ಬುರ್ಖಾ ಧರಿಸುವಂತೆ ಒತ್ತಡ; ಗಣೇಶ್ ಸಿನಿಮಾ ನಾಯಕಿಯ ಹೊಸ ವಿವಾದ

ಮಾಜಿ ನಟಿ ಸನಾ ಖಾನ್ ಆಗಾಗ್ಗೆ ಸುದ್ದಿ ಆಗುತ್ತಿರುತ್ತಾರೆ. ಒಂದ್ಕಾಲದಲ್ಲಿ ನಟಿಯಾಗಿದ್ದ ಮಿಂಚಿದ್ದ ಆಕೆ ಬಳಿಕ ಮುಸ್ಲಿಂ ಧರ್ಮಗುರು ಕೈ ಹಿಡಿದು ಸಿನಿಮಾಗಳಿಂದ ದೂರಾಗಿದ್ದರು. ಎರಡು ತಿಂಗಳ ಹಿಂದೆಯಷ್ಟೇ ದಂಪತಿ ತಮ್ಮ 2ನೇ ಮಗುವನ್ನು ಸ್ವಾಗತಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕೆ ಬಹಳ ಆಕ್ಟೀವ್ ಆಗಿದ್ದಾರೆ. ಆಗಾಗ್ಗೆ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಿದ್ದಾರೆ.

ಸದ್ಯ ಹೊಸದೊಂದು ವಿವಾದದಿಂದ ಸನಾ ಖಾನ್ ಸುದ್ದಿ ಆಗುತ್ತಿದ್ದಾರೆ. ಯೂಟ್ಯೂಬರ್ ಸಂಭಾವನ ಸೇಠ್ ಅವರಿಗೆ ಬುರ್ಖಾ ಧರಿಸುವಂತೆ ಸನಾ ಒತ್ತಡ ಹೇರಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಸದ್ಯ ಸಂಭಾವನ ಸೇಠ್ ಹಂಚಿಕೊಂಡಿರುವ ವೀಡಿಯೋದಲ್ಲಿ ಸನಾ ತಮಾಷೆಯಾಗಿ ಸಂಭಾವನಾ ಅವರನ್ನು ಬುರ್ಖಾ ಹಾಗೂ ದುಪಟ್ಟಾ ಧರಿಸುವಂತೆ ಒತ್ತಾಯಿಸುತ್ತಿರುವುದನ್ನು ನೋಡಬಹುದು.

Actress Sana Khan faces backlash for her burkha remarks with Sambhavna Seth

ಸಂಭಾವನಾಳ ಧರಿಸಿರುವ ಉಡುಪಿನ ಬಗ್ಗೆ ಸನಾ ತಮಾಷೆ ಮಾಡಿದ್ದಾರೆ. "ನಿನ್ನ ಬಳಿ ಒಳ್ಳೆಯ ಸಲ್ವಾರ್ ಕಮೀಜ್ ಇಲ್ವಾ? ಕಪಾಳಕ್ಕೆ ಬಾರಿಸ್ಲಾ? ನಿನ್ನ ದುಪಟ್ಟಾ ಎಲ್ಲಿದೆ? ಬುರ್ಖಾ ಲಾವೋ (ಬುರ್ಖಾ ತನ್ನಿ), ಸಂಭಾವನಾಳನ್ನು ಬುರ್ಖಾ ಧರಿಸೋಕೆ ಹೇಳಿ" ಎಂದಿದ್ದಾರೆ. ಬಳಿಕ ಸಂಭಾವನಾ ತಾನು 15 ಕೆಜಿ ತೂಕ ಹೆಚ್ಚಿಸಿಕೊಂಡಿದ್ದೇನೆ, ತನ್ನ ಬಳಿ ಇರುವ ಯಾವುದೇ ಬಟ್ಟೆ ಈಗ ಸರಿಯಾಗಿ ಧರಿಸೋಕೆ ಸಾಧ್ಯವಾಗುತ್ತಿಲ್ಲ ಎಂದಿರುವುದು ಗೊತ್ತಾಗುತ್ತದೆ.

