For Quick Alerts
  ALLOW NOTIFICATIONS  
  For Daily Alerts

  ಈ ಕಾಯಿಲೆಯಿಂದ ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡೆ: 2ನೇ ಮಗು ಬಗ್ಗೆ ಶಿಲ್ಪಾ ಶೆಟ್ಟಿ ಮಾತು

  |

  ಬಾಲಿವುಡ್ ನಟಿ, ಫಿಟ್ ನೆಸ್ ಐಕಾನ್ ನಟಿ ಶಿಲ್ಪಾ ಶೆಟ್ಟಿ ಬಾಡಿಗೆ ತಾಯ್ತನದ ಮೂಲಕ ಎರಡನೇ ಮಗು ಪಡೆದುಕೊಂಡಿದ್ದಾರೆ. ಹೆಣ್ಣು ಮಗು ಪಡೆದ ಬಗ್ಗೆ ನಟಿ ಶಿಲ್ಪಾ ಶೆಟ್ಟಿ ದಂಪತಿ ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಸಂಭ್ರಮ ಹಂಚಿಕೊಂಡಿದ್ದರು.

  ಎರಡನೇ ಬಾರಿ ಅಮ್ಮನಾದ ಬಳಿಕ ಶಿಲ್ಪಾ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಫೋಟೋವನ್ನು ಶೇರ್ ಮಾಡಿದ್ದರು. ಮನೆಗೆ ಆಗಮಿಸಿದ ಮುದ್ದಾದ ಮಗುವನ್ನು ಶಿಲ್ಪಾ ಶೆಟ್ಟಿ ದಂಪತಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಮಗುವಿಗೆ ಸಮೀಶಾ ಎಂದು ನಾಮಕರಣ ಮಾಡಿದ್ದಾರೆ. ಆದರೆ ಅನೇಕರು ಶಿಲ್ಪಾ ಶೆಟ್ಟಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಬಗ್ಗೆ ವಿರೋದಿಸಿ ಕಾಮೆಂಟ್ ಮಾಡಿದ್ದರು. ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡ ಬಗ್ಗೆ ನಟಿ ಶಿಲ್ಪ ಶೆಟ್ಟಿ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

  ಬಾಡಿಗೆ ತಾಯ್ತನ ಮೂಲಕ ಮತ್ತೆ ಅಮ್ಮನಾದ ಸಂಭ್ರಮದಲ್ಲಿ ನಟಿ ಶಿಲ್ಪ ಶೆಟ್ಟಿಬಾಡಿಗೆ ತಾಯ್ತನ ಮೂಲಕ ಮತ್ತೆ ಅಮ್ಮನಾದ ಸಂಭ್ರಮದಲ್ಲಿ ನಟಿ ಶಿಲ್ಪ ಶೆಟ್ಟಿ

  ಬಾಡಿಗೆ ತಾಯ್ತನದ ಗುಟ್ಟು ಬಿಚ್ಚಿಟ್ಟ ಶಿಲ್ಲಾ

  ಬಾಡಿಗೆ ತಾಯ್ತನದ ಗುಟ್ಟು ಬಿಚ್ಚಿಟ್ಟ ಶಿಲ್ಲಾ

  ಶಿಲ್ಪಾ ಶೆಟ್ಟಿಗೆ ಈಗಾಗಲೆ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೊಂದು ಮಗುವಿಗೂ ಅವರೇ ಜನ್ಮ ನೀಡ ಬಹುದಿತ್ತು. ಬಾಡಿಗೆ ತಾಯ್ತನ ಯಾಕೆ ಬೇಕಿತ್ತು? ಎಂದು ಅನೇಕ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದರು. ಅಂದು ನಟಿ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿರಲಿಲ್ಲ. ಮಗುವನ್ನು ಬರಮಾಡಿಕೊಂಡ ಸಂಭ್ರಮದಲ್ಲಿದ್ದರು ಶಿಲ್ಪಾ ದಂಪತಿ. ಆದರೀಗ ನಟಿ ಶಿಲ್ಪಾ ಪ್ರತಿಕ್ರಿಯೆ ನೀಡಿದ್ದಾರೆ. ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

