6 ಸೂಪರ್ ಹಿಟ್‌ ಸಿನಿಮಾಗಳಲ್ಲಿ ನಟಿಸಲ್ಲ ಎಂದಿದ್ದ ರವೀನಾ ಟಂಡನ್; ಅವು ಯಾವುವು ಗೊತ್ತೇ?

By ಅನಿತಾ ಬನಾರಿ

ಬಹುಭಾಷಾ ನಟಿ ಬಾಲಿವುಡ್ ಸುಂದರಿ ರವೀನಾ ಟಂಡನ್ ಹಲವಾರು ದಶಕದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿದ್ದಾರೆ. ಬಹಳ ಸಣ್ಣ ವಯಸ್ಸಿಗೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಇವರು ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ 'ಕೆಜಿಎಫ್' ಸಿನಿಮಾದಲ್ಲಿ ನಟಿಸಿದ ಮೇಲಂತೂ ಇವರಿಗೆ ಬಹಳಷ್ಟು ಜನಪ್ರಿಯತೆ ಸಿಕ್ಕಿದೆ.

ಈ ಚೆಂದುಳ್ಳಿ ಚೆಲುವೆ ರವೀನಾ ಟಂಡನ್‌ಗೆ ಇದೀಗ ಐವತ್ತೊಂದು ವರ್ಷ. ಕಳೆದ 33 ವರ್ಷಗಳಿಂದಲೂ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ನಟಿ ರವಿನಾ ಟಂಡನ್ ತೊಡಗಿಸಿಕೊಂಡಿದ್ದಾರೆ.

Raveena Tondon Rejected movies

1991ರಲ್ಲಿ ಮೊದಲ ಬಾರಿ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ ರವೀನಾ ಟಂಡನ್ ಅದಾದ ಮೇಲೆ ಹಲವಾರು ಭಾಷೆಗಳಲ್ಲಿ ನಟಿಯಾಗಿ ನಟಿಸಿದ್ದಾರೆ. ಮುಖ್ಯವಾಗಿ ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಈಕೆ ಅಭಿನಯಿಸಿದ್ದು, ಬಹುಭಾಷಾ ನಟಿ ಎಂಬ ಹೆಗ್ಗಳಿಕೆ ಇವರಿಗಿದೆ.

ಹೀಗಿರುವಾಗ ನಟಿ ರವೀನಾ ಟಂಡನ್ ತಮ್ಮ ನಟನಾ ಜರ್ನಿಯಲ್ಲಿ ರಿಜೆಕ್ಟ್ ಮಾಡಿರುವಂತಹ ಸಿನಿಮಾಗಳು ನಂತರ ಸೂಪರ್ ಹಿಟ್ ಆದ ದಾಖಲೆಗಳಿವೆ. ರವೀನಾ ಟಂಡನ್ ರಿಜೆಕ್ಟ್ ಮಾಡಿದ ಸಿನಿಮಾಗಳು ಬೇರೆ ನಟಿಯರಿಗೆ ವರದಾನವಾಗಿ ಮೂಡಿ ಬಂತು. ಆ ಸಿನಿಮಾಗಳು ಯಾವ್ಯಾವು? ಎಂದು ನೋಡೋಣ ಬನ್ನಿ..

Raveena Tondon Rejected movies

ದಿಲ್ ಸೆ

ನಟ ಶಾರುಖ್ ಖಾನ್ ಸೂಪರ್ ಹಿಟ್ ಸಿನಿಮಾ 'ದಿಲ್ ಸೆ' ಯಲ್ಲಿ "ಚಯ್ಯಾ ಚಯ್ಯ.." ಹಾಡಿಗೆ ಟ್ರೈನ್ ಮೇಲೆ ಡ್ಯಾನ್ಸ್ ಮಾಡಲು ಮೊದಲು ರವೀನಾ ತಂಡನ್‌ಗೆ ಆಫರ್ ಬಂದಿತ್ತು. ಆದರೆ, ಆಕೆ ಬೇಡ ಎಂದ ಮೇಲೆ ಮಲೈಕಾ ಆರೋರಗೆ ಆ ಅವಕಾಶ ಸಿಕ್ಕಿತ್ತು. ಈ ಹಾಡು ಮಲೈಕಾ ಅರೋರರನ್ನು ಫೇಮಸ್ ಮಾಡಿತ್ತು.

