For Quick Alerts
  ALLOW NOTIFICATIONS  
  For Daily Alerts

  ಬಟ್ಟೆಯ ಕಾರಣಕ್ಕೆ ಮತ್ತೆ ಟ್ರೋಲ್ ಆದ ನಟಿ ರಶ್ಮಿಕಾ ಮಂದಣ್ಣ

  |

  ನಟಿಯರಿಗೆ ಟ್ರೋಲ್ ಎಂಬುದು ಬೆಂಬಿಡತ ಭೂತ. ಟ್ರೋಲ್ ಮಾಡಲೆಂದೇ ಆನ್‌ಲೈನ್‌ನಲ್ಲಿರುವ ಕೆಲವು 'ಟ್ರೋಲ್‌ ಜೀವಿ'ಗಳಿದ್ದಾರೆ. ಇವರು ಸಾಮಾನ್ಯ ವಿಷಯದಲ್ಲೂ ಏನಾದರೊಂದು ಕೊಂಕು ಹುಡುಕಿ ಟ್ರೋಲ್ ಮಾಡುತ್ತಾರೆ. ಈ ಟ್ರೋಲ್‌ಗೆ ಹೆಚ್ಚು ತುತ್ತಾಗುವುದು ನಟಿಯರೇ.

  ನಟಿ ರಶ್ಮಿಕಾ ಮಂದಣ್ಣರಿಗೆ ಟ್ರೋಲ್ ಹೊಸದೇನೂ ಅಲ್ಲ. ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್‌ ಅಪ್ ಇಂದ ಆರಂಭವಾಗಿ ಹಲವು ಕಾರಣಗಳಿಗೆ ರಶ್ಮಿಕಾ ಟ್ರೋಲ್ ಆಗಿದ್ದಾರೆ. ಇದೀಗ ತಮ್ಮ ಉಡುಪಿನ ಕಾರಣಕ್ಕೆ ರಶ್ಮಿಕಾ ಮತ್ತೆ ಟ್ರೋಲ್‌ಗೆ ಗುರಿಯಾಗಿದ್ದಾರೆ.

  ಭಾರತ ದೇಶದ ಬಗ್ಗೆ ಕೇವಲವಾಗಿ ಮಾತನಾಡಿದ ರಶ್ಮಿಕಾ: ಡಿಲೀಟೆಡ್ ಸೀನ್ ವೈರಲ್! ಭಾರತ ದೇಶದ ಬಗ್ಗೆ ಕೇವಲವಾಗಿ ಮಾತನಾಡಿದ ರಶ್ಮಿಕಾ: ಡಿಲೀಟೆಡ್ ಸೀನ್ ವೈರಲ್!

  ರಶ್ಮಿಕಾ ಮಂದಣ್ಣ ನಟನೆಯ ಹಿಂದಿ ಸಿನಿಮಾ 'ಗುಡ್ ಬೈ'ನ ಟ್ರೈಲರ್ ಬಿಡುಗಡೆ ಕೆಲವು ದಿನಗಳ ಹಿಂದೆ ನಡೆಯಿತು. ತಮ್ಮ ಮೊದಲ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ತುಸು ರಂಗು-ರಂಗಾಗಿ ಗ್ಲಾಮರಸ್ ಉಡುಗೆ ತೊಟ್ಟು ರಶ್ಮಿಕಾ ಆಗಮಿಸಿದ್ದರು.

  ಬಾಲಿವುಡ್‌ನ ಕೆಲ ನಟಿಯರ ಉಡುಗೆಗಳಿಗೆ ಹೋಲಿಸಿದರೆ ರಶ್ಮಿಕಾ ಅಂದು ತೊಟ್ಟಿದ್ದ ಉಡುಗೆ ತೀರ ಗ್ಲಾಮರಸ್ ಆಗೇನೂ ಇರಲಿಲ್ಲ. ಆದರೆ ಕೆಲವು ನೆಟ್ಟಿಗರಿಗೆ ಅಸಮಾಧಾನವಾಗಿರುವುದು, ರಶ್ಮಿಕಾ ಅದೇ ಬಟ್ಟೆ ತೊಟ್ಟು ಗಣೇಶನ ದರ್ಶನಕ್ಕೆ ಬಂದಿದ್ದಕ್ಕೆ.

