ಎಲ್ಲರೂ ಮಾಡಿಸಿಕೊಳ್ತಿದ್ದಾರೆ ನೀವು ಮಾಡಿಸಿಕೊಳ್ಳಿ ; ಬಾಲಿವುಡ್‌ನ ಕಹಿ ಸತ್ಯ ಹೇಳಿದ ಸಮೀರಾ ರೆಡ್ಡಿ...!
ಎರಡು ಸಾವಿರದ ಇಸವಿಯ ಆಸು ಪಾಸಿನಲ್ಲಿ ಚಿರಂಜೀವಿ, ಎನ್ ಟಿ ಆರ್ ಇತ್ಯಾದಿ ಸ್ಟಾರ್‌ಗಳ ಜೊತೆ ರೋಮ್ಯಾನ್ಸ್ ಮಾಡಿದ ಸಮೀರಾ ರೆಡ್ಡಿಯವರನ್ನು ಯಾರು ತಾನೇ ಮರೆಯಲು ಸಾಧ್ಯ. ಕನ್ನಡದ ವರದನಾಯಕ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದ ಸಮೀರಾ ರೆಡ್ಡಿ ಸದ್ಯಕ್ಕೆ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಮನೆ-ಗಂಡ-ಮಕ್ಕಳು ಎಂದು ಸಂಸಾರದಲ್ಲಿ ತಲ್ಲೀನರಾಗಿದ್ದಾರೆ
ಇಂಥ ಸಮೀರ್ ಈ ಹಿಂದೆ ಕೂಡ ಅನೇಕ ಬಾರಿ ಬಾಲಿವುಡ್‌ನಲ್ಲಿ ತಮಗಾದ ಕಹಿ ಅನುಭವಗಳನ್ನ ಹಂಚಿಕೊಂಡಿದ್ದಾರೆ. ನನ್ನ ಸ್ತನದ ಮೇಲೆ ನಿರ್ಮಾಪಕರ ಕಣ್ಣು ಬಿದ್ದಿತ್ತು ಎಂದಿದ್ದಾರೆ. ಈಗ ಇನ್ನೊಮ್ಮೆ ಈ ವಿಚಾರವನ್ನ ಸಮೀರಾ ರೆಡ್ಡಿ ಪ್ರಸ್ತಾಪಿಸಿದ್ದಾರೆ.

ಹೌದು, ಹಿಂದೂಸ್ತಾನ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಮೀರಾ, ನಾನು ಚಿತ್ರರಂಗದಲ್ಲಿ ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ ಅನೇಕರು ಸ್ತನದ ಗಾತ್ರ ಹೆಚ್ಚಿಸಿಕೊಳ್ಳಿ ಎಂಬ ಸಲಹೆ ನೀಡಿದರು. ಕೆಲವರು ದುಂಬಾಲು ಬಿದ್ದರು. ಎಲ್ಲರೂ ಶಸ್ತ್ರ ಚಿಕಿತ್ಸೆಯ ಮೂಲಕ ಮಾಡಿಸಿಕೊಳ್ತಿದ್ದಾರೆ. ನಿಮಗ್ಯಾಕೇ ಬೇಡ ಎಂಬ ಪ್ರಶ್ನೆಯನ್ನೂ ಕೇಳಿದರು ಎಂದಿರುವ ಸಮೀರಾ ನನ್ನ ಮೇಲೆ ಎಷ್ಟೇ ಒತ್ತಡ ಹಾಕಿದರೂ ನಾನು ಮಾತ್ರ ಬೂಬ್ ಜಾಬ್ ಸರ್ಜರಿ (ಬ್ರೆಸ್ಟ್ ಇಂಪ್ಲಾಂಟೇಶನ್) ಗೆ ಒಪ್ಪಲಿಲ್ಲ. ಸರ್ಜರಿಯನ್ನ ಮಾಡಿಸಿಕೊಳ್ಳಲಿಲ್ಲ ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ಸಮೀರಾ ಪ್ಲ್ಯಾಸ್ಟಿಕ್ ಸರ್ಜರಿ ಮತ್ತು ಬೊಟಾಕ್ಸ್ ಮಾಡಿಸುವವರ ಬಗ್ಗೆ ನಾನೇನು ಹೇಳ್ತಿಲ್ಲ. ಆದ್ರೆ ನನಗೆ ಇದು ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ.ಆಂತರಿಕವಾಗಿ ಚೆನ್ನಾಗಿರೋದು ಮುಖ್ಯ ಎಂದು ಕೂಡ ಸಮೀರಾ ಹೇಳಿದ್ದಾರೆ. ಇನ್ನೂ ಅವತ್ತು ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ನನಗೆ ಇವತ್ತು ಕೂಡ ಹೆಮ್ಮೆ ಇದೆ ಎಂದಿರುವ ಸಮೀರಾ ಇದೇ ಸಂದರ್ಶನದಲ್ಲಿ ತಮ್ಮ ನಿಜವಾದ ವಯಸ್ಸು ಎಷ್ಟು..? ಎನ್ನುವುದನ್ನೂ ಕೂಡ ಹೇಳಿದ್ದಾರೆ.

