twitter
    For Quick Alerts
    ALLOW NOTIFICATIONS  
    For Daily Alerts

    ನಿಜವಾದ ಸೇವೆಯೆಂದರೆ ಇದು: ಕೊರೊನಾ ವೈರಸ್ ಹೋರಾಟಕ್ಕೆ ನರ್ಸ್ ಆಗಿ ಸೇವೆ ಆರಂಭಿಸಿದ ನಟಿ

    |

    ಇಡೀ ಜಗತ್ತು ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿದೆ. ಹಾಲಿವುಡ್‌ನ ಅನೇಕ ಕಲಾವಿದರೂ ವೈರಸ್‌ಗೆ ತುತ್ತಾಗಿದ್ದಾರೆ. ಭಾರತೀಯ ಚಿತ್ರರಂಗದ ಅನೇಕರು ತಮ್ಮ ಕೈಲಾದ ಮಟ್ಟಿಗೆ ಜನರಿಗೆ ನೆರವಾಗಲು ಮುಂದಾಗುತ್ತಿದ್ದಾರೆ. ಲಾಕ್‌ಡೌನ್‌ನಿಂದ ಜನರು, ಪ್ರಾಣಿಗಳು ಕೂಡ ಆಹಾರಕ್ಕಾಗಿ ಪರದಾಡುವಂತಾಗಿದೆ. ಕೆಲವರು ಹಸಿದ ಜನರಿಗೆ ನೆರವಾಗಲು ಊಟ, ಹಣದ ವ್ಯವಸ್ಥೆ ಮಾಡುತ್ತಿದ್ದರೆ, ಇನ್ನು ಕೆಲವು ತಾರೆಯರು ಹಸಿವಿನಿಂದ ಬಳಲುತ್ತಿರುವ ಪ್ರಾಣಿಗಳಿಗೆ ಆಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ.

    Recommended Video

    ರುದ್ರ್ ಜೊತೆಗೆ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ ಗ್ಲಾಮ್ ಮಾ | Filmibeat Kannada

    ಆದರೆ ನಟಿಯೊಬ್ಬರು ನರ್ಸ್ ಆಗಿ ಬದಲಾಗುವ ಮೂಲಕ ಕೊರೊನಾ ವೈರಸ್ ಪೀಡಿತರಿಗೆ ನೆರವಾಗಲು ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ನಿಜವಾದ ಸೇವೆಯ ಅರ್ಥವನ್ನು ಸಾರಿದ್ದಾರೆ. ಹಾಗೆಯೇ ಸಾವಿರಾರು ಜನರಿಗೆ ಪ್ರೇರಣೆಯಾಗಿದ್ದಾರೆ.

    ಬಡವರಿಗೆ ಸಹಾಯ ಮಾಡುತ್ತಿರುವ ಪೊಲೀಸರಿಗೆ ದಿನಸಿ ನೀಡುತ್ತಿರುವ ಶೈನ್ ಶೆಟ್ಟಿಬಡವರಿಗೆ ಸಹಾಯ ಮಾಡುತ್ತಿರುವ ಪೊಲೀಸರಿಗೆ ದಿನಸಿ ನೀಡುತ್ತಿರುವ ಶೈನ್ ಶೆಟ್ಟಿ

    ಸ್ವಯ ಕಾರ್ಯಕರ್ತೆಯಾಗಿ ಸೇವೆ

    ಸ್ವಯ ಕಾರ್ಯಕರ್ತೆಯಾಗಿ ಸೇವೆ

    ನಟಿ ಶಿಖಾ ಮಲ್ಕೋತ್ರಾ, ಮುಂಬೈನ ಆಸ್ಪತ್ರೆಯೊಂದರಲ್ಲಿ ಸ್ವಯಂ ಕಾರ್ಯಕರ್ತೆಯಾಗಿ ನರ್ಸ್ ಕೆಲಸ ಆರಂಭಿಸಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಅವರು ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಮನೆಯಲ್ಲಿಯೇ ಸುರಕ್ಷಿತರಾಗಿರಿ

    ಮನೆಯಲ್ಲಿಯೇ ಸುರಕ್ಷಿತರಾಗಿರಿ

    ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡಿರುವ ಶಿಖಾ, ಈ ನಿರ್ಣಾಯಕ ಘಟ್ಟದಲ್ಲಿ ದೇಶ ಸೇವೆಯಲ್ಲಿ ತೊಡಗಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ಹಾಗೆಯೇ ಲಾಕ್‌ ಡೌನ್ ಸಂದರ್ಭದಲ್ಲಿ ಮನೆಯಲ್ಲಿಯೇ ಸುರಕ್ಷಿತರಾಗಿರಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

    ನರ್ಸಿಂಗ್ ಪದವಿ ಪಡೆದಿದ್ದಾರೆ

    ನರ್ಸಿಂಗ್ ಪದವಿ ಪಡೆದಿದ್ದಾರೆ

    ಸಿನಿಮಾಗಳಲ್ಲಿ ಬಣ್ಣ ಹಚ್ಚಿ ತೆರೆಯ ಮೇಲೆ ಮಿಂಚುವವರು ನರ್ಸ್ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿರಬಹುದು. ವಾಸ್ತವವಾಗಿ ಅವರ ಓದಿದ್ದೇ ನರ್ಸಿಂಗ್‌ಅನ್ನು. ಅವರು ದೆಹಲಿಯ ವರ್ಧಮಾನ್ ಮಹಾವೀರ್ ವೈದ್ಯಕೀಯ ಕಾಲೇಜು ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ನರ್ಸಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ.

