ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ಬರ್ತಡೆ ಸ್ಪೆಷಲ್

By Harshitha

'ಆಶಿಕಿ-2' ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಭರವಸೆ ಮೂಡಿಸಿರುವ ಕಪೂರ್ ಖಾನ್ದಾನ್ ನ ಮುದ್ದಿನ ಕುಡಿ, ನಟಿ ಶ್ರದ್ಧಾ ಕಪೂರ್. 'ಆಶಿಕಿ-2', 'ಏಕ್ ವಿಲನ್', 'ಹೈದರ್'...ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡುತ್ತಾ ಬಂದಿರುವ ಶ್ರದ್ಧಾ ಕಪೂರ್ ಗಿಂದು 26ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮ.

ಬಾಲಿವುಡ್ ನ ಖತರ್ನಾಕ್ ವಿಲನ್ ಶಕ್ತಿ ಕಪೂರ್ ಮತ್ತು ಶಿವಾಂಗಿ ಕಪೂರ್ ಪುತ್ರಿಯಾಗಿ ಜನಿಸಿದ ಶ್ರದ್ಧಾ ಫಿಲ್ಮಿ ಫ್ಯಾಮಿಲಿಯಲ್ಲೇ ಬೆಳೆದಾಕೆ. 'ಹೀರೋಯಿನ್' ಆಗುವ ಬಯಕೆಯಿಂದ ಮಾಯಾನಗರಿಯ ಮಾಯಾಲೋಕಕ್ಕೆ ಕಾಲಿಟ್ಟ ಶ್ರದ್ಧಾ ಕಪೂರ್ ಗೆ ಈಗ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ.

ಬರ್ತಡೆ ಸೆಲೆಬ್ರೇಷನ್ ಮೂಡ್ ನಲ್ಲಿರುವ ಶ್ರದ್ಧಾಗೆ ಶುಭಾಶಯ ಕೋರುತ್ತಾ, ಆಕೆಯ ಬದುಕಿನ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳನ್ನ ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.. ಮುಂದೆ ಓದಿ....

ನಟಿಸೋಕ್ಕಂತ ಓದಿಗೆ ಟಾಟಾ ಹೇಳಿದ ಶ್ರದ್ಧಾ

ನಟಿಸೋಕ್ಕಂತ ಓದಿಗೆ ಟಾಟಾ ಹೇಳಿದ ಶ್ರದ್ಧಾ

ಅಪ್ಪ ಶಕ್ತಿ ಕಪೂರ್ ನಟನೆ ನೋಡಿ, ಚಿಕ್ಕವಯಸ್ಸಿಂದಲೂ ಶ್ರದ್ಧಾಗೆ ಅಭಿನಯ ಅಂದ್ರೆ ಅಚ್ಚುಮೆಚ್ಚು. ಚಿತ್ರದಲ್ಲಿ ಶಕ್ತಿ ಕಪೂರ್ ಬಳಸುತ್ತಿದ್ದ ಕಾಸ್ಟ್ಯೂಮ್ ಗಳನ್ನೆಲ್ಲಾ ಧರಿಸಿ ಕನ್ನಡಿ ಮುಂದೆ ನೃತ್ಯ ಮಾಡುತ್ತಿದ್ದ ಪುಟಾಣಿ ಶ್ರದ್ಧಾಗೆ 'ಹೀರೋಯಿನ್' ಆಗುವುದೇ ಜೀವಮಾನದ ಗುರಿಯಾಗಿತ್ತು. ಓದಿನಲ್ಲಿ ಬುದ್ದಿವಂತೆಯಾಗಿದ್ದ ಶ್ರದ್ಧಾ, 12th ಗ್ರೇಡ್ ನಲ್ಲಿ ಟಾಪರ್ ಆಗಿದ್ದರೂ, ಬಾಲಿವುಡ್ ನಿಂದ ಬುಲಾವ್ ಬಂದ ತಕ್ಷಣ ಬಾಸ್ಟನ್ ವಿಶ್ವವಿದ್ಯಾನಿಲಯಕ್ಕೆ ಟಾಟಾ ಹೇಳಿ ಓದಿಗೆ ಎಳ್ಳುನೀರು ಬಿಟ್ಟುಬಿಟ್ಟರು.

ಮೊದಲ ಸಿನಿಮಾ 'ಆಶಿಕಿ-2' ಅಲ್ಲ!

ಮೊದಲ ಸಿನಿಮಾ 'ಆಶಿಕಿ-2' ಅಲ್ಲ!

ಎಲ್ಲರೂ ನೋಡಿದ ಹಾಗೆ ಶ್ರದ್ಧಾ ಕಪೂರ್ ಅಭಿನಯಿಸಿದ ಮೊದಲ ಸಿನಿಮಾ 'ಆಶಿಕಿ-2' ಅಲ್ಲ. ಮೋಹಿತ್ ಸೂರಿ ನಿರ್ದೇಶನದ 'ಆಶಿಕಿ-2' ಸಿನಿಮಾ ತೆರೆಗೆ ಬರುವ ಎರಡು ವರ್ಷಗಳ ಹಿಂದೆಯೇ ಶ್ರದ್ಧಾ ಬಣ್ಣ ಹಚ್ಚಿದ್ದರು. 'ಟೀನ್ ಪಾಟ್ಟಿ' ಅನ್ನುವ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ಶ್ರದ್ಧಾ, ಬಾಕ್ಸಾಫೀಸ್ ನಲ್ಲಿ ಸದ್ದು ಮಾಡದೇ ಇದ್ದರೂ, 'ಫಿಲ್ಮ್ ಫೇರ್ ಅವಾರ್ಡ್'ನ ಮುಡಿಗೇರಿಸಿಕೊಂಡರು.

