಲ್ಲವೂ ಚಿನ್ನ. ರಶ್ಮಿಕಾ ಕಾಲಿಟ್ಟ ಕಡೆ ಅದೃಷ್ಟ ಇರುತ್ತೆ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ಕನ್ನಡ ಸಿನಿಮಾರಂಗದಲ್ಲಿ ಮೊದಲ ಚಿತ್ರದ ಮೂಲಕವೇ ಯಶಸ್ಸು ಕಂಡ ರಶ್ಮಿಕಾ ಸಾಲು ಸಾಲು ಸ್ಟಾರ್ ನಟರ ಜೊತೆಗೆ ನಟಿಸಿ ಹಲವು ಕನ್ನಡದ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಕನ್ನಡದ ಬಳಿಕ ತೆಲುಗಿಗೆ ಎಂಟ್ರಿಕೊಟ್ಟ ರಶ್ಮಿಕಾಗೆ ಅಲ್ಲೂ ಕೂಡ ಅದೃಷ್ಟ ಒಲಿದುಬಂದಿದೆ. ಸದ್ಯ ತಮಿಳಿನಲ್ಲೂ ಬ್ಯುಸಿಯಾಗಿದ್ದು ಬಾಲಿವುಡ್‌ನಲ್ಲಿ ಕೂಡ ಸಾಲು ಸಾಲು ಅವಕಾಶಗಳು ಬರ್ತಿವೆ.

ಟೈಗರ್ ಶ್ರಾಫ್ ಜೊತೆಗೆ ರಶ್ಮಿಕಾ ನಟನೆ!

ಟೈಗರ್ ಶ್ರಾಫ್ ಜೊತೆಗೆ ರಶ್ಮಿಕಾ ನಟನೆ!

ಬಾಲಿವುಡ್‌ನಲ್ಲಿ ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣಗಿರುವ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಮತ್ತೊಂದು ಹೊಸ ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುವ ಬಗ್ಗೆ ಸುದ್ದಿ ಹಬ್ಬಿದೆ. ಹೌದು ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ. ಈ ಸುದ್ದಿ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟೈಗರ್ ಶ್ರಾಫ್ ಮುಂದಿನ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಈ ಚಿತ್ರಕ್ಕೆ ಶಶಾಂಕ್ ಕೈತನ್ ನಿರ್ದೇಶನವಿದೆ.

ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ನಟನೆ!

ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ನಟನೆ!

ಸಿದ್ದಾರ್ಥ್ ಮಲ್ಹೋತ್ರ ಜೊತೆಗೆ 'ಮಿಷನ್ ಮಜ್ನು' ಸಿನಿಮಾದ ಮೂಲಕ ಬಾಲಿವುಡ್‌ಗೆ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಇದಾದ ಬಳಿಕ ರಣ್ಬೀರ್ ಕಪೂರ್ ಜೊತೆಗೆ ಸದ್ಯ 'ಅನಿಮಲ್' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಇವೆಲ್ಲಾ ದೊಡ್ಡ ಮಟ್ಟದಲ್ಲಿ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸಿನಿಮಾಗಳು. ಇದೀಗ ಟೈಗರ್ ಶ್ರಾಫ್ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ ಆದರೆ ರಶ್ಮಿಕಾ ಮುಂದಿನ ಸಿನಿಮಾದ ಬಗ್ಗೆ ಬಾಲಿವುಡ್‌ನಲ್ಲಿ ಹಲ್ ಚಲ್ ಹಬ್ಬಿದೆ.

ಎಲ್ಲೆಲ್ಲೂ ರಶ್ಮಿಕಾ ಹವಾ!

ಎಲ್ಲೆಲ್ಲೂ ರಶ್ಮಿಕಾ ಹವಾ!

ಭಾರತೀಯ ಸಿನಿಮಾರಂಗದಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ ಎನ್ನಬಹುದು. ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ 'ಪುಷ್ಪ 2', ತಮಿಳಿನಲ್ಲಿ 'ವಾರಿಸು', ಹಿಂದಿಯಲ್ಲಿ 'ಅನಿಮಲ್' ಸಿನಿಮಾಗಳಲ್ಲಿ ಸದ್ಯಕ್ಕೆ ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರ ಮುಂಬರುವ ಸಿನಿಮಾಗಳು ಕೂಡ ಸದ್ದು ಮಾಡುತ್ತಲೇ ಇದೆ. ಕನ್ನಡ ಮತ್ತು ಮಲಯಾಳಂನಲ್ಲಿ ರಶ್ಮಿಕಾ ನೇರವಾಗಿ ಸಿನಿಮಾಗಳನ್ನು ಮಾಡುತ್ತಿಲ್ಲ. ಬದಲಿಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಲೇಬಲ್ ಹೊತ್ತು ಆಕೆಯ ಸಿನಿಮಾಗಳು ಡಬ್ ಆಗಿ ರಿಲೀಸ್ ಆಗುತ್ತಿವೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಆಲ್ ರೌಂಡರ್ ಆಗಿ ಎಲ್ಲಾ ಕಡೆಯಲ್ಲೂ ಮಿಂಚುತ್ತಿದ್ದಾರೆ.

More from Filmibeat

English summary
Actress Rashmika Mandanna Next Bollywood Film With Tiger Shroff, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X