For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ ಗೆ ಸಮಯ ಕೊಡಲು ಆಗುತ್ತಿಲ್ಲ, ಮದುವೆ ಮಾತೆಲ್ಲಿ ಎಂದ ನಟಿ ರಿಚಾ

  |

  ಸ್ಯಾಂಡಲ್ ವುಡ್ ನ ಶಕೀಲಾ, ಬಾಲಿವುಡ್ ನಟಿ ರಿಚಾ ಚಡ್ಡಾ ಮದುವೆ, ಬಾಯ್ ಫ್ರೆಂಡ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಶಕೀಲಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟುರುವ ರಿಚಾ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

  ರಿಚಾ ಬಾಲಿವುಡ್ ಮತ್ತು ಹಾಲಿವುಡ್ ನಟ ಅಲಿ ಫಜಲ್ ಜೊತೆ ಪ್ರೀತಿಯಲ್ಲಿ ಇರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಅನೇಕ ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದು ಮದುವೆ ಯಾವಾಗ ಎನ್ನುವ ಪ್ರಶ್ನೆ ಅನೇಕ ಬಾರಿ ಎದುರಾಗಿದೆ. ಈ ಪ್ರಶ್ನೆಗೆ ಈಗ ರಿಚಾ ದೀರ್ಘವಾದ ಉತ್ತರ ನೀಡಿದ್ದಾರೆ.

  ಸಂಭಾವನೆ ಹೆಚ್ಚಿಸಿಕೊಂಡ ಅಕ್ಷಯ್: ವಿಜಯ್ ಹಿಂದಿಕ್ಕಿ ಮೊದಲ ಸ್ಥಾನ ಪಡೆಯುತ್ತಾರಾ ಕಿಲಾಡಿ?ಸಂಭಾವನೆ ಹೆಚ್ಚಿಸಿಕೊಂಡ ಅಕ್ಷಯ್: ವಿಜಯ್ ಹಿಂದಿಕ್ಕಿ ಮೊದಲ ಸ್ಥಾನ ಪಡೆಯುತ್ತಾರಾ ಕಿಲಾಡಿ?

  ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಿಚಾ "ಇಬ್ಬರು ತುಂಬ ಬ್ಯುಸಿ ಇದ್ದೀವಿ. ಇಬ್ಬರಿಗೂ ಸಮಯವೆ ಸಿಗುತ್ತಿಲ್ಲ. ಅಲಿ ಫಜಲ್ ಗೆ ತಿಂಗಳಿಗೆ ಐದು ದಿನನೂ ಅವರಿಗಾಗಿ ಸಮಯ ಸಿಗುತ್ತಿಲ್ಲ. ಇಬ್ಬರು ಮದುವೆ ಆಗಲು ಭಯ ಆಗುತ್ತೆ. ಇಬ್ಬರು ಒಬ್ಬರಿಗೊಬ್ಬರು ಸರಿಯಾಗಿ ಭೇಟಿಯಾಗಲು ಸಮಯ ಸಿಗುತ್ತಿಲ್ಲ. ಕಳೆದ ಎರಡು ತಿಂಗಳಲ್ಲಿ ನಾವಿಬ್ಬರು ಎರಡು ಬಾರಿ ಭೇಟಿಯಾಗಿದ್ದೀವಿ ಅಷ್ಟೆ. ಇಬ್ಬರು ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತೀವಿ. ಇಂತಹ ಸಂದರ್ಭದಲ್ಲಿ ಮದುವೆ ಆಗುವುದು ಹೇಗೆ ಹೇಳಿ? ಎಂದು ಹೇಳಿದ್ದಾರೆ.

  ರಿಚಾ ಸದ್ಯ ಕನ್ನಡದ ಶಕೀಲಾ ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಂಗನಾ ಅಭಿನಯದ ಬಹುನಿರೀಕ್ಷೆಯ ಪಂಗಾ ಸಿನಿಮಾದ ಪ್ರಮುಕ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ರಿಚಾ ಗೆಳೆಯ ಅಲಿ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Bollywood Actress Richa Chadda reveals her marriage plans with her boyfriend Ali Fazal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X