ಕಾಮಸೂತ್ರ ತ್ರಿಡಿ ಚಿತ್ರದಲ್ಲಿ ಶಂಖಿನಿ ಶೆರ್ಲಿನ್ ಚೋಪ್ರಾ

By ರವಿಕಿಶೋರ್

ಈಗಾಗಲೆ ನೀಲಿ ಪತ್ರಿಕೆ 'ಪ್ಲೇಬಾಯ್' ನಲ್ಲಿ ತಮ್ಮ ಸಮಸ್ತ ಖಾಸಗಿ ಆಸ್ತಿಪಾಸ್ತಿಯನ್ನು ಪ್ರದರ್ಶಿಸಿ ಖ್ಯಾತಿಯ ಉತ್ತುಂಗಕ್ಕೆ ಏರಿರುವ ಬಾಲಿವುಡ್ ತಾರೆ ಶೆರ್ಲಿನ್ ಚೋಪ್ರಾ ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಈ ಬಾರಿ ಅವರು 'ಕಾಮಸೂತ್ರ 3D' ಎಂಬ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.

ಮೊದಲೇ ಈಕೆ ಬಿಚ್ಚಮ್ಮ. ಇನ್ನು ಕಾಮಸೂತ್ರ ಎಂದರೆ ಕೇಳಬೇಕೆ. ರೂಪೇಶ್ ಪೌಲ್ ಎಂಬ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಕ್ಯಾನೆ ಚಿತ್ರೋತ್ಸವದಲ್ಲಿ ಈ ಚಿತ್ರದ ಬಗ್ಗೆ ಈಗಾಗಲೆ ಪ್ರಕಟಿಸಲಾಗಿದೆ.

ಕಾಮಶಾಸ್ತ್ರದ ಒಂದು ಸ್ತ್ರೀ ಜಾತಿ 'ಶಂಖಿನಿ'

ಕಾಮಶಾಸ್ತ್ರದ ಒಂದು ಸ್ತ್ರೀ ಜಾತಿ 'ಶಂಖಿನಿ'

ಈಗ ಶೆರ್ಲಿನ್ ಚೋಪ್ರಾ ಅಭಿನಯಿಸುತ್ತಿರುವ ಚಿತ್ರ ತ್ರಿಡಿಯಲ್ಲಿ ಮೂಡಿಬರುತ್ತಿರುವುದು ವಿಶೇಷ. ಅಂದಹಾಗೆ ಈ ಲೇಖನಿಯ ಶೀರ್ಷಿಕೆಯಲ್ಲಿ ಬಳಸಿರುವ 'ಶಂಖಿನಿ' ಎಂದರೆ ಒಂದು ಸ್ತ್ರೀ ಜಾತಿ ಅಷ್ಟೇ. ಕಾಮಶಾಸ್ತ್ರದ ಪ್ರಕಾರ ಪದ್ಮಿನಿ, ಶಂಖಿನಿ, ಹಸ್ತಿನಿ ಹಾಗೂ ಚಿತ್ತಿನಿ ನಾಲ್ಕು ಸ್ತ್ರೀ ಜಾತಿಗಳಲ್ಲಿ ಒಂದು.

ಸಂಪಾದಕನೊಂದಿಗೆ ಹಾಸಿಗೆ ಹಂಚಿಕೊಂಡಳೇ?

ಸಂಪಾದಕನೊಂದಿಗೆ ಹಾಸಿಗೆ ಹಂಚಿಕೊಂಡಳೇ?

ಪೋಲಿ ಪತ್ರಿಕೆ 'ಪ್ಲೇಬಾಯ್' ಸಂಪಾದಕರ ಜೊತೆ ಶೆರ್ಲಿನ್ ಮಲಗಿದ್ದರು ಎಂಬ ರಾತ್ರಿ ರಹಸ್ಯ ಲೀಕ್ ಈ ಹಿಂದೊಮ್ಮೆ ಲೀಕ್ ಆಗಿತ್ತು. ಪ್ಲೇಬಾಯ್' ಪತ್ರಿಕೆ ಸಂಪಾದಕ ಹಗ್ ಹಫನರ್ ಜೊತೆ ಅನೈತಿಕ ಸಂಬಂಧ ಇರುವುದು ಬಯಲಾಗಿತ್ತು. ಆದರೆ ಚೋಪ್ರಾ ಮಾತ್ರ ಈ ರೀತಿಯ ಗಾಳಿಸುದ್ದಿಯನ್ನು ಹಾಗೇ ಗಾಳಿಗೆ ತೂರಿದ್ದರು. ನಾನು ಆ ಸಂಪಾದಕನ ಜೊತೆ ಮಲಗೂ ಇಲ್ಲ ಕುಂತೂ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಕಜುರಾಹೊ ಶಿಲ್ಪಗಳೂ ನಾಚುವಂತೆ ಮಾಡಿದ ಶೆರ್ಲಿನ್

