Shilpa Shetty: ಗಂಡನಂತೆ ಪೂರ್ತಿ ಮುಖ ಮುಚ್ಚಿಕೊಂಡು ಟ್ರೋಲ್‌ಗೆ ಒಳಗಾದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ
ಕಳೆದ 2021ರಲ್ಲಿ ಒಂದು ಪೋರ್ನ್ ಹಗರಣದಿಂದಾಗಿ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಮುಖಕ್ಕೆ ಮಾಸ್ಕ್ ಹಾಕಿಕೊಂಡೆ ಓಡಾಡುತ್ತಿದ್ದಾರೆ. ಎಲ್ಲಿಯೂ ಮುಖ ತೋರಿಸಿಲ್ಲ. ಮನೆಯ ಹಬ್ಬದ ಸಂದರ್ಭದಲ್ಲಿಯೂ ಅವರು ಹೊರಗೆ ಬರುವಾಗ ಮುಖವಾಡ ಹಾಕಿಕೊಂಡಿದ್ದರು. ಸದ್ಯಕ್ಕೆ ರಾಜ್ ಕುಂದ್ರಾಗೆ ಸಾಥ್ ನೀಡಿರುವುದು ಮತ್ಯಾರೂ ಅಲ್ಲ ಅದು ಅವರ ಪತ್ನಿ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ.
ಫುಲ್ ಫೇಸ್ ಮಾಸ್ಕ್‌ಗಳನ್ನು ಹಾಕಿಕೊಂಡು ಮುಖ ಮುಚ್ಚಿಕೊಳ್ಳುವ ರಾಜ್ ಕುಂದ್ರಾ ಅವರಂತೆಯೇ ಕಪ್ಪು ಬಣ್ಣದ ಫುಲ್ ಎಲ್ಇಡಿ ಫೇಸ್ ಮಾಸ್ಕ್ ಹಾಕಿಕೊಂಡು ಶನಿವಾರ ಮುಂಬೈನಲ್ಲಿ ಪಾಪರಾಜಿಗಳಿಗೆ ಫೋಸ್ ನೀಡಿದ್ದಾರೆ. ಈ ವೇಳೆ ರಾಜ್ ಕುಂದ್ರಾ ಕೂಡ ಅವರ ಜೊತೆಗೆ ಇದ್ದಾರೆ. ಇಬ್ಬರು ಒಂದೇ ರೀತಿಯ ಕಪ್ಪು ಬಟ್ಟೆಗಳಲ್ಲಿ ಮಿಂಚಿದ್ದಾರೆ.

