For Quick Alerts
  ALLOW NOTIFICATIONS  
  For Daily Alerts

  ಇನ್ಸ್‌ಟಾಗ್ರಾಂ, ಟ್ವೀಟರ್‌ ಗೆ ಗುಡ್ ಬೈ ಹೇಳಿದ ನಟಿ ಶಿಲ್ಪಾ ಶೆಟ್ಟಿ, ಕಾರಣ ಏನು ಗೊತ್ತಾ?

  |

  ಬಾಲಿವುಡ್‌ ಬ್ಯೂಟಿ, ಬಹುಭಾಷಾ ನಟಿ ಶಿಲ್ಪಾ ಶೆಟ್ಟಿಗೆ ಸೋಶಿಯಲ್‌ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ನಟಿ ಶಿಲ್ಪಾ ಶೆಟ್ಟಿ ಆಕ್ಟಿವ್‌ ಆಗಿ ಇರುತ್ತಾರೆ. ಪ್ರತಿದಿನ ಇನ್‌ಸ್ಟಾಗ್ರಾಂ ಹಾಗೂ ಟ್ವಿಟ್ಟರ್‌ನಲ್ಲಿ ಹೊಸ ಹೊಸ ತರಹದ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಅದರಲ್ಲೂ ಸ್ಪೂರ್ತಿನೀಡುವ ಪೋಸ್ಟ್‌ಗಳು ಹಾಗೂ ಫಿಟ್‌ನೆಸ್‌ ಸೀಕ್ರೆಟ್‌ಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿದ್ದರು.

  ಆದರೆ ನಟಿ ಶಿಲ್ಪಾ ಶೆಟ್ಟಿ ಈಗ ಅವರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌ ನೀಡಿದ್ದಾರೆ. "ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ಇನ್‌ಸ್ಟಾಗ್ರಾಂ ಬಳಕೆ ಮಾಡುವುದಿಲ್ಲ. ಇವುಗಳಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ" ಎಂದು ತಿಳಿಸಿದ್ದಾರೆ. ಅಲ್ಲದೆ ಒಂದೇ ರೀತಿಯ ಪದ್ದತಿಯಿಂದ ಬೇಸರವಾಗಿದೆ. ಎಲ್ಲವೂ ಒಂದೇ ರೀತಿಯಲ್ಲಿದೆ. ಹೀಗಾಗಿ ಇಂದಿನಿಂದ ಸಾಮಾಜಿಕ ಜಾಲತಾಣದಿಂದ ದೂರ ಇರಲಿದ್ದೇನೆ ನನ್ನಲ್ಲಿ ಹೊಸತನವನ್ನು ಕಂಡುಕೊಳ್ಳವವರೆಗೂ ಇವೆಲ್ಲವೂಗಳಿಂದ ದೂರ ಇರಲಿದ್ದೇನೆ ಎಂದು ಘೋಷಿಸಿದ್ದಾರೆ.

  ಈ ಬಾಲಿವುಡ್ ಸ್ಟಾರ್ ನಟ-ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿಈ ಬಾಲಿವುಡ್ ಸ್ಟಾರ್ ನಟ-ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿ

  twitter embed :

  ಇತ್ತೀಚಿಗಷ್ಟೇ ನಟಿ ಶಿಲ್ಪಾ ಶೆಟ್ಟಿ ವ್ಯಕ್ತಿತ್ವದ ಬಗ್ಗೆ ಸ್ಪೂರ್ತಿದಾಯಕ ಸಾಲುಗಳನ್ನು ಬರೆದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. "ನಾವು ಅನನ್ಯರು ಎಂದು ಹೇಳಲಾಗುತ್ತದೆ. ಹಾಗಾಗಿ ನಾವು ಇನ್ನೊಬ್ಬರ ನಡವಳಿಕೆಯನ್ನು ಅನುಕರಿಸುವುದಕ್ಕೆ ಪ್ರಯ್ನತಿಸುವುದರಲ್ಲಿ ಅರ್ಥವಿಲ್ಲ. ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶವೆಂದರೆ ನಮ್ಮದೇ ಆದ ವ್ಯಕ್ತಿತ್ವದಲ್ಲಿ ಕೆಲವು ಒಳ್ಳೆಯ ಅಂಶಗಳನ್ನು ಹೊಂದಿರುತ್ತದೆ. ಹೀಗಾಗಿ ಯಾರೂ ಪರಿಪೂರ್ಣರಲ್ಲ, ಯಾರೂ ಒಳ್ಳೆಯವರಲ್ಲ ಅಥವಾ ಯಾರೂ ಕೆಟ್ಟವರು ಸಹ ಅಲ್ಲ. ನಾವೆಲ್ಲರೂ ವೈಯಕ್ತಿಕ ವ್ಯಕ್ತಿತ್ವಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಅದು ಕೂಡ ಸರಿಯಾಗಿಯೇ ಇದೆ. ಅವುಗಳನ್ನೇ ಉತ್ತಮಗೊಳಿಸೋಣ" ಎಂಬ ಸ್ಪೂರ್ತಿದಾಯಕ ಪೋಸ್ಟ್‌ ಹಂಚಿಕೊಂಡಿದ್ದರು.

