Shraddha Kapoor: ಮದುವೆ ಯಾವಾಗ ಎಂದ ಫ್ಯಾನ್ಸ್‌ಗೆ ನಟಿ ಶ್ರದ್ಧಾ ಕಪೂರ್ ಕೊಟ್ಟ ರಿಪ್ಲೈ ಸಕತ್ ಮಜವಾಗಿದೆ!
ಆಶಿಕಿ 2 ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರದ್ಧಾ ಕಪೂರ್ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಮೊದಲ ಸಿನಿಮಾದಲ್ಲೇ ಉತ್ತಮ ಪ್ರಶಂಸೆ ಮತ್ತು ಕೋಟ್ಯಾಂತರ ಅಭಿಮಾನಿ ಬಳಗ ಸೃಷ್ಟಿಸಿಕೊಂಡ ಇವರಿಗೆ ಸಾಮಾಜಿಕ ಮಾಧ್ಯಮದಲ್ಲಿಯೂ ಅಪಾರ ಅಭಿಮಾನಿಗಳು ಇದ್ದಾರೆ.
ತಮ್ಮ ಅದ್ಭುತ ಅಭಿನಯದ ಹೊರತಾಗಿಯೂ ನಟಿ ಶ್ರದ್ಧಾ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯವಾಗಿರುತ್ತಾರೆ. Instagram ನಲ್ಲಿ 83.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆಗಾಗ್ಗೆ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾಳೆ. ಚಿತ್ರಂಗದಲ್ಲಿ ಹೆಚ್ಚು ವಿವಾದಗಳಿ ಆಸ್ಪದ ಕೊಡದ ಇವರ ಪೋಸ್ಟ್‌ಗಳು ಕೂಡ ಹೆಚ್ಚು ವೈರಲ್ ಆಗುತ್ತವೆ.

ನಟಿ ಶ್ರದ್ಧಾ ಅಕ್ಟೋಬರ್ 4 ರಂದು ಎರಡು ಕ್ಯೂಟ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ಲೈಕ್, ಕಾಮೆಂಟ್‌ಗಳ ಮೂಲಕ ಪ್ರೀತಿ ಸುರಿಸುತ್ತಿದ್ದಾರೆ. ಫೋಟೋ ಹಂಚಿಕೊಂಡ ನಾಲ್ಕು ಗಂಟೆಯೊಳಗೆ ಒಂದು ಮಿಲಿಯನ್ ಲೈಕ್ಸ್ ಮತ್ತು ಹನ್ನೇರಡು ಸಾವಿರ ಕಾಮೆಂಟ್‌ಗಳು ಬಂದಿವೆ.
ಈ ಚಿತ್ರಗಳಲ್ಲಿ, ನಟಿ ತನ್ನ ಹೊಸ ಹೇರ್‌ಸ್ಟೈಲ್‌ನಲ್ಲಿ ತಿಳಿ ಗುಲಾಬಿ ಬಣ್ಣದ ಶಾರ್ಟ್ ಡ್ರೆಸ್ ತೊಟ್ಟು ಫೋಸ್ ನೀಡಿದ್ದಾರೆ. ಇದಕ್ಕೆ ತಿಳಿ ಗುಲಾಬಿ ಬಣ್ಣದ ಲಿಪ್‌ಸ್ಟಿಕ್ ಹಾಕಿ, ಮಿನಿಮಮ್ ಮೇಕಪ್ ಮಾಡಿಸಿದ್ದಾರೆ. ಫೋಟೋಗಳಿಗೆ "ದೊಡ್ಡ ತಲೆ = ದೊಡ್ಡ ಮೆದುಳು" ಎಂದು ಶೀರ್ಷಿಕೆ ನೀಡಿ ತಿಮಿಂಗಿಲ, ಆಕ್ಟೋಪಸ್ ಮತ್ತು ಕೋತಿಯ ಎಮೋಜಿಗಳನ್ನು ಹಾಕಿದ್ದಾರೆ.
ಮದುವೆ ಬಗ್ಗೆ ವಿಚಾರಿಸಿದ ಅಭಿಮಾನಿ, ಕಾಲೆಳೆದ ಶ್ರದ್ಧಾ!
