ಐಶಾರಾಮಿ ಕಾರು ಬಿಟ್ಟು ಆಟೋ ಹತ್ತಿದ ಬಾಲಿವುಡ್ ಬೆಡಗಿ! ಭೇಷ್ ಎಂದ ನೆಟ್ಟಿಗರು

ಬಾಲಿವುಡ್ ನಟ-ನಟಿಯರು ತಮ್ಮ ಅದ್ಧೂರಿ ಜೀವನಶೈಲಿಯಿಂದ ಗಮನ ಸೆಳೆಯುತ್ತಿರುತ್ತಾರೆ. ದುಬಾರಿ ಕಾರುಗಳು, ಚಿತ್ರ-ವಿಚಿತ್ರ ದುಬಾರಿ ಉಡುಗೆಗಳು, ಐಶಾರಾಮಿ ಅಪಾರ್ಟ್‌ಮೆಂಟ್‌ಗಳು, ಅದ್ಧೂರಿ ಪಾರ್ಟಿಗಳು. ಕೆಲವರ ಪಾಲಿಗಿದು ಸಿರಿವಂತಿಕೆಯ ಅಸಹ್ಯ ಪ್ರದರ್ಶನದಂತೆಯೂ ಕಾಣಬಹುದು.

ಬಾಲಿವುಡ್ಡಿಗರು ತಾವು ಸಾಮಾನ್ಯರಿಗಿಂತಲೂ ಭಿನ್ನವಾದವರು, ಎತ್ತರದಲ್ಲಿರುವವರು