    ನರ್ಸ್ ಆಗಿ ಕೆಲಸ ಮಾಡಿದ್ದರು

    ನರ್ಸ್ ಆಗಿ ಕೆಲಸ ಮಾಡಿದ್ದರು

    ಐದು ವರ್ಷ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದ ಶಿಖಾ, ಆ ಸಂದರ್ಭದಲ್ಲಿನ ತಮ್ಮ ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ನನ್ನ ಪ್ರಯತ್ನ ಮತ್ತು ಸಾಧನೆಗಳನ್ನು ನೀವೆಲ್ಲರೂ ಯಾವಾಗಲೂ ಶ್ಲಾಘಿಸುತ್ತಾ ಬಂದಿದ್ದಿರಿ. ಈ ಸಂದರ್ಭದಲ್ಲಿ ನನಗೆ ಮತ್ತೆ ದೇಶ ಸೇವೆ ಮಾಡಲು ನಿಮ್ಮ ಬೆಂಬಲ ಬೇಕು ಎಂದು ಹೇಳಿದ್ದಾರೆ.

    ಎಲ್ಲ ರೀತಿ ಸೇವೆಗೆ ಸಿದ್ಧ

    ಈ ಬಾರಿ ನಾನು ಕೋವಿಡ್ 19ರ ಬಿಕ್ಕಟ್ಟಿನ ಸಲುವಾಗಿ ನಾನು ಈಗ ಮುಂಬೈನ ಆಸ್ಪತ್ರೆಯನ್ನು ಸೇರಲು ನಿರ್ಧರಿಸಿದ್ದೇನೆ. ಯಾವಾಗ ಬೇಕಾದರೂ ನರ್ಸ್ ಆಗಿ ದೇಶ ಸೇವೆ ಮಾಡಲು ಮತ್ತು ಎಂಟರ್‌ಟೈನರ್ ಆಗಿ ಕೆಲಸ ಮಾಡಲು ನಾನು ಸಿದ್ಧ. ನನಗೆ ನಿಮ್ಮ ಆಶೀರ್ವಾದ ಬೇಕು. ಮನೆಯಲ್ಲಿಯೇ ಸುರಕ್ಷಿತವಾಗಿದ್ದು ಸರ್ಕಾರಕ್ಕೆ ಬೆಂಬಲ ನೀಡಿ ಎಂದು ಹೇಳಿದ್ದಾರೆ.

    ನನ್ನೊಂದಿಗೆ ಸೇರಿಕೊಳ್ಳಿ...

    ಮುಂಬೈನ ಜೋಗೆವಾರಿಯಲ್ಲಿನ ಬಾಳಾಸಾಹೇಬ್ ಠಾಕ್ರೆ ಟ್ರೌಮಾ ಸೆಂಟರ್‌ನಲ್ಲಿ ಅವರು ಸೇವೆ ಆರಂಭಿಸಿದ್ದಾರೆ. ಮತ್ತೊಂದು ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ತಮ್ಮ ಜತೆ ವಿದ್ಯಾಭ್ಯಾಸ ಮಾಡಿದ ತಂಡದವರಿಗೂ ತಮ್ಮೊಂದಿಗೆ ಸೇರಿಕೊಳ್ಳುವಂತೆ ಮನವಿ ಮಾಡಿದ್ದಾರೆ.

    ತಾಯಿ ಕೂಡ ನರ್ಸ್ ಆಗಿದ್ದರು

    ತಾಯಿ ಕೂಡ ನರ್ಸ್ ಆಗಿದ್ದರು

    ಶಿಖಾ ಮಲ್ಹೋತ್ರಾ, ನಟ ಸಂಜಯ್ ಮಿಶ್ರಾ ಅವರೊಂದಿಗೆ 'ಕಾಂಚ್ಲಿ' ಸಿನಿಮಾದಲ್ಲಿ ನಟಿಸಿದ್ದರು. ಶಾರುಖ್ ಖಾನ್ ಅವರ 'ಫ್ಯಾನ್' ಚಿತ್ರದಲ್ಲಿಯೂ ಅಭಿನಯಿಸಿದ್ದರು. ಅವರ ತಾಯಿ ಕೂಡ ನರ್ಸ್ ಆಗಿ 40 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಶಿಖಾ ಅವರ ಬದ್ಧತೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

    English summary
    Bollywood Actress Shikha Malhotra has started serving volunteer as a nurse at a Mumbai hospital to fight aganst coronavirus.
    Monday, March 30, 2020, 14:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X