For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಚಿತ್ರದಲ್ಲಿ ಸಮಂತಾಗೆ ಚಾನ್ಸ್‌!

  |

  ಬಾಲಿವುಡ್‌ ಸ್ಟಾರ್‌ ನಟ ಶಾರುಖ್ ಖಾನ್ ಹೆಸರು ಇತ್ತೀಚೆಗೆ ಹೆಚ್ಚಾಗಿ ಚಾಲ್ತಿಯಲ್ಲಿ ಇರುವುದು ತನ್ನ ಮಗನಿಂದಾಗಿ. ಶಾರುಖ್ ಪುತ್ರ ಆರ್ಯನ್‌ ಖಾನ್ ಡ್ರಗ್‌ ಕೇಸ್‌ ವಿಚಾರದಲ್ಲಿ ವಿಚಾರಣೆಗೆ ಒಳಗಾದಾಗಿನಿಂದಲೂ ಪ್ರತಿ ನಿತ್ಯ ಒಂದಲ್ಲಾ ಒಂದು ವಿಚಾರದಲ್ಲಿ ಶಾರುಖ್ ಖಾನ್ ಸುದ್ದಿ ಆಗುತ್ತಾ ಇರುತ್ತಾರೆ. ಇದೇ ವಿಚಾರವಾಗಿ ಪದೇಪದೇ ಶಾರುಖ್ ಖಾನ್ ಹೆಸರು ಮುಂಚೂಣಿಯಲ್ಲಿ ಬರುತ್ತಿದೆ. ಆದರೆ ಇದರ ನಡುವೆ ಶಾರುಖ್ ಮುಂದಿನ ಸಿನಿಮಾದ ಬಗ್ಗೆ ಹೊಸದೊಂದು ಸುದ್ದಿ ಹೊರ ಬಿದ್ದಿದೆ. ತಮಿಳು ನಿರ್ದೇಶಕ ಅಟ್ಲಿ ಕುಮಾರ್ ನಿರ್ದೇಶನದಲ್ಲಿ ಶಾರು ಖಾನ್ ಅಭಿನಯಿಸುತ್ತಿರೊ ಚಿತ್ರದ ನಾಯಕಿ ಬಗ್ಗೆ ಹೊಸ ಸುದ್ದಿ ಬಂದಿದೆ.

  ನಯನತಾರ ಜಾಗಕ್ಕೆ ನಟಿ ಸಮಂತಾ ಎಂಟ್ರಿ!

  ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'ಲಯನ್' ಎನ್ನುವ ಶೀರ್ಷಿಕೆಯನ್ನು ಇಡಲಾಗಿದೆ. ಜೊತೆಗೆ ಚಿತ್ರದ ಶೂಟಿಂಗ್‌ ಕೂಡ ಈಗಾಗಲೇ ಆರಂಭವಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪುಣೆಯಲ್ಲಿ ಲಯನ್‌ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಶೂಟಿಂಗ್‌ಗೂ ಮುನ್ನವೇ ಚಿತ್ರದ ನಾಯಕಿಯಾಗಿ ನಟಿ ನಯನತಾರ ಆಯ್ಕೆ ಆಗಿದ್ದರು. ಶಾರುಖ್ ಖಾನ್ ಜೊತೆಗೆ ನಯನತಾರ ಲಯನ್‌ ಚಿತ್ರದಲ್ಲಿ ತೆರೆಹಂಚಿಕೊಳ್ಳಲಿದ್ದಾರೆ ಅನ್ನೊ ಸುದ್ದಿಯೂ ಹೊರ ಬಂದಿತ್ತು. ಈಗ ಚಿತ್ರದ ನಾಯಕಿ ಬದಲಾಗೋ ಸಂದರ್ಭ ಎದುರಾಗಿದೆ. ನಯನತಾರ ಬದಲಿಗೆ ಚಿತ್ರಕ್ಕೆ ಸಮಂತಾ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಈ ಚಿತ್ರ ಪ್ರಕಟವಾದಾಗ ಚಿತ್ರಕ್ಕೆ ನಾಯಕಿ ಯಾರು ಅನ್ನುವ ಕುತೂಹಲ ಹೆಚ್ಚಾಗಿತ್ತು. ಕುತೂಹಲಕ್ಕೆ ಉತ್ತರವಾಗಿ ಸಿಕ್ಕಿದ್ದು ನಟಿ ನಯನತಾರ ಹೆಸರು. ನಯನತಾರಾ ಮತ್ತು ಶಾರುಖ್‌ ಖಾನ್ ಚಿತ್ರದಲ್ಲಿ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಅನ್ನೋ ನಿರೀಕ್ಷೆಗಳು ಜೋರಾಗಿ ಇದ್ದವು. ಇದೀಗ ನಾಯಕಿ ಬದಲಾವಣೆ ಆಗುತ್ತಿದೆ. ನಯಂತರ ಜಾಗಕ್ಕೆ ಸಮಂತಾ ಎಂಟ್ರಿ ಕೊಡುತ್ತಿದ್ದಾರೆ. ಶಾರುಖ್ ಖಾನ್ ಜೊತೆಗೆ ಸಮಂತ ನಾಯಕಿಯಾಗಿ ಲಯನ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಅನ್ನುವ ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ.

