ಕೊರೊನಾದಿಂದ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗದೆ ಕಣ್ಣೀರಿಟ್ಟ ನಟಿ
ಕೊರೊನಾ ವೈರಸ್ ನಿಂದ ಸಾಕಷ್ಟು ಜನರ ಬದುಕು ಕಷ್ಟದಲ್ಲಿದೆ. ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಅದೆಷ್ಟೊ ಜನ ಒಂದು ಹೊತ್ತಿನ ಊಟಕ್ಕು ಪರದಾಡುವಂತಾಗಿದೆ. ಮನೆಯಿಂದ ದೂರ ಇರುವ ಸಾಕಷ್ಟು ಮಂದಿ ಹೊರಗಡೆಯೆ ಸಿಲುಕಿಕೊಂಡಿದ್ದಾರೆ.
ಬಾಲಿವುಡ್ ನಟಿ ಸನಾ ಸಯೀದ್ ಸದ್ಯ ಯು ಎಸ್ ನಲ್ಲಿ ಇದ್ದಾರೆ. ಇತ್ತೀಚಿಗೆ ಸನಾ ತಂದೆಯನ್ನು ಕಳೆದುಕೊಂಡಿದ್ದಾರೆ. ಯು ಎಸ್ ನಲ್ಲಿರುವ ಸನಾ ಅಪ್ಪನ ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗದೆ ಕಣ್ಣೀರಿಡುತ್ತಿದ್ದಾರೆ. ಮಾರ್ಚ್ 22 ಭಾರತದಲ್ಲಿ ಜನತಾ ಕರ್ಫ್ಯೂ ಇತ್ತು. ಅಂದು ಯಾರು ಮನೆಯಿಂದ ಹೊರಬರಬಾರದು ಎಂದು ಪ್ರಧಾನಿ ಮೋದಿ ಕರೆಕೊಟ್ಟಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಸನಾ ತಂದೆ, ಕಳೆದ ತಿಂಗಳು ಮಾರ್ಚ್ 22ರಂದು ಕೊನೆಯುಸಿರೆಳೆಯುತ್ತಿದ್ದಾರೆ. ತಂದೆ ಇನ್ನಿಲ್ಲ ಎನ್ನುವ ಸುದ್ದಿ ಯು ಎಸ್ ನಲ್ಲಿರುವ ಸನಾಗೆ ಮಾರ್ಚ್ 22 ಬೆಳಗ್ಗೆ 7 ಗಂಟೆಗೆ ಗೊತ್ತಾಗಿದೆ. ನಂತರ ಭಾರತಕ್ಕೆ ಬರಲು ಪರದಾಡಿದ್ದಾರೆ. ತಂದೆಯನ್ನು ಕೊನೆಯ ಬಾರಿಯಾದರು ನೋಡೋಣ ಎಂದು ಯು ಎಸ್ ನಿಂದ ಭಾರತಕ್ಕೆ ಬರುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗದೆ ಕಣ್ಣೀರಿಡುತ್ತ ಅಲ್ಲಿಯೆ ಇರುವಂತಾಗಿದೆ. ಈ ಬಗ್ಗೆ ನಟಿ ಸನಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

ಅಪ್ಪನನ್ನು ನೆನೆದು ಅಲ್ಲಿಯೆ ಇದ್ದಾರೆ. ಅವರ ಕುಟುಂಬ ಮಗಳಿಲ್ಲದೆ ತಂದೆಯ ಅಂತಿಮ ಕ್ರೀಯೆ ಮಾಡಿ ಮುಗಿಸಿದ್ದಾರೆ. ಸನಾ ಸಹೋದರಿ ಅಕ್ಕನಿಗೆ ಸಮಾಧಾನ ಪಡಿಸಿ ಇಲ್ಲಿ ನಡೆದ ಬಗ್ಗೆ ಎಲ್ಲ ಮಾಹಿತಿ ನೀಡಿದ್ದಾರೆ. ಸದ್ಯ ಸನಾ ಯು ಎಸ್ ನಲ್ಲಿಯೆ ಇದ್ದಾರೆ. ನೋವನ್ನು ಮರೆಯಲು ಸನಾ ಯೋಗದ ಮೊರೆ ಹೋಗಿದ್ದಾರಂತೆ. ಜೊತೆಗೆ ಕೆಲವು ಆನ್ ಲೈನ್ ಕೋರ್ಸ್ ಗಳನ್ನು ತೆಗೆದುಕೊಂಡಿದ್ದಾರಂತೆ.
ಸನಾ 1998ರಲ್ಲಿಯೆ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಬಾಲನಟಿಯಾಗಿ ಗುರುತಿಸಿಕೊಂಡಿದ್ದರು. ಕುಚ್ ಕುಚ್ ಹೋತಾ ಹೈ ಸಿನಿಮಾದಲ್ಲಿ ಅಂಜಲಿಯಾಗಿ ಮಿಂಚಿದ್ದರು. ಆ ನಂತರ ನಾಯಕಿಯಾಗಿ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