ಕಜುರಾಹೊ ಶಿಲ್ಪಗಳೂ ನಾಚುವಂತೆ ಮಾಡಿದ ಶೆರ್ಲಿನ್

ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಈ ಬಿಚ್ಚಮ್ಮ ಬಾಲಿವುಡ್ ನಲ್ಲಿ ರಾಗಿ ಬೀಸಿದ್ದೇ ಬಂತು. ನಯಾಪೈಸೆ ವರ್ಕ್ ಔಟ್ ಆಗಿರಲಿಲ್ಲ. ಆಗಾಗ ತಮ್ಮ ವಸ್ತ್ರ ಕಳಚಿ ಕಜುರಾಹೊ ಶಿಲ್ಪಗಳೂ ನಾಚುವಂತಹ ಫೋಟೋಗಳನ್ನು ಟ್ವಿಟ್ಟರ್ ಗೆ ಹಾಕಿ ಸಂಭ್ರಮಿಸುತ್ತಿದ್ದರು.

ಪ್ಲೇಬಾಯ್ ಪತ್ರಿಕೆಯಿಂದ ಬೆಳಕಿಗೆ ಬಂದ ಬಾಲೆ

ಪ್ಲೇಬಾಯ್ ಪತ್ರಿಕೆಯಿಂದ ಬೆಳಕಿಗೆ ಬಂದ ಬಾಲೆ

ಸಾಮಾನ್ಯವಾಗಿ 'ಪ್ಲೇಬಾಯ್' ಪತ್ರಿಕೆಗೆ ಪೋಸು ನೀಡುವ ಬೆಡಗಿಯರು ನಾಚಿಕೆ ಗೀಚಿಕೆಯನ್ನು ಊರಾಚೆಗೆ ಇಟ್ಟೇ ಬಂದಿರುತ್ತಾರೆ. ಶೆರ್ಲಿನ್ ಚೋಪ್ರಾ ಕೂಡ ಯಾವುದೇ ಬಿಗುಮಾನವಿಲ್ಲದಂತೆ ಪ್ಲೇಬಾಯ್ ಗಾಗಿ ಸಂಪೂರ್ಣ ಬೆತ್ತಲಾಗಿದ್ದರು.

ಶೆರ್ಲಿನ್ ಚೋಪ್ರಾ ಹುಟ್ಟೂರು ಹೈದರಾಬಾದ್

ಶೆರ್ಲಿನ್ ಚೋಪ್ರಾ ಹುಟ್ಟೂರು ಹೈದರಾಬಾದ್

ಈಕೆಯ ಮೂಲ ಹೆಸರು ಮೋನಾ ಚೋಪ್ರಾ. ಹುಟ್ಟಿದ್ದು ಹೈದರಾಬಾದಿನಲ್ಲಿ. ಸ್ಥಳೀಯ ಸ್ಟಾನ್ಲಿ ಶಾಲೆಯಲ್ಲಿ ಎಬಿಸಿಡಿ ಕಲಿತ ಈಕೆ ಅರ್ಧಕ್ಕೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿದ್ದರು.

ನಿರ್ಮಾಪಕರನ್ನು ಶೆರ್ಲಿನ್ ಬುಟ್ಟಿಗೆ ಹಾಕಿಕೊಂಡಿದ್ದು ಹೇಗೆ?

ನಿರ್ಮಾಪಕರನ್ನು ಶೆರ್ಲಿನ್ ಬುಟ್ಟಿಗೆ ಹಾಕಿಕೊಂಡಿದ್ದು ಹೇಗೆ?

ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಈಕೆಗೆ ಹೇಳಿಕೊಳ್ಳುವಂತಹ ಅವಕಾಶಗಳು ಬರಲಿಲ್ಲ. ಆಲ್ಬಂಗಳನ್ನು ಮಾಡಿ ಪ್ರಚಾರ ಗಿಟ್ಟಿಸಿದರು. ಹಾಟ್ ಫೋಟೋಗಳಿಂದ ಬಾಲಿವುಡ್ ನಿರ್ಮಾಪಕರನ್ನು ಬುಟ್ಟಿಗೆ ಹಾಕಿಕೊಂಡಳು.

