ಶೆಹನಾಜ್ ಗಿಲ್‌ಗೆ ಮತ್ತೊಂದು ಆಘಾತ: ತಂದೆ ಮೇಲೆ ಗುಂಡಿನ ದಾಳಿ

ನಟಿ, ಗಾಯಕಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಶೆಹನಾಜ್ ಗಿಲ್‌ ಜೀವನದಲ್ಲಿ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಇದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಅಚಾನಕ್ಕಾಗಿ ಪ್ರಿಯತಮನನ್ನು ಕಳೆದುಕೊಂಡ ಶೆಹನಾಜ್ ಗಿಲ್‌ರ ತಂದೆಯ ಮೇಲೆ ಇದೀಗ ಕೆಲವು ಅಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ.

ಶೆಹನಾಜ್ ಗಿಲ್ ತಂದೆ ಸಂತೋಶ್ ಸಿಂಗ್ ಸುಖ್ ಅವರ ಮೇಲೆ ಶನಿವಾರ ರಾತ್ರಿ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದ್ದು, ಪವಾಡ ಸದೃಶ ರೀತಿಯಲ್ಲಿ ಅವರು ಪಾರಾಗಿದ್ದಾರೆ.

ರಾಜಕೀಯದಲ್ಲಿ ಸಕ್ರಿಯರಾಗಿರುವ ಸಂತೋಶ್ ಸಿಂಗ್ ಸುಖ್ ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದರು. ಶನಿವಾರ ರಾತ್ರಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಅವರು ಅಮೃತ್‌ಸರದ ತಮ್ಮ ಮನೆಗೆ ಬರುವ ಹಾದಿಯಲ್ಲಿ ಕಾರಿನ ಡ್ರೈವರ್ ಢಾಬಾ ಬಳಿಯೊಂದರಲ್ಲಿ ಕಾರು ನಿಲ್ಲಿಸಿ ಶೌಚಾಲಯಕ್ಕೆಂದು ತೆರಳಿದ್ದಾನೆ. ಆ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಗಂತುಕರು ಸಂತೋಶ್ ಸಿಂಗ್ ಸುಖ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

Actress Shehnaaz Gills Father Attacked By Two Unidentified Men

ಸಂತೋಶ್‌ ಸಿಂಗ್‌ಗೆ ಒಬ್ಬ ಗನ್‌ಮ್ಯಾನ್ ಸಹ ಇದ್ದರು. ಆದರೆ ಅವರು ಸಹಾಯಕ್ಕೆ ಧಾವಿಸುವ ವೇಳೆಗೆ ಇಬ್ಬರು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಗನ್‌ಮ್ಯಾನ್ ಒಬ್ಬಾತನಿಗೆ ಕಲ್ಲಿನಿಂದ ಪೆಟ್ಟುಕೊಟ್ಟಿದ್ದಾನಂತೆ. ಅಗಂತುಕರು ಗುಂಡು ಹಾರಿಸಿದರೂ ಸಹ ಸಂತೋಶ್ ಸಿಂಗ್ ಸೀಟಿನ ಬಳಿ ಬಚ್ಚಿಟ್ಟುಕೊಂಡು ಗುಂಡು ತಮಗೆ ತಾಗದಂತೆ ರಕ್ಷಣೆ ಪಡೆದುಕೊಂಡಿದ್ದಾರೆ. ಘಟನೆ ನಡೆದ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ ಸಂತೋಶ್.

ನಟಿ ಶೆಹ್ನಾಜ್ ಗಿಲ್‌ರ ಬಾಯ್‌ಫ್ರೆಂಡ್ ಸಿದ್ಧಾರ್ಥ್ ಶುಕ್ಲ ಕಳೆದ ವರ್ಷ ಹಠಾತ್ತನೆ ಹೃದಯಾಘಾತದಿಂದ ನಿಧನ ಹೊಂದಿದರು. ಇದು ಶೆಹ್ನಾಜ್‌ಗೆ ತೀವ್ರ ಆಘಾತ ತಂದಿತ್ತು. ಘಟನೆ ನಡೆದಾಗಿನಿಂದಲೂ ಶಹ್ನಾಜ್ ಗಿಲ್ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿಲ್ಲ. ಕೆಲವು ದಿನಗಳ ಹಿಂದೆ ತಮ್ಮ ಮ್ಯಾನೇಜರ್‌ನ ಮದುವೆ ನಿಶ್ಚಿತಾರ್ಥದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಬಿಗ್‌ಬಾಸ್ ಸೀಸನ್ 13ರಲ್ಲಿ ಸಿದ್ಧಾರ್ಥ್ ಶುಕ್ಲ ಹಾಗೂ ಶೆಹ್ನಾಜ್ ಗಿಲ್ ಜೋಡಿ ಬಹಳ ಜನಪ್ರಿಯತೆ ಗಳಿಸಿತ್ತು. ಶೆಹ್ನಾಜ್ ಗಿಲ್ ಬಿಗ್‌ಬಾಸ್ ಮನೆಯಲ್ಲಿಯೇ ಸಿದ್ಧಾರ್ಥ್‌ ಶುಕ್ಲಗೆ ಪ್ರೀತಿ ಹೇಳಿದ್ದರು. ಬಿಗ್‌ಬಾಸ್ ಮುಗಿದ ಮೇಲೂ ಅವರ ಪ್ರೀತಿ ಮುಂದುವರೆದಿತ್ತು. ಆದರೆ ಸೆಪ್ಟೆಂಬರ್ 02, 2021 ರಂದು ಅಚಾನಕ್ಕಾಗಿ ಸಿದ್ಧಾರ್ಥ್ ಶುಕ್ಲ ನಿಧನ ಹೊಂದಿದರು.

More from Filmibeat

English summary
Actress Shehnaaz Gill's father, BJP leader Santosh Singh Sukh attacked by tow unidentified men. Both shots gun at Santosh but he escapes unhurt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X