ಹೌದು. ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಮ್ಮ ನಿಜವಾದ ವಯಸ್ಸು ಹೇಳಲು ಅನೇಕ ನಾಯಕಿಯರು ಹಿಂದೇಟು ಹಾಕುತ್ತಾರೆ. ಆದರೆ ತದ್ವಿರುದ್ದವಾಗಿರುವ ಸಮೀರಾ ರೆಡ್ಡಿ, ನನ್ನ 45ನೇ ವಯಸ್ಸಿನಲ್ಲಿ ನಾನು ಈಗ ಹಾಟ್ ಆಗಿ ಕಾಣುತ್ತೇನೆ ಎಂದಿದ್ದಾರೆ. ಇನ್ನೂ ನನಗೆ 40 ವಯಸ್ಸಾದರೂ ಇಂಟರ್‌ನೆಟ್ ನಲ್ಲಿ ನನ್ನ ವಯಸ್ಸು 38 ಎಂದು ಕಾಣಿಸುತ್ತಿತ್ತು ಎಂದಿರುವ ಸಮೀರಾ, ನಾನು ತಕ್ಷಣ ನನ್ನ ವಯಸ್ಸನ್ನು ಬದಲಿಸಿದೆ. ನನಗೆ 40 ವರ್ಷ ಹೇಳಿಕೊಳ್ಳಲು ಹೆಮ್ಮೆಯಿತ್ತು ಎಂದು ಕೂಡ ಹೇಳಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣಕ್ಕೆ ಮೊದಲ ಬಾರಿ ಬಂದಾಗ, ಫೋಟೋ ಮತ್ತು ವಿಡಿಯೋಗಳನ್ನ ಹಾಕುವ ಸಮಯದಲ್ಲಿ ಕೂಡ ಫಿಲ್ಟರ್ ಬಳಸುವಂತೆ ನನಗೆ ಒತ್ತಡ ಹೇರಿದ್ದರು ಎಂದು ಕೂಡ ಸಮೀರಾ ರೆಡ್ಡಿ ಇದೇ ಸಂದರ್ಶನದಲ್ಲಿ ಹೇಳಿದ್ದಾರೆ. ಅಂದ್ಹಾಗೇ ಜನವರಿ 21-2014ರಲ್ಲಿ ಸಮೀರಾ ರೆಡ್ಡಿ, ಅಕ್ಷಯ್ ವರ್ದೆ ಅವರ ಜೊತೆ ಸಪ್ತಪದಿಯನ್ನ ತುಳಿದರು. ಅಲ್ಲಿಂದಾಚೆ ಚಿತ್ರರಂಗದಿಂದ ದೂರ ಇರುವ ಸಮೀರಾಗೆ ಎರಡು ಮುದ್ದಾದ ಮಕ್ಕಳಿದ್ದಾರೆ. ಸದ್ಯಕ್ಕೆ ಸಮೀರಾ ರೆಡ್ಡಿ ಅವರ ಈ ಮಾತು ಬಾಲಿವುಡ್‌ನಲ್ಲಿ ಮತ್ತೊಮ್ಮೆ ಚರ್ಚೆಯನ್ನ ಹುಟ್ಟು ಹಾಕಿದೆ.


Click it and Unblock the Notifications