  ಎರಡನೇ ಮಗುವಿಗಾಗಿ 5 ವರ್ಷದಿಂದ ಕಾದಿದ್ದೇವೆ

  ಎರಡನೇ ಮಗುವಿಗಾಗಿ 5 ವರ್ಷದಿಂದ ಕಾದಿದ್ದೇವೆ

  ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ದಂಪತಿ 2012ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಆ ನಂತರ ಇನ್ನೊಂದು ಮಗು ಪಡೆಯಲು ಸಾಧ್ಯವಾಗಲಿಲ್ಲ. ಎರಡನೇ ಮಗುವಿಗಾಗಿ 5 ವರ್ಷಗಳಿಂದ ಪ್ರಯತ್ನ ಪಟ್ಟಿದ್ದಾರೆ. ಆದರೆ ಶಿಲ್ಪಾ ಶೆಟ್ಟಿ ದೇಹ ಸ್ಪಂದಿಸಲಿಲ್ಲವಂತೆ. ಈ ಕಾರಣಕ್ಕಾಗಿಯೆ ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

  ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಜೋಡಿ ಮೇಲೆ ದೂರು ದಾಖಲುಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಜೋಡಿ ಮೇಲೆ ದೂರು ದಾಖಲು

  ಹಲವು ಬಾರಿ ಗರ್ಭಪಾತವಾಗಿದೆ

  ಹಲವು ಬಾರಿ ಗರ್ಭಪಾತವಾಗಿದೆ

  ಈ ಬಗ್ಗೆ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿನ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. "ಇನ್ನೊಂದು ಮಗುವನ್ನು ಪಡೆಯುವ ಖುಷಿಗೆ ಕಾಯಿಲೆ ಅಡ್ಡಿಯಾಯಿತು. ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆಯಿಂದ ಇನ್ನೊಂದು ಮಗು ಪಡೆಯಲು ಸಾಧ್ಯವಾಗಿಲ್ಲ. ಹಲವಾರು ಬರಿ ಗರ್ಭಪಾತವಾಗಿದೆ. ಹಾಗಾಗಿ ದತ್ತು ಮಗು ಪಡೆಯುವ ಯೋಚನೆ ಮಾಡಿದ್ವಿ, ಆದರೆ ಸರಿ ಎನಿಸಲಿಲ್ಲ. ಹಾಗಾಗಿ ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡೆವು" ಎಂದು ಹೇಳಿದ್ದಾರೆ.

  ಅಯ್ಯೋ ಶಿಲ್ಪಾ ಶೆಟ್ಟಿಗೆ ಏನಾಗಿದೆ.? ಹೋಗಿ ಹೋಗಿ ಶೂ ತಿಂತಿದ್ದಾರಲ್ಲ.!ಅಯ್ಯೋ ಶಿಲ್ಪಾ ಶೆಟ್ಟಿಗೆ ಏನಾಗಿದೆ.? ಹೋಗಿ ಹೋಗಿ ಶೂ ತಿಂತಿದ್ದಾರಲ್ಲ.!

  ಒಡಹುಟ್ಟಿದವರು ಎಷ್ಟು ಮುಖ್ಯ ಎನ್ನುವುದು ಗೊತ್ತು

  ಒಡಹುಟ್ಟಿದವರು ಎಷ್ಟು ಮುಖ್ಯ ಎನ್ನುವುದು ಗೊತ್ತು

  "ವಿಯಾನ್ ಒಂದೆ ಮಗುವಾಗಿ ಬೆಳೆಯಬೇಕೆಂದು ನಾನು ಬಯಸುವುದಿಲ್ಲ. ಒಡಹುಟ್ಟಿದವರನ್ನು ಪಡೆಯುವುದು ಎಷ್ಟು ಮುಖ್ಯ ಎನ್ನುವುದು ನನಗೆ ತಿಳಿದಿದೆ. ಹಾಗಾಗಿ ಎರಡನೆ ಮಗು ಪಡೆಯುವ ಹಂಬಲವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದರಿಂದ ನನಗೆ ತುಂಬಾ ಕಿರಿಕಿರಿ ಉಂಟಾಗಿತ್ತು. ಆ ನಂತರ ಬಾಡಿಗೆ ತಾಯ್ತನದ ಮೊರೆ ಹೋದೆವು" ಎಂದು ಹೇಳಿದ್ದಾರೆ.

  English summary
  Bollywood Actress Shilpa Shetty Opnens up choosing Surrogacy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X