  ಆದರೆ ಇದಾದ ಕೆಲ ದಿನಗಳಲ್ಲೇ ಶಿಲ್ಪಾ ಶೆಟ್ಟಿ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿಯುತ್ತೇನೆ ಎಂದು ಹೇಳಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ನಟಿಯ ದಿಢೀರ್ ಈ ನಿರ್ಧಾರಕ್ಕೆ ಕಾರಣವಾದರೂ ಏನು ಎಂಬ ಅನುಮಾನಗಳು ಅವರ ಅಪಾರ ಅಭಿಮಾನಿಗಳಲ್ಲಿ ಕೊರೆಯಲು ಶುರುವಾಗಿದೆ. ನಟಿ ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್‌ನ ಹೊಂದಿದ್ದಾರೆ. ಸದ್ಯ ಅವರ ಈ ನಿರ್ಧಾರದಿಂದ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಯಾಕೆ ಈ ದಿಢೀರ್ ನಿರ್ಧಾರ ಮಾಡಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

  ವಂಚನೆ ಪ್ರಕರಣ: ಸಂಕಷ್ಟದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಕುಟುಂಬವಂಚನೆ ಪ್ರಕರಣ: ಸಂಕಷ್ಟದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಕುಟುಂಬ

  Actress Shilpa Shetty announces break from social media

  ನಟಿ ಶಿಲ್ಪಾ ಶೆಟ್ಟಿ ದಕ್ಷಿಣ ಭಾರತದವರಾಗಿದ್ದರೂ ಸಹ ಬಾಲಿವುಡ್‌ನಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಬಾಲಿವುಡ್‌ನಲ್ಲಿ ಹಲವು ಬಿಗ್ ಸ್ಟಾರ್‌ಗಳ ಜೊತೆ ನಟನೆ ಮಾಡುವ ಮೂಲಕ ಶಿಲ್ಪಾ ಶೆಟ್ಟಿ ಬಹು ಬೇಡಿಕೆಯ ನಟಿಯಾದರು. ಬಾಲಿವುಡ್‌ಗೆ ಹೋದ ಬಳಿಕ ಮತ್ತೆ ಸೌತ್ ಸಿನಿಮಾದಲ್ಲೂ ನಟನೆ ಮಾಡಿದ್ದರು. ಕನ್ನಡದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್ ಜೊತೆ 'ಪ್ರೀತ್ಸೋದ್ ತಪ್ಪಾ', 'ಒಂದಾಗೋಣ ಬಾ' ಸಿನಿಮಾದಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರನ್ನು ಸಹ ರಂಜಿಸಿದ್ದರು. ಹೀಗಾಗಿ ನಟಿ ಶಿಲ್ಪಾ ಶೆಟ್ಟಿಗೆ ಎಲ್ಲಾ ಭಾಷೆಯ ಅಭಿಮಾನಿಗಳು ಇದ್ದಾರೆ. ಸದ್ಯ ಅವರ ಈ ನಿರ್ಧಾರದಿಂದ ಅಭಿಮಾನಿಗಳು ಬೇಸರಗೊಂಡಿದ್ದು, ಮತ್ತೆ ಸೋಶಿಯಲ್ ಮೀಡಿಯಾ ಬಳಸುವಂತೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.

  <strong style={document1}" title="{document1}" />{document1}

  English summary
  Shilpa Shetty announces break from social media; says she is bored of the monotony: Everything looks the same.
  Thursday, May 12, 2022, 16:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X