ಬಾಲಿವುಡ್ ನಲ್ಲಿ ಆರಕ್ಕೇರದ ಮೂರಕ್ಕಿಳಿಯದ ತಾರೆ

ಬಾಲಿವುಡ್ ನಲ್ಲಿ ಆರಕ್ಕೇರದ ಮೂರಕ್ಕಿಳಿಯದ ತಾರೆ

ಈಕೆಯ ತುಂಬಿದ ಸೌಂದರ್ಯವನ್ನು ನೋಡಿದ ಕೆಲವು ಬಾಲಿವುಡ್ ನಿರ್ಮಾಪಕರು ರತ್ನಗಂಬಳಿ ಹಾಸಿ ಅವಕಾಶ ಕೊಟ್ಟರು. ಅಲ್ಲಿಂದ ಈಕೆ ಹಿಂತಿರುಗಿ ನೋಡಲಿಲ್ಲ. ಈಕೆಯ ಚಿತ್ರಗಳು ಹೇಳಿಕೊಳ್ಳುವಂತಹ ಸದ್ದು ಮಾಡದಿದ್ದರೂ ಈಕೆ ಮಾತ್ರ ಆಗಾಗ ಈ ರೀತಿ ಸದ್ದು ಮಾಡುತ್ತಲೇ ಇದ್ದಾರೆ.

ಪ್ರಚಾರಕ್ಕಾಗಿ ಟ್ವಿಟ್ಟರ್ ಮೊರೆ ಹೋದ ತಾರೆ

ಪ್ರಚಾರಕ್ಕಾಗಿ ಟ್ವಿಟ್ಟರ್ ಮೊರೆ ಹೋದ ತಾರೆ

ಈ ಹಿಂದೊಮ್ಮೆ ಶೆರ್ಲಿನ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ತಮ್ಮದೇ ಆದ ನಗ್ನ ಫೋಟೋವನ್ನು ತೇಲಿಬಿಟ್ಟಿದ್ದರು. ನನ್ನ ಸಂಗ್ರಹಲ್ಲಿದ್ದ ಫೋಟೋವನ್ನು ಗೆಳೆಯರು ಹಾಗೂ ಅಭಿಮಾನಿಗಳ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು ಹಾಗಾಗಿ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿದ್ದೇನೆ ಎಂದಿದ್ದರು ಶೆರ್ಲಿನ್.


ಬಹುಶಃ ಚಿತ್ರ ಮುಂಬರುವ ಕ್ಯಾನೆ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಬಹುದು. ಶೆರ್ಲಿನ್ ಚೋಪ್ರಾ ಜೊತೆ ಬಾಲಿವುಡ್ ನ ಇನ್ನಿಬ್ಬರು ತಾರೆಗಳು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ. ಆದರೆ ಆ ತಾರೆಗಳು ಯಾರೆಂಬುದು ಇನ್ನೂ ಬಹಿರಂಗವಾಗಿಲ್ಲ.

ಈಗಾಗಲೆ ಕಾಮಸೂತ್ರ ಹೆಸರಿನಲ್ಲಿ ಒಂದು ಚಿತ್ರ ಬಂದು ಹೋಗಿದೆ. ಮೀರಾ ನಾಯರ್ ನಿರ್ದೇಶನದ ಆ ಚಿತ್ರದ ಹೆಸರು 'ಕಾಮಸೂತ್ರ: ಎ ಟೇಲ್ ಆಫ್ ಲವ್' ಚಿತ್ರ 2006ರಲ್ಲಿ ತೆರೆಕಂಡಿತ್ತು. ಆ ಚಿತ್ರದಲ್ಲಿ ರೇಖಾ ಪ್ರಮುಖ ಪಾತ್ರವನ್ನು ಪೋಷಿಸಿದ್ದಾರೆ.

More from Filmibeat

English summary
Bollywood hot actress Sherlyn Chopra is all set to set sizzle the screen on Kamasutra 3D,which will be directed by Rupesh Paul. She has bagged a role in Kamasutra 3D. Actress Sherlyn Chopra has earlier created the history by posing nude for international magazine Playboy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X