"ನನ್ನ ತಾಯಿ ಅಲ್ಲಾ ಬಳಿಗೆ ಹೋಗಿಬಿಟ್ರು"; 'ಕೂಲ್' ಚಿತ್ರನಟಿ ಸನಾ ಖಾನ್ ಭಾವುಕ
ಬಾಲಿವುಡ್ ನಟಿ ಸನಾ ಖಾನ್ ಇದೀಗ ಚಿತ್ರರಂಗದಿಂದ ದೂರಾಗಿದ್ದಾರೆ. ಆಕೆ ಮುಸ್ಲಿಂ ಧರ್ಮಗುರು ಮುಫ್ತಿ ಅನಸ್ ಸೈಯದ್ ಅವರನ್ನು ವಿವಾಹವಾಗಿ ಗ್ಲಾಮರ್ ಪ್ರಪಂಚದಿಂದ ದೂರ ಉಳಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸನಾ ತಮ್ಮ ತಾಯಿ ಅಗಲಿಕೆ ಬಗ್ಗ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಸನಾ ಖಾನ್ ತಾಯಿ ಸಯೀದಾ ಖಾನ್ ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ (ನಮಾಜ್-ಎ-ಜನಾಜಾ) ನಿನ್ನೆ(ಜೂನ್ 24) ರಾತ್ರಿ ಮುಂಬೈನ ಓಶಿವಾರಾ ಖಬ್ರಸ್ತಾನ್‌ನಲ್ಲಿ ರಾತ್ರಿ 9:45 ಕ್ಕೆ ನೆರವೇರಿದೆ. ಸಯೀದಾ ಖಾನ್ ಅಗಲಿಕೆಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸನಾ ಖಾನ್ ಕೂಡ ಬಹಳ ಭಾವುಕರಾಗಿ ಅತ್ತು ದುಃಖದಿಂದ ಕುಸಿದಿದ್ದಾರೆ.

ತಾಯಿಯ ನಿಧನದ ಬಗ್ಗೆ ಸನಾ ಖಾನ್ ಇನ್‌ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ಮಾಡಿದ್ದಾರೆ. "ನನ್ನ ಪ್ರೀತಿಯ ತಾಯಿ ಸಯೀದಾ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಆಕೆ ಅಲ್ಲಾಹನ ಬಳಿಗೆ ಮರಳಿದ್ದಾರೆ. ನಮಾಜ್-ಎ-ಜನಾಜಾ(ಅಂತ್ಯಕ್ರಿಯೆ)ವನ್ನು ಓಶಿವಾರಾ ಖಬ್ರಸ್ಥಾನದಲ್ಲಿ 09:45 ಕ್ಕೆ ಇಶಾ ಸಲಾತ್ ನಂತರ ನೆರವೇರಿಸಲಾಗುತ್ತದೆ. ನಿಮ್ಮ ಪ್ರಾರ್ಥನೆ ತಾಯಿಗೆ ಬೇಕು" ಎಂದು ಸನಾ ಬರೆದುಕೊಂಡಿದ್ದರು.
2 ವರ್ಷಗಳ ಹಿಂದೆ ತಾಯಿ ಪ್ರೀತಿ ಬಗ್ಗೆ ಒಂದು ಸನಾ ಖಾನ್ ಪೋಸ್ಟ್ ಮಾಡಿದ್ದರು. ತಮಗೆ ತಾಯಿ ಶೋ ಲೇಸ್ ಕಟ್ಟುವ ವೀಡಿಯೋವನ್ನು ಹಂಚಿಕೊಂಡಿದ್ದರು."ನಾನು ವಾಕಿಂಗ್ ಹೋಗಲು ಅಮ್ಮ ಶೂ ಲೇಸ್ ಕಟ್ಟುತ್ತಿದ್ದಾರೆ. ತಾಯಿಯ ಪ್ರೀತಿಗಿಂತ ಪ್ರಾಮಾಣಿಕ ಮತ್ತು ನಿಸ್ವಾರ್ಥ ಪ್ರೀತಿ ಇನ್ನೊಂದಿಲ್ಲ. ಅವರು ನಮಗಾಗಿ ಮಾಡುವ ಪ್ರೀತಿ ಮತ್ತು ತ್ಯಾಗಗಳನ್ನು ನಾವು ಮರೆಯಬಾರದು. ನಾವು ಎಷ್ಟೇ ದೊಡ್ಡವರಾದರೂ ತಾಯಿಗೆ ಮಕ್ಕಳೇ" ಎಂದು ಸನಾ ಬರೆದುಕೊಂಡಿದ್ದರು.
ಗಾಯಕ-ಸಂಯೋಜಕ ಜಾವೇದ್ ಅಲಿ, ಹಾಸ್ಯನಟ ಮುನಾವರ್ ಫಾರೂಕಿ ಅವರ ಪತ್ನಿ ಮೆಹಜಾಬೀನ್ ಮತ್ತು ಗೌಹರ್ ಖಾನ್ ಅವರ ಪತಿ ಜೈದ್ ದರ್ಬಾರ್ ಸೇರಿದಂತೆ ಚಿತ್ರರಂಗದ ಕೆಲವರು ಸನಾ ಖಾನ್ ನಿವಾಸಕ್ಕೆ ಭೇಟಿ ನೀಡಿ ಸಯೀದಾ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಸಯೀದಾ ಪಾರ್ಥೀವ ಶರೀರದ ಅಂತಿಮ ಯಾತ್ರೆ ವೇಳೆ ಸನಾ ಕುಟುಂಬಸ್ಥರ ಜೊತೆ ಅತ್ತು ಕುಸಿದಿರುವ ವೀಡಿಯೋ ವೈರಲ್ ಆಗುತ್ತಿದೆ. ಮತ್ತೊಂದು ವೀಡಿಯೋದಲ್ಲಿ ಆಂಬುಲೆನ್ಸ್ ಒಳಗೆ ತಾಯಿ ಪಾರ್ಥಿವ ಶರೀರದ ಪಕ್ಕ ಕೂತು ಸನಾ ಅಳುತ್ತಿರುವುದನ್ನು ನೋಡಬಹುದು. 'ಯೆಹೀ ಹೇ ಹೈ ಸೊಸೈಟಿ' ಎಂಬ ಸಿನಿಮಾ ಮೂಲಕ ಸನಾ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ತೆಲುಗು, ತಮಿಳ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದ 'ಕೂಲ್' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿದ್ದರು.
2020ರಲ್ಲಿ ಮುಸ್ಲಿಂ ಧರ್ಮಗುರು ಮುಫ್ತಿ ಅನಸ್ ಸೈಯದ್ ಎಂಬುವವರನ್ನು ಸನಾ ಮದುವೆ ಆಗಿ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ದರು. ಬಳಿಕ ಸಿನಿಮಾಗಳಲ್ಲಿ ನಟಿಸಲಿಲ್ಲ. ಪತಿಯ ಜೊತೆ ಮುಸ್ಲಿಂ ಧರ್ಮ ಭೋದನೆಯಲ್ಲಿ ತೊಡಗಿಕೊಂಡಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಹಿಂದಿ ಬಿಗ್‌ಬಾಸ್ ಸೀಸನ್ 6ರಲ್ಲಿ ಸನಾ ಸ್ಪರ್ಧಿಯಾಗಿದ್ದರು.


Click it and Unblock the Notifications