ಆದರೆ, ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಅವರ ಈ ಅವತಾರಾಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಗಂಡ ತಪ್ಪು ಮಾಡಿ ಮುಖ ಮುಚ್ಚಿಕೊಂಡಿದ್ದಾರೆ. ಹಾಗೇಯೇ ಇವರು ಮುಖ ಮುಚ್ಚಿಕೊಳ್ಳುವಂತೆ ಆಗುವುದು ಬೇಡ. ನೀವು ನಿಮ್ಮ ಹಾಗೆಯೇ ಇರಿ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಶಿಲ್ಪಾ ಶೆಟ್ಟಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಕಪ್ಪು ಬಟ್ಟೆ, ಕಪ್ಪು ಫೇಸ್ ಮಾಸ್ಕ್
ಶಿಲ್ಪಾ ಶೆಟ್ಟಿ ಕುಂದ್ರಾ ಕಪ್ಪು ಬಟ್ಟೆಯಲ್ಲಿ ಪತಿ ರಾಜ್ ಕುಂದ್ರಾ ಜೊತೆ ಮ್ಯಾಚಿಂಗ್ ಮಾಡಿದ್ದಾರೆ. ದಂಪತಿ ಮಾಸ್ಕ್ ಹಾಕಿಕೊಂಡು ಫೋಸ್ ನೀಡಿದ್ದು, ಬಳಿಕ ನಟಿ ಶಿಲ್ಪಾ ಶೆಟ್ಟಿ ಒಬ್ಬರೇ ಮಾಸ್ಕ್ ತೆಗೆದು ಕ್ಯಾಮರಾಗಳಿಗೆ ಮುಖ ತೋರಿಸಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಹಲವು ಪಾಪರಾಜಿಗಳು ಇದು 'ಪವರ್ ರೇಂಜರ್ ಜೋಡಿ' ಎಂದೂ ಕರೆದಿದ್ದಾರೆ. ಅದೇ ಘಟನೆಯ ವೀಡಿಯೊಗೆ ಪ್ರತಿಕ್ರಿಯಿಸಿದ ಇನ್‌ಸ್ಟಾಗ್ರಾಮ್ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ, "ಇವರು ತನ್ನ ಗಂಡನಂತೆ ಆಗಿದ್ದಾರೆ" ಎಂದು ಬೇಸರದಲ್ಲಿ ಬರೆದಿದ್ದಾರೆ.
ನಟನಾಗಿ ತೆರೆ ಮೇಲೆ ಬರಲಿದ್ದಾರೆ ರಾಜ್ ಕುಂದ್ರಾ
ಇನ್ನು, ಉದ್ಯಮಿ ರಾಜ್ ಕುಂದ್ರಾ ಅವರು 'UT 69' ಮೂಲಕ ನಟನೆಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಅಶ್ಲೀಲ ವಿಷಯದ ಹಗರಣದಲ್ಲಿ ರಾಜ್ ಕುಂದ್ರಾ ಅವರು ಆರ್ಥರ್ ರೋಡ್ ಜೈಲಿನಲ್ಲಿದ್ದ ಸಮಯದಲ್ಲಿ ಅನುಭವಿಸಿದ ಅನುಭವಗಳ ಕಥೆಯನ್ನು ಚಲನಚಿತ್ರದಲ್ಲಿ ತಿಳಿಸಲಾಗುತ್ತದೆ. ರಾಜ್ ಕುಂದ್ರಾ ಪೋರ್ನ್ ಹಗರಣವು 2021 ರ ಅತ್ಯಂತ ವಿವಾದಾತ್ಮಕ ವಿಷಯಗಳಲ್ಲಿ ಒಂದು. ಇದು ದೇಶದಲ್ಲಿ ಅನೇಕ ಆಪ್‌ಗಳ ಮೇಲೆ ಕಣ್ಣೀಡುವಂತೆ ಮಾಡಿತು.

ಚಿತ್ರದ ಬಗ್ಗೆ ಮೂಲವೊಂದರ ಪ್ರಕಾರ, "ರಾಜ್ ಕುಂದ್ರಾ ಅವರು ಅತಿ ಹೆಚ್ಚು ಕಿಕ್ಕಿರಿದ ಜೈಲಿನಲ್ಲಿ ಅರ್ಥರ್ ರೋಡ್ ಜೈಲಿನಲ್ಲಿ ತಾವು ಕಳೆದ ದಿನಗಳಳು ಮತ್ತು ಅನುಭವಿಸಿದ ಎಲ್ಲದರ ಬಗ್ಗೆ ಚಿತ್ರವು ತಿಳಿಸಲಿದೆ. ಸದ್ಯಕ್ಕೆ ನಿರ್ದೇಶಕರ ಹೆಸರನ್ನು ಮುಚ್ಚಿಡಲಾಗಿದೆ. ಆದರೆ ರಾಜ್ ಕುಂದ್ರಾ ನಿರ್ಮಾಣದಿಂದ ಸ್ಕ್ರಿಪ್ಟ್‌ವರೆಗೆ ಎಲ್ಲಾ ಅಂಶಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ರಾಜ್ ಕುಂದ್ರಾ ಅವರ ಮೇಲೆ ಬಂದ ಆರೋಪಗಳ ಮೊದಲ ವರದಿಗಳಿಂದ ಹಿಡಿದು ಮಾಧ್ಯಮ ವರದಿಗಳವರೆಗೆ, ಜೈಲಿನಲ್ಲಿ ಕಳೆದ ದಿನಗಳಿಂದ ಜಾಮೀನಿನವರೆಗಿನ ಸಂಪೂರ್ಣ ಪ್ರಯಾಣವನ್ನು ತಿಳಿಸಲಿದೆ. ಇದು ರಾಜ್ ಕುಂದ್ರಾ ಮತ್ತು ಕುಟುಂಬದ ದೃಷ್ಟಿಕೋನದಿಂದ ಬರೆಯಲಾಗಿರುವ ಕಥೆಯಾಗಿದೆ.


Click it and Unblock the Notifications