  ನಯನತಾರಾ ದಿನಾಂಕ ಹೊಂದಾಣಿಕೆಯ ಸಮಸ್ಯೆ!

  ಅಷ್ಟಕ್ಕೂ ನಯನತಾರಾ ಸಿನಿಮಾ ಬಿಡಲು ಕಾರಣ ಆಗುತ್ತಿರುವುದು ದಿನಾಂಕ ಹೊಂದಾಣಿಕೆ ಸಮಸ್ಯೆ. ನಯನತಾರಾಗೆ ಇದೇ ಅಕ್ಟೋಬರ್‌ನಲ್ಲಿ ಶೂಟಿಂಗ್‌ ಡೇಟ್‌ ನೀಡಲಾಗಿತ್ತು. ಆದರೆ ಶಾರುಖ್ ಖಾನ್‌ ಪುತ್ರ ಆರ್ಯನ್ ಖಾನ್ ವಿಚಾರದಲ್ಲಿ ನಿರತರಾಗಿ ಇರುವುದರಿಂದ ಶೂಟಿಂಗ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

  ಹಾಗಾಗಿ ಇದೀಗ ಶಾರುಖ್ ಮತ್ತು ನಯನತಾರಾ ಇಬ್ಬರ ಶೂಟಿಂಗ್‌ ಡೇಟ್‌ಗಳು ಹೊಂದಾಣಿಕೆ ಮಾಡುವುದು ಚಿತ್ರತಂಡಕ್ಕೆ ಸವಾಲಾಗಿದೆ. ಇದೇ ಕಾರಣಕ್ಕೆ ಈಗ ನಯನತಾರಾ ಸಿನಿಮಾದಿಂದ ಹೊರಬರಲು ನಿರ್ಧಾರ ಮಾಡಿದ್ದಾರಂತೆ. ಹಾಗಾಗಿ ನಿರ್ದೇಶಕ ಅಟ್ಲಿ ಈಗ ನಟಿ ಸಮಂತಾ ಮೊರೆ ಹೋಗಿದ್ದಾರೆ. ಅದಾಗಲೇ ಅಟ್ಲಿ ಸಮಂತಾ ಜೊತೆಗೆ ಒಂದು ಸುತ್ತಿನ ಮಾತು ಕಥೆಯನ್ನೂ ಮುಗಿಸಿದ್ದಾರಂತೆ.

  ಶಾರುಖ್ ಖಾನ್ ಮುಂದಿನ ಸಿನಿಮಾ ಪಠಾಣ್. ಈ ಚಿತ್ರದಲ್ಲಿ ಶಾರುಖ್ ಖಾನ್ ಸ್ಪೈ ಎಜೆಂಟ್‌ ಆಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಶಾರುಖ್‌ಗೆ ನಟ ದೀಪಿಕಾ ಪಡುಕೋಣೆ ಚಿತ್ರದಲ್ಲಿ ಜೊತೆಯಾಗಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ಸಿದ್ದಾರ್ಥ್ ಆನಂದ ನಿರ್ದೇಶನ ಮಾಡುತ್ತಿದ್ದಾರೆ. ಪಠಾಣ್ 2022 ರಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ಆದರೆ ಲಯನ್ ಚಿತ್ರದಲ್ಲಿ ರಿವೇಂಜ್ ತೆಗೆದುಕೊಳ್ಳುವ ಕಥೆ ಇದೆ. ಇದರಲ್ಲಿ ಶಾರುಖ್‌ಖಾನ್ ಸಿಕ್ಕಾಪಟ್ಟೆ ಆ್ಯಕ್ಷನ್‌ ಕೂಡ ಮಾಡಲಿದ್ದಾರಂತೆ.

  ಇತ್ತ ವಿಚ್ಛೇದನದ ಬಳಿಕ ಸಮಂತಾಗೆ ಮೊದಲು ಒಲಿದು ಬಂದಿರೊ ಬಹುದೊಡ್ಡ ಪ್ರಾಜೆಕ್ಟ್. ಸದ್ಯ ಸಮಂತ " ಶಾಕುಂತಲಂ" ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಈ ಚಿತ್ರದ ರಿಲೀಸ್‌ಗಾಗಿ ಸಮಂತಾ ಎದುರು ನೋಡುತ್ತಿದ್ದಾರೆ. ಈಗ ಶಾರುಖ್ ಖಾನ್ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಸಮಂತಾಗೆ ದಕ್ಕಿದೆ. ಸಮಂತಾ ಗ್ರೀನ್‌ ಸಿಗ್ನಲ್ ಕೊಟ್ಟ ಕೂಡಲೆ ಚಿತ್ರತಂಡ ಅಧಿಕೃತವಾಗಿ ಸುದ್ದಿ ಪ್ರಕಟ ಮಾಡಲಿದೆ.

  English summary
  Actress Samantha Got A Chance To Share Screen With Shah Rukh Khan,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X