ಫೇಸ್ ಬುಕ್ ನಿಂದ ಸಿಕ್ಕ ಅವಕಾಶ

ಫೇಸ್ ಬುಕ್ ನಿಂದ ಸಿಕ್ಕ ಅವಕಾಶ

ಬಾಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಶ್ರದ್ಧಾ ಮೊದಲಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ. ಫೇಸ್ ಬುಕ್ ನಲ್ಲಿ ಸದಾ ಆಕ್ಟೀವ್ ಆಗಿರ್ತಿದ್ದ ಶ್ರದ್ಧಾಳ ಫೋಟೋಗಳನ್ನ ನೋಡಿ ಅಂಬಿಕಾ ಹಿಂದುಜಾ, 'ಟೀನ್ ಪಾಟ್ಟಿ' ಸಿನಿಮಾಗೆ ಅವಕಾಶ ನೀಡಿದರಂತೆ.

ಸಲ್ಮಾನ್ ಗರಡಿಯಲ್ಲಿ ಪಳಗಬೇಕಿದ್ದ ಶ್ರದ್ಧಾ!

ಸಲ್ಮಾನ್ ಗರಡಿಯಲ್ಲಿ ಪಳಗಬೇಕಿದ್ದ ಶ್ರದ್ಧಾ!

ನಿಜ ಹೇಳ್ಬೇಕಂದ್ರೆ, ಶ್ರದ್ಧಾಗೆ ಬಾಲಿವುಡ್ ನಿಂದ ಮೊದಲು ಬುಲಾವ್ ಬಂದಿದ್ದು ಸಲ್ಮಾನ್ ಖಾನ್ ಕಡೆಯಿಂದ. ಬಾಸ್ಟನ್ ಯೂನಿವರ್ಸಿಟಿಯಲ್ಲಿ ಶ್ರದ್ಧಾ ನಟಿಸಿದ ನಾಟಕವೊಂದರ ತುಣುಕು ನೋಡಿದ್ದ ಸಲ್ಮಾನ್, ಅಂದೇ ಶ್ರದ್ಧಾಗೆ ರತ್ನಗಂಬಳಿ ಹಾಸಿದ್ದರು. ಆದ್ರೆ, ಆಗಿನ್ನೂ ಶ್ರದ್ಧಾಗೆ ಕೇವಲ ಸ್ವೀಟ್ 16. ಹೀಗಾಗಿ, ಶ್ರದ್ಧಾ ಅಪ್ಪ-ಅಮ್ಮ, ಸಲ್ಲು ಕೊಟ್ಟ ಆಫರ್ ನ ನಿರಾಕರಿಸಿಬಿಟ್ಟರು.

ಮಿಂಚು ಅಂದ್ರೆ ಗಡಗಡ ನಡುಗುವ ಶ್ರದ್ಧಾ

ಮಿಂಚು ಅಂದ್ರೆ ಗಡಗಡ ನಡುಗುವ ಶ್ರದ್ಧಾ

ಶಾಲೆಯ ಸಾಕರ್ ಮತ್ತು ಹ್ಯಾಂಡ್ ಬಾಲ್ ತಂಡದಲ್ಲಿ ಅತ್ಯುತ್ತಮ ಆಟಗಾರ್ತಿಯಾಗಿದ್ದ ಶ್ರದ್ಧಾ, ನುರಿತ ಸ್ಕೂಬಾ ಡೈವರ್ ಕೂಡ ಹೌದು. ಹೀಗಿದ್ದರೂ, ಶ್ರದ್ಧಾಗೆ ಮಿಂಚು ಅಂದ್ರೆ ಭಯ. [ನಿರ್ಮಾಪಕರಿಗೆ ಸಿಹಿ ದ್ರಾಕ್ಷಿಯಾದ ಕ್ಯೂಟ್ ಶ್ರದ್ಧಾ]

ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಅಂದ್ರೆ ಪಂಚಪ್ರಾಣ

ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಅಂದ್ರೆ ಪಂಚಪ್ರಾಣ

ಶ್ರದ್ಧಾ ಕಪೂರ್ ಗೆ ಡ್ರೀಮ್ ಬಾಯ್ ಯಾರು ಅಂತ ಕೇಳಿದ್ರೆ, ಥಟ್ ಅಂತ ಬರುವ ಉತ್ತರ ಹೃತಿಕ್ ರೋಷನ್. ಇನ್ನೂ ಪ್ರಿಯಾಂಕ ಛೋಪ್ರಾ ಶ್ರದ್ಧಾಗೆ ಫೇವರಿಟ್ ಹೀರೋಯಿನ್. ಆದ್ದರಿಂದ ಈ ಇಬ್ಬರು ಎಲ್ಲೇ ಸಿಕ್ಕರೂ, ಶ್ರದ್ಧಾ ಸೆಲ್ಫಿ ಮಾತ್ರ ಮಿಸ್ ಮಾಡಲ್ಲ. 26 ನೇ ವಸಂತಕ್ಕೆ ಕಾಲಿಟ್ಟಿರುವ ಶ್ರದ್ಧಾಗೆ ಅವರ ಅಭಿಮಾನಿಗಳ ಕಡೆಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

More from Filmibeat

English summary
Bollywood Actress Shraddha Kapoor is celebrating her 26th Birthday today (March 3rd). On this Occasion, here are few little known facts about her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X