For Quick Alerts
  ALLOW NOTIFICATIONS  
  For Daily Alerts

  ಸಲಿಕೆ ಹಿಡಿದು ತೋಟದ ಕೆಲಸಕ್ಕೆ ಇಳಿದ ಕೆಜಿಎಫ್ ಸುಂದರಿ

  |

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಮಂದಿ ನಟರು ಹಳ್ಳಿಗಳಿಗೆ, ತಮ್ಮ ಫಾರಂ ಹೌಸ್‌ಗಳಿಗೆ ತಮ್ಮ ವಾಸ್ತವ್ಯ ಬದಲಾಯಿಸಿಕೊಂಡು, 'ಸಾಂಧರ್ಭಿಕ ಕೃಷಿ'ಯಲ್ಲಿ ತೊಡಗಿದ್ದಾರೆ.

  ಆದರೆ ನಟಿಯರು ಹೀಗೆ ಕೃಷಿಗೆ ಇಳಿದಿರುವುದು ಕಡಿಮೆ. ಕನ್ನಡದಲ್ಲಿಯೂ ನಟಿಸಿರುವ ಬಾಲಿವುಡ್‌ ನಟಿ ರವೀನಾ ಟಂಡನ್ ಈ ಲಾಕ್‌ಡೌನ್ ಅವಧಿಯಲ್ಲಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ನಟಿ ರವೀನಾ ಟಂಡನ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವಿಡಿಯೋದಲ್ಲಿ ರವೀನಾ ಸಲಿಕೆ ಹಿಡಿದು ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ.

  ವಿಡಿಯೋ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ರವೀನಾ ಟಂಡನ್, 'ತೋಟದಲ್ಲಿ ಕೆಲಸಗಾರರು ಉಳಿಸಿ ಹೋಗಿದ್ದ ಪ್ಲಾಸ್ಟಿಕ್ ಅನ್ನು ಹೆಕ್ಕಿ ತೆಗೆಯುವ ಕಾರ್ಯ ಮಾಡಿದೆ. ನನ್ನ ತೋಟದಲ್ಲಿ ಮಾತ್ರವಲ್ಲದೆ ಅಕ್ಕ-ಪಕ್ಕದ ಜಮೀನಿನಲ್ಲಿಯೂ ಇದ್ದ ಪ್ಲಾಸ್ಟಿಕ್ ಅನ್ನು ಆಯ್ದು ಸ್ವಚ್ಛತೆ ಕಾರ್ಯ ಮಾಡಿದೆವು. ಈ ವೀಕೆಂಡ್‌ ಹೀಗೆ ಉತ್ತಮ ಕಾರ್ಯದೊಂದಿಗೆ ಸಮಾಪ್ತಿಯಾಯಿತು' ಎಂದಿದ್ದಾರೆ ರವೀನಾ ಟಂಡನ್.

  ರವೀನಾ ಮಾಡಿರುವ ಕಾರ್ಯಕ್ಕೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'ನಿಜವಾಗಿಯೂ ನೀವು ತೋಟದಲ್ಲಿ ಕೆಲಸ ಮಾಡಿದಿರಾ?' ಎಂದು ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

  ನಟಿ ರವೀನಾ ಟಂಡನ್ ಕೊರೊನಾ ಸಂಕಷ್ಟದ ಸಮಯದಲ್ಲಿ ಅಗತ್ಯದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಉಚಿತ ಆಹಾರ, ದಿನಸಿ ವಿತರಣೆ ಜೊತೆಗೆ ಮುಂಬೈ ಮತ್ತು ದೆಹಲಿಗಳಲ್ಲಿ ಉಚಿತ ಆಮ್ಲಜನಕ ಸಿಲಿಂಡರ್‌ಗಳನ್ನು ಸಹ ಒದಗಿಸಿದ್ದರು.

  Recommended Video

  ಗುಟ್ಟಿನ ಮದುವೆಯ ಬಗ್ಗೆ ಮಾತನಾಡಿದ ಪ್ರಣೀತಾ | Filmibeat Kannada

  ಕನ್ನಡದಲ್ಲಿ ಪ್ರೀತ್ಸೆ, ಉಪೇಂದ್ರ ಸಿನಿಮಾಗಳಲ್ಲಿ ನಟಿಸಿದ್ದ ರವೀನಾ ಟಂಡನ್ ಇದೀಗ 'ಕೆಜಿಎಫ್ 2' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಖಡಕ್ ರಾಜಕಾರಣಿ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಲಿದ್ದಾರೆ.

  English summary
  Actress Raveena Tandon shared video of her working in her farm land. She said she picked up plastic left on her farmland.
  Tuesday, June 1, 2021, 9:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X