ನಾಗಿಣಿ ಅವತಾರ ತಾಳಿದ ಬಾಲಿವುಡ್ ನಟಿ ಶ್ರದ್ಧಾ ಕಪೂರ್

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಾಗಿಣಿಯ ಅವತಾರದಲ್ಲಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಹೌದು, ಈಗಾಗಲೇ ಬಾಲಿವುಡ್ ನಲ್ಲಿ ಮೂಡಿ ಬಂದಿರುವ ನಾಗಿಣಿ ಚಿತ್ರಗಳನ್ನೇ ಹೋಲುವ ಮತ್ತೊಂದು ರೀತಿಯ ನಾಗಿಣಿ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾದಲ್ಲಿ ನಟಿ ಶ್ರದ್ಧಾ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ನಟಿ ರೇಖಾ, ಶ್ರೀದೇವಿ, ರೀನಾ ರಾಯ್ ನಾಗಿಣಿಯಾಗಿ ಮಿಂಚಿದ್ದರು. ಇದೀಗ ಶ್ರದ್ಧಾ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶ್ರದ್ಧಾ, 'ತೆರೆಮೇಲೆ ನಾಗಿನ್ ಆಗಿ ಕಾಣಿಸಿಕೊಳ್ಳುತ್ತಿರುವುದು ಸಂಪೂರ್ಣ ಸಂತೋಷವಾಗಿದೆ. ನಾನು ಶ್ರೀದೇವಿ ಮೇಡಮ್ ಅವರ ನಾಗಿನಾ ಮತ್ತು ನಿಗಾಹೇನ್ ಚಿತ್ರಗಳನ್ನು ನೋಡಿ ಬೆಳೆದವಳು. ಭಾರತೀಯ ಸಂಪ್ರದಾಯಿಕ ಜಾನಪದ ಕಥೆಗಳ ಪಾತ್ರಗಳಲ್ಲಿ ನಟಿಸಲು ನಾನು ಯಾವಾಗಲು ಬಯಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಅಂದ್ಹಾಗೆ ಶ್ರದ್ಧಾ ಕಪೂರ್ ಅಭಿನಯದ ನಾಗಿನ್ ಸಿನಿಮಾಗೆ ವಿಶಾಲ್ ಫ್ಯೂರಿಯಾ ನಿರ್ದೇಶನ ಮಾಡುತ್ತಿದ್ದಾರೆ. ನಿಖಿಲ್ ದ್ವಿವೇದಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಸಿನಿಮಾ ಅನೌನ್ಸ್ ಮಾಡಿರುವ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದ ಹೆಚ್ಚನ ಭಾಗ ಗ್ರಾಫಿಕ್ಸ್ ತಂತ್ರಗಾರಿಕೆ ಇರಲಿದೆಯಂತೆ.

Actress Shraddha Kapoor To Play Naagin On-Screen In Naagin Trilogy

ನಟಿ ಶ್ರದ್ಧಾ ಕಪೂರ್ ಲಾಕ್ ಡೌನ್ ಬಳಿಕ ಇನ್ನೂ ಚಿತ್ರೀಕರಣಕ್ಕೆ ಹೊರಟಿಲ್ಲ. ಶ್ರದ್ಧಾ ಕೊನೆಯದಾಗಿ ಬಾಗಿ-3 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇದೀಗ ಲಾಕ್ ಡೌನ್ ಬಳಿಕ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು, ಸದ್ಯದಲ್ಲೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

Recommended Video

ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna

More from Filmibeat

English summary
Bollywood Actress Shraddha Kapoor to play Naagin on-screen in Naagin Trilogy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X