For Quick Alerts
  ALLOW NOTIFICATIONS  
  For Daily Alerts

  ಈ ಸಿನಿಮಾಗೆ ತುಂಬಾ ಶ್ರಮ ಹಾಕಿದ್ದೇವೆ ನೋಡಿ: ಪತಿಯ ಬಂಧನದ ನಡುವೆ ಶಿಲ್ಪಾ ಹೀಗೆ ಹೇಳಿದ್ದೇಕೆ?

  |

  ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಬಂಧನದಿಂದ ಮುಜುಗರ ಎದುರಿಸುವಂತಾಗಿದೆ. ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಜೈಲು ಸೇರಿದ್ದಾರೆ. ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಅಪ್ ಲೋಡ್ ಮಾಡುತ್ತಿದ್ದ ಆರೋಪದ ಮೇರೆಗೆ ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

  ಇತ್ತ ನಟಿ ಶಿಲ್ಪಾ ಶೆಟ್ಟಿ ಮುಜುಗರದ ನಡುವೆಯೂ ತನ್ನ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವರ್ಷಗಳ ಬಳಿಕ ಶಿಲ್ಪಾ ಸಿನಿಮಾದಲ್ಲಿ ನಟಿಸಿದ್ದಾರೆ. 'ಹಂಗಾಮಾ-2' ಸಿನಿಮಾ ಮೂಲಕ ಮೋಡು ಮಾಡುತ್ತಿದ್ದಾರೆ. ಇದೀಗ ಈ ಚಿತ್ರದ ಪ್ರಮೋಷನ್ ಮಾಡುವ ಮೂಲಕ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

  'ಹಂಗಾಮಾ-2' ಒಟಿಟಿಯಲ್ಲಿ ಬಿಡುಗಡೆಯಾಗಿದೆ. 23ರಂದು ಬಿಡುಗಡೆಯಾಗಿರುವ ಸಿನಿಮಾವನ್ನು ಎಲ್ಲರೂ ನೋಡಿ ಎಂಜಾಯ್ ಮಾಡಿ ಎಂದು ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಕೇಳಿಕೊಂಡಿದ್ದಾರೆ. "ನಾನು ಯೋಗಕಲಿಸಿದ ಪಾಠವನ್ನು ಪಾಲಿಸುತ್ತೇನೆ. ಬದುಕು ಇರುವುದು ಈ ಕ್ಷಣ. ಹಂಗಾಮಾ-2 ಇಡೀ ತಂಡದ ಪಟ್ಟು ಹಿಡಿದ ಶ್ರಮ, ಪ್ರಯತ್ನಗಳನ್ನು ಒಳಗೊಂಡಿದೆ. ಉತ್ತಮ ಚಿತ್ರ ಮಾಡಲು ತುಂಬಾ ಶ್ರಮಿಸಿದೆ. ಸಿನಿಮಾ ಯಾವತ್ತು ತೊಂದರೆ ಅನುಭವಿಸಬಾರದು" ಎಂದು ಹೇಳಿದ್ದಾರೆ.

  "ಕುಟುಂಬ ಸಮೇತರಾಗಿ ಹಂಗಾಮಾ-2 ವೀಕ್ಷಿಸಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಧನ್ಯವಾದಗಳು ಶಿಲ್ಪಾ ಶೆಟ್ಟಿ ಕುಂದ್ರ" ಎಂದು ಹೇಳಿದ್ದಾರೆ.

  ರಾಜ್ ಕುಂದ್ರ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಜೇಮ್ಸ್ ಥರ್ಬರ್ ಪುಸ್ತಕದ ಸಾಲುಗಳ ಸ್ಕ್ರೀನ್ ಶಾಟ್ ಶೇರ್ ಮಾಡುವ ಮೂಲಕ ಮೌನ ಮುರಿದಿದ್ದರು. ''ನಾವು ಈ ಹಿಂದೆಯೂ ಸವಾಲುಗಳನ್ನು ಎದುರಿಸಿ ಉಳಿದುಕೊಂಡಿದ್ದೇನೆ ಮತ್ತು ಮುಂದೆಯೂ ಸವಾಲುಗಳನ್ನು ಎದುರಿಸಿ ಉಳಿದುಕೊಳ್ಳುತ್ತೇನೆ. ನಮ್ಮ ಜೀವನವನ್ನು ಬೇರೆಡೆಗೆ ಸೆಳೆಯುವ ಯಾವುದು ನಮಗೆ ಅಗತ್ಯವಿಲ್ಲ'' ಎಂದಿದ್ದರು. ಇದೀಗ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ

  ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಅವರನ್ನು ಜುಲೈ 19ರಂದು ಬಂಧಿಸಲಾಗಿದೆ. ಜುಲೈ 27ರವರೆಗೂ ಪೊಲೀಸ್ ಕಸ್ಟಡಿ ವಿಸ್ತರಣೆ ಆಗದೆ. ರಾಜ್ ಕುಂದ್ರ ಬಂಧನದ ಬಳಿಕ ಅಶ್ಲೀಲ ಲೋಕದ ಕರಾಳ ಮುಖ ಬಹಿರಂಗವಾಗುತ್ತಿದೆ.

  English summary
  Actress Shilpa Shetty urges fans to watch Hungama-2 as Raj Kundra in Jail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X