  ಟ್ರೈಲರ್ ಲಾಂಚ್ ಇವೆಂಟ್ ಮುಕ್ತಾಯವಾದ ಬಳಿಕ ನಟಿ ರಶ್ಮಿಕಾ ಮಂದಣ್ಣ, 'ಗುಡ್ ಬೈ' ಸಿನಿಮಾದಲ್ಲಿ ನಟಿಸಿರುವ ಹಿರಿಯ ನಟಿ ನೀನಾ ಗುಪ್ತಾ ಹಾಗೂ ಸಿನಿಮಾದ ನಿರ್ಮಾಪಕಿ ಏಕ್ತಾ ಕಪೂರ್ ಅವರುಗಳು ಇವೆಂಟ್‌ನ ಜಾಗಕ್ಕೆ ಹತ್ತಿರದಲ್ಲೇ ಇದ್ದ ಲಾಲ್‌ಬೌಗ್ಚಾ ರಾಜ್‌ಗೆ ಭೇಟಿ ನೀಡಿ ಗಣೇಶನ ದರ್ಶನ ಪಡೆದರು. ನಟಿ ರಶ್ಮಿಕಾ, ಟ್ರೈಲರ್ ಲಾಂಚ್ ಇವೆಂಟ್‌ಗೆ ಧರಿಸಿದ್ದ ಗ್ಲಾಮರಸ್ ಉಡುಗೆಯಲ್ಲೇ ಗಣೇಶನ ದರ್ಶನಕ್ಕೆ ಆಗಮಿಸಿದ್ದು ಕೆಲವು ನೆಟ್ಟಿಗರ ಕಣ್ಣು ಕೆಂಪಗೆ ಮಾಡಿದೆ.

  ದೇವರ ದರ್ಶನಕ್ಕೆ ಬರುವಾಗ ಸರಿಯಾಗಿ ಬಟ್ಟೆ ಧರಿಸಿ ಬರಲು ಆಗುವುದಿಲ್ಲವೇ ಎಂದು ಕೆಲವರು ಟಾಂಗ್ ನೀಡಿದ್ದಾರೆ.

  Actress Rashmika Mandanna Trolled Again For Her Dress

  ರಶ್ಮಿಕಾ, ಗಣೇಶನ ದರ್ಶನ ಪಡೆಯುತ್ತಿರುವ ಕೆಲವು ಚಿತ್ರಗಳು ವೈರಲ್ ಆಗಿದ್ದು, ರಶ್ಮಿಕಾರ ಉಡುಪು ಗ್ಲಾಮರಸ್ ಮಾದರಿಯಲ್ಲಿಲ್ಲ, ಬದಲಿಗೆ ಸಾಮಾನ್ಯ ಉಡುಪಿನಂತೆಯೇ ಕಾಣುತ್ತಿದೆ. ಇವೆಂಟ್‌ನಲ್ಲಿ ತುಸು ಗ್ಲಾಮರಸ್ ಆಗಿ ಕಾಣುತ್ತಿದ್ದ ಉಡುಪನ್ನು ಗಣೇಶನ ದರ್ಶನಕ್ಕೆ ಬಂದಾಗ ಬೇರೆ ರೀತಿಯಲ್ಲಿ ತೊಟ್ಟಿದ್ದರು ಅಥವಾ ಅಂಗಾಗಳು ಹೆಚ್ಚು ಕಾಣದಂತೆ ಧರಿಸಿದ್ದರು. ಆದರೂ ಸಹ ಕೆಲವು ನೆಟ್ಟಿಗರು ಟ್ರೋಲ್ ಮಾಡುವುದು ಬಿಟ್ಟಿಲ್ಲ.

  ಸಿನಿಮಾ ವಿಷಯಕ್ಕೆ ಮರಳುವುದಾದರೆ, ರಶ್ಮಿಕಾ ಕೈಯಲ್ಲಿ ಹಲವು ಸಿನಿಮಾಗಳಿವೆ. ರಶ್ಮಿಕಾರ ಹಿಂದಿ ಸಿನಿಮಾ 'ಗುಡ್ ಬೈ' ಅಕ್ಟೋಬರ್ 7 ಕ್ಕೆ ತೆರೆಗೆ ಬರಲಿದೆ. ಆ ಬಳಿಕ ಅವರ ನಟನೆಯ ಮತ್ತೊಂದು ಹಿಂದಿ ಸಿನಿಮಾ 'ಮಿಷನ್ ಮಜ್ನು' ತೆರೆಗೆ ಬರಲಿದೆ. ಈ ನಡುವೆ ಇದೇ ತಿಂಗಳ ಎಂಟರಿಂದ 'ಪುಷ್ಪ 2' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ತಮಿಳಿನಲ್ಲಿ ವಿಜಯ್ ಜೊತೆ ನಟಿಸುತ್ತಿರುವ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಮಲಯಾಳಂನ ಒಂದು ಸಿನಿಮಾ ಹಾಗೂ ಹಿಂದಿಯ ಮತ್ತೊಂದು ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಈ ವರ್ಷ ಮಾತ್ರವಲ್ಲ ಮುಂದಿನ ವರ್ಷದ ಆರು ತಿಂಗಳು ರಶ್ಮಿಕಾ ಬ್ಯುಸಿಯಾಗಿದ್ದಾರೆ.

  English summary
  Actress Rashmika Mandanna trolled again for her dress. She went for Ganesha darshan in desighner dress
  Wednesday, September 7, 2022, 20:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X