ಈ ಫೋಟೋಗಳಿಗೆ ಅವರ ಅಭಿಮಾನಿಗಳು ಮತ್ತು ಫಾಲೋವರ್ಸ್ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಆದರೆ, ಇದರಲ್ಲಿ ಗಮನ ಸೆಳೆಯುವ ಕೆಲವು ಕಾಮೆಂಟ್‌ಗಳು ಇವೆ. ಅದು ಆಕೆಯ ಮದುವೆಯ ಬಗ್ಗೆ ಪ್ರಶ್ನೆ ಮಾಡಿರುವುದು ಮತ್ತು ಅದಕ್ಕೆ ಶ್ರದ್ಧಾ ಕಪೂರ್ ನೀಡಿರುವ ರಿಪ್ಲೈ.

ಆ ಕಾಮೆಂಟ್ ಏನೆಂದರೇ, "ನೀವು ಯಾವಾಗ ಮದುವೆಯಾಗುತ್ತೀರಿ..?" ಎಂಬುದು. ಇದಕ್ಕೆ ಪ್ರತಿಕ್ರಿಯೆಯಾಗಿ, ನಟಿ 'ಪಕ್ಕದ ಮನೆಯ ಆಂಟಿ, ನಿಮ್ಮ ನಿಜವಾದ ಐಡಿಯಿಂದ ಉತ್ತರಿಸಿ' ಎಂದು ವ್ಯಂಗ್ಯವಾಡಿದ್ದಾರೆ. ಏಕೆಂದರೆ ಭಾರತದಲ್ಲಿ ಹೆಣ್ಣಿನ ಮದುವೆ ಬಗ್ಗೆ ಆಕೆ , ಆಕೆಯ ಮನೆಯವರಿಗೆ ಚಿಂತೆ ಇರುತ್ತದೋ ಇಲ್ಲವೋ ಆದರೆ ನೆರೆ ಹೊರೆಯವರಿಗಂತೂ ಅದೆ ಚಿಂತೆ. ಹೀಗಾಗಿ ಇದು ಮತ್ತಷ್ಟು ಕಾಮೆಂಟ್‌ಗಳಿಗೆ ಕಾರಣವಾಗಿದ್ದು, ಸರಣಿ ಮುಂದುವರೆದಿದೆ.
ಇದರ ಜೊತೆಗೆ ಮತ್ತೊಬ್ಬ ಅಭಿಮಾನಿ, ನಿಮ್ಮ ಚಿತ್ರವನ್ನು ನೋಡುತ್ತಾ ನಡೆಯುವಾಗ ನಾನು ಬಿದ್ದೆ ಎಂದಿದ್ದಾರೆ. ಇದಕ್ಕೆ ನಡೆಯುವಾಗ ಇನ್‌ಸ್ಟಾ ಬಳಸಬೇಡಿ' ಎಂದು ಎಚ್ಚರಿಕೆ ಮಾತು ಹೇಳಿದ್ದಾರೆ ನಟಿ ಶ್ರದ್ಧಾ ಕಪೂರ್. ಸಾಮಾಜಿಕ ಮಾಧ್ಯಮದಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಇವರು ಇರತ ಬಾಲಿವುಡ್ ನಟಿಯರಿಗಿಂತ ಕೊಂಚ ವಿಭಿನ್ನ ಎಂಬುದು ಅವರ ಅಭಿಮಾನಿಗಳ ಗುಣಗಾನ!.
ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್ ಅವರ ಸಿನಿಮಾಗಳ ಬಗ್ಗೆ ಮಾತನಾಡುವುದಾದರೇ, ಆಕೆ ಈ ವರ್ಷ ಬಿಡುಗಡೆಯಾದ ರಣಬೀರ್ ಕಪೂರ್ ಅಭಿನಯದ ತು ಝೂಟಿ ಮೈನ್ ಮಕ್ಕರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಲವ್ ರಂಜನ್ ಅವರ ಸಿನಿಮಾದಲ್ಲಿ ಡಿಂಪಲ್ ಕಪಾಡಿಯಾ, ಬೋನಿ ಕಪೂರ್ ಮತ್ತು ಅನುಭವ್ ಸಿಂಗ್ ಬಸ್ಸಿ ಸಹ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಂದುವರಿದು, ಶ್ರದ್ಧಾ ಅವರು ರಾಜ್‌ಕುಮಾರ್ ರಾವ್ ಅವರ ಜೊತೆಗೆ ಸ್ತ್ರೀ ಸಿನಿಮಾದ ಸೀಕ್ವೇಲ್ ಸ್ತ್ರೀ- 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