ದಿಲ್ ತೋ ಪಾಗಲ್ ಹೈ

ಶಾರುಖ್ ಖಾನ್ ಅವರ ನಟನೆಯ 'ದಿಲ್ ತೋ ಪಾಗಲ್ ಹೈ' ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಹಾಗೂ ಕರಿಷ್ಮಾ ಕಪೂರ್ ನಟಿಸಿದ್ದಾರೆ. ಕರೀಷ್ಮಾ ಕಪೂರ್ ನಟಿಸಿದ್ದ ರೋಲ್‌ ಅನ್ನು ರವೀನಾ ಟಂಡನ್ ಮಾಡಬೇಕಿತ್ತು. ಆದರೆ, ಯಾಕೆ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದರು ಎಂಬ ಮಾಹಿತಿ ಮಾತ್ರ ತಿಳಿದಿಲ್ಲ.

ಡರ್

ನಟ ಶಾರುಖ್ ಖಾನ್ ನಟಿಸಿದ ಸೂಪರ್ ಹಿಟ್ ಸಿನಿಮಾಗಳಲ್ಲಿ 'ಡರ್' ಕೂಡ ಒಂದು. ಈ ಸಿನಿಮಾಗೆ ನಾಯಕ ನಟಿಯಾಗಿ ರವೀನಾ ಟಂಡನ್‌ಗೆ ಅವಕಾಶ ಸಿಕ್ಕಿತ್ತು. ಆದರೆ, ಅವರು ರಿಜೆಕ್ಟ್ ಮಾಡಿದ್ದರಿಂದ ನಂತರ ಜೂಹಿ ಚಾವ್ಲಾ ನಾಯಕಿಯಾಗಿ ಕಾಣಿಸಿಕೊಂಡರು.

ಫೂಲ್ ಅವ್ರ್ ಕಾಂಟೆ

ನಟ ಅಜಯ್ ದೇವಗನ್ ಅಭಿನಯದ 'ಫೂಲ್ ಔರ್ ಕಾಂಟೆ' ಸಿನಿಮಾಗೆ ನಾಯಕ ನಟಿಯಾಗಿ ಮೊದಲ ಆಯ್ಕೆ ರವೀನಾ ಟಂಡನ್ ಅವರದಾಗಿತ್ತು. ಆದರೆ, ಆಕೆ ಒಲ್ಲೆ ಎಂದಿದ್ದರಿಂದ ನಂತರ ನಟಿ ಮಧು ಈ ಅವಕಾಶವನ್ನು ಪಡೆದರು.

ಜಂಗಲ್

ಸುನೀಲ್ ಶೆಟ್ಟಿ ನಟಿಸಿದ್ದ 'ಜಂಗಲ್' ಸಿನಿಮಾ ಸೂಪರ್ ಹಿಟ್ ಆಗಿರುವುದು ಸಿನಿ ಪ್ರಿಯರಿಗೆ ತಿಳಿದೇ ಇದೆ. ಇದಕ್ಕೆ ಮೊದಲು ರವೀನಾ ಟಂಡನ್ ನವರು ಆಯ್ಕೆಯಾಗಿದ್ದರು. ಆದರೆ ಅವರು ರಿಜೆಕ್ಟ್ ಮಾಡಿದ ಮೇಲೆ ಈ ಆಫರ್ ಊರ್ಮಿಳಾ ಮಾತ್ತೊಂಡ್ಕರ್‌ಗೆ ಆ ಪಾತ್ರ ಮಾಡಿದರು.

ಪ್ರೇಮ್ ಖೈದಿ

'ಪ್ರೇಮ್ ಖೈದಿ' ಸಿನಿಮಾದಲ್ಲಿ ಮೊದಲ ಅವಕಾಶ ರವೀನಾ ಟಂಡನ್‌ಗೆ ಅವಕಾಶ ಸಿಕ್ಕಿತ್ತು. ಆದರೆ, ಅವರು ಒಪ್ಪದ ಕಾರಣ ನಂತರ ಕರೀಷ್ಮಾ ಕಪೂರ್ ಈ ಸಿನಿಮಾ ಮಾಡಿದರು.

More from Filmibeat

English summary
Actress Raveena Tandon has rejected six super hit films see the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X