ಸದ್ಯ ವೀಡಿಯೋ ವೈರಲ್ ಆಗಿ ತರಹೇವಾರಿ ಕಾಮೆಂಟ್ಸ್ ಬರ್ತಿದೆ. ಸನಾ ಮಾತಿನಲ್ಲಿ ಯಾವುದೇ ತಪ್ಪಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಸನಾ ತನ್ನ ನಂಬಿಕೆಗಳನ್ನು ಸಂಭಾವನಾ ಮೇಲೆ ಹೇರುವುದು ಸರಿಯಲ್ಲ ಎಂದು ಟೀಕಿಸುತ್ತಿದ್ದಾರೆ. "ಸನಾಳ ವರ್ತನೆಯಿಂದ ಬೇಸರವಾಗುತ್ತಿದೆ. ಅವಳು 'ದುಪಟ್ಟಾ ನಹಿ ಹೈ, ಸಲ್ವಾರ್ ಕಮೀಜ್ ನಹಿ ಹೈ' ಎನ್ನುತ್ತಿದ್ದಾಳೆ. ಹೀಗೆ ಯಾರನ್ನಾದರೂ ಇಂಥದ್ದನ್ನು ಧರಿಸು ಎಂದು ಒತ್ತಾಯಿಸಲು ಅವಳು ಯಾರು?" ಎಂದು ನೆಟ್ಟಿಗರೊಬ್ಬರು ಕಾಮೆಂಟ್ಸ್ ಮಾಡಿದ್ದಾರೆ. "ಸನಾ ತನ್ನ ಸಂಸ್ಕೃತಿ ಮತ್ತು ತನ್ನ ಡ್ರೆಸ್ಸಿಂಗ್ ಸೆನ್ಸ್ ಅನ್ನು ಜನರು ಒಪ್ಪಿಕೊಳ್ಳಬೇಕೆಂದು ಬಯಸಿದರೆ, ಆಕೆ ಬೇರೆವರನ್ನು ಗೌರವಿಸುವುದು ಕಲಿಯಬೇಕು, ಇದು ಬಹಳ ಅತಿಯಾಯಿತು" ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಒಟ್ಟಾರೆ ವೀಡಿಯೋ ಹೊಸ ವಿವಾದದಲ್ಲಿ ಸನಾ ಸಿಲುಕುವಂತೆ ಮಾಡಿದೆ.

ಯೂಟ್ಯೂಬರ್ ಸಂಭಾವನ ಸೇಠ್ ತಮ್ಮ ಯೂಟ್ಯೂಬ್‌ ಚಾನಲ್‌ಗೆ 30 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್ ಹೊಂದಿದ್ದಾರೆ. ಸನಾ ಖಾನ್ ಜೊತೆ "ಸಂಥಿಂಗ್ ಸ್ಪೆಷಲ್ ವಿತ್ ಸನಾ ಖಾನ್" ಎಂದು ವೀಡಿಯೋ ಮಾಡಿ ವಾರದ ಹಿಂದೆ ಹಂಚಿಕೊಂಡಿದ್ದಾರೆ. ಅದೇ ವೀಡಿಯೋ ಚಿತ್ರೀಕರಣದ ವೇಳೆ ಈ ಬುರ್ಖಾ ವಿಚಾರ ಬಂದಿದೆ. ಮುಂಬೈನಲ್ಲಿ ಹುಟ್ಟಿ ಬೆಳೆದ ಸನಾ 'ಯೆಹಿ ಹೈ ಹೈ ಸೊಸೈಟಿ' ಎಂಬ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು.

ತಮಿಳಿನ 'ಈ' ಸಿನಿಮಾ ಮೂಲಕ ದಕ್ಷಿಣಕ್ಕೆ ಆಕೆ ಬಂದಿದ್ದರು. 'ಹಲ್ಲಾ ಬೋಲ್', 'ಗಗನಂ', 'ಪಯಣಂ', 'ಜೈಹೋ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ನಡುವೆ ಕನ್ನಡದ 'ಕೂಲ್' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ ಮಿಂಚಿದ್ದರು. ತಮಿಳಿನ 'ಅಯೋಗ್ಯ'ದ ಹಾಡೊಂದರಲ್ಲಿ ಕೊನೆಯದಾಗಿ ಸನಾ ಖಾನ್ ಕಾಣಿಸಿಕೊಂಡಿದ್ದರು.

2020ರಲ್ಲಿ ತಾವು ಚಿತ್ರರಂಗ ಬಿಡುವ ಬಗ್ಗೆ ಸನಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಕೆಲವೇ ದಿನಗಳಲ್ಲಿ ಮುಸ್ಲಿಂ ಧರ್ಮಗುರು ಮುಫ್ತಿ ಅನಸ್ ಸಯೀದ್ ಜೊತೆ ಮದುವೆ ಆಗಿದ್ದರು. ರೌನಕ್-ಎ-ರಂಜಾನ್ ಹೆಸರಿನಲ್ಲಿ ಸನಾ ಖಾನ್ ಪಾಡ್‌ಕಾಸ್ಟ್ ಆರಂಭಿಸಿದ್ದಾರೆ. ಅದರಲ್ಲಿ ಇಫ್ತಾರ್‌ಗಾಗಿ ವಿಶೇಷ ಖಾದ್ಯಗಳನ್ನು ತಯಾರಿಸುವುದು ಹಾಗೂ ತಮ್ಮ ರಂಜಾನ್ ಅನುಭವಗಳ ಬಗ್ಗೆ ಅತಿಥಿಗಳ ಜೊತೆ ಮಾತನಾಡುತ್ತಿದ್ದಾರೆ.

More from Filmibeat

English summary
Sana Khan received backlash for her remarks on the burkha during a discussion with Sambhavna Seth
Read more about: actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X