Rimi Sen: ನಟಿಗೆ ಚಳ್ಳೆ ಹಣ್ಣು ತಿನ್ನಿಸಿದ ಗೆಳೆಯ, 4 ಕೋಟಿ ವಂಚನೆ

ನಟ-ನಟಿಯರು ಮೋಸ ಹೋಗುವುದು ಹೊಸದೇನಲ್ಲ. ಸಾಕಷ್ಟು ಹಣ ಆಸ್ತಿ ಹೊಂದಿರುವ ಅವರ ಸುತ್ತ ಮೋಸ ಮಾಡಲೆಂದೇ ಕೆಲವಾರು ಮಂದಿ ಓಡಾಡಿಕೊಂಡಿರುತ್ತಾರೆ ಕೂಡ.

ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ನಟಿಗೆ ಆಕೆಯ ಗೆಳೆಯನೊಬ್ಬನೆ ಸರಿಯಾಗಿ ಚಳ್ಳೆಹಣ್ಣು ತಿನ್ನಿಸಿದ್ದಾನೆ.

ಹಿಂದಿಯ 'ಧೂಮ್' ಸಿನಿಮಾ ಸರಣಿ ಸೇರಿದಂತೆ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ 'ಅಂದರಿವಾಡು' ಹಾಗೂ ಇನ್ನಿತರೆ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ರಿಮಿ ಸೇನ್‌ ಅವರು ತಮ್ಮ ಗೆಳೆಯನಿಂದ ಬರೋಬ್ಬರಿ 4.14 ಕೋಟಿ ರುಪಾಯಿ ಮೋಸ ಹೋಗಿದ್ದಾರೆ.

Actress Rimi Sen Cheated 4.16 Crore Rs By Her Friend

ಇತ್ತೀಚೆಗೆ ಹೆಚ್ಚೇನು ಸಿನಿಮಾ ರಂಗದಲ್ಲಿ ಸಕ್ರಿಯರಾಗಿಲ್ಲದ ರಿಮಿ ಸೇನ್ ಮೂರು ವರ್ಷಗಳ ಹಿಂದೆ ಜಿಮ್‌ನಲ್ಲಿ ವ್ಯಾಸ್ ಎಂಬುವರನ್ನು ಭೇಟಿ ಮಾಡಿದರಂತೆ, ವ್ಯಾಸ್ ತಮ್ಮನ್ನು ತಾವು ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದಾರೆ. ಪರಿಚಯ ಗೆಳೆತನಕ್ಕೆ ತಿರುಗಿದ ಬಳಿಕ ತಾನು ಪ್ರಾರಂಭಿಸುತ್ತಿರುವ ಹೊಸ ಸಂಸ್ಥೆಯಲ್ಲಿ ಹಣ ತೊಡಗಿಸುವಂತೆ ರಿಮಿ ಸೇನ್‌ಗೆ ವ್ಯಾಸ್ ಹೇಳಿದ್ದಾರೆ.

ಗೆಳೆಯ ವ್ಯಾಸ್‌ನ ಮಾತುಗಳನ್ನು ನಂಬಿ ರೀಮಿ ಸೇನ್ ಬರೋಬ್ಬರಿ 4.14 ಕೋಟಿ ರುಪಾಯಿಗಳನ್ನು ವ್ಯಾಸ್‌ ಗೆ ನೀಡಿದ್ದಾರೆ. ಆದರೆ ಆ ಆಸಾಮಿ ಹೊಸ ಸಂಸ್ಥೆ ಪ್ರಾರಂಭಿಸದೆ, ಆ ಹಣ ಎತ್ತಿಕೊಂಡು ಪರಾರಿಯಾಗಿದ್ದಾನೆ.

ಇದೀಗ ನಟಿ ರಿಮಿ ಸೇನ್ ಮುಂಬೈನ ಖಾರ್ ಪೊಲೀಸ್ ಠಾಣೆಗೆ ವ್ಯಾಸ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಚಾಲಾಕಿ ವಂಚಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಆತ ರಿಮಿ ಸೇನ್‌ಗೆ ಹೇಳಿದ್ದ ಬಹುತೇಕ ವಿಷಯಗಳು ಸುಳ್ಳೇ ಆಗಿದ್ದವು. ರಿಮಿ ಸೇನ್‌ಗೆ ವಂಚಿಸಲೆಂದೇ ಆತ ಇಷ್ಟು ವರ್ಷ ಹೊಂಚು ಹಾಕಿದ್ದ ಎನ್ನುವ ಅನುಮಾನವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.

2000 ರಲ್ಲಿ ಬೆಂಗಾಳಿ ಸಿನಿಮಾ ಮೂಲಕ ನಟನೆ ಆರಂಭಿಸಿದ ರಿಮಿ ಸೇನ್ ಆ ಬಳಿಕ ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿದರು. 'ಧೂಮ್' ಸಿನಿಮಾ ಸರಣಿಯಲ್ಲಿ ಅಭಿಷೇಕ್ ಬಚ್ಚನ್‌ರ ಪತ್ನಿಯ ಪಾತ್ರದಲ್ಲಿ ರಿಮಿ ಕಾಣಿಸಿಕೊಂಡಿದ್ದಾರೆ. 'ಅಂದರಿವಾಡು' ಸಿನಿಮಾದಲ್ಲಿ ಚಿರಂಜೀವಿ ಪ್ರೇಯಸಿ ಪಾತ್ರದಲ್ಲಿ ನಟಿಸಿದ್ದಾರೆ. 2016 ರಲ್ಲಿ ಬಿಡುಗಡೆ ಆಗಿರುವ 'ಬುಧಿಯಾ ಸಿಂಗ್: ಬಾರ್ನ್ ಟು ರನ್' ಸಿನಿಮಾ ರಿಮಿ ನಟನೆಯ ಕೊನೆಯ ಸಿನಿಮಾ.
ರಿಮಿ ಸೇನ್ ಹಿಂದಿ ಬಿಗ್‌ಬಾಸ್‌ನಲ್ಲಿಯೂ ಪಾಲ್ಗೊಂಡಿದ್ದರು.

More from Filmibeat

English summary
Actress Rimi Sen cheated 4.16 crore rs by her friend named Vyas. He convinced her to invest money into his new company. Now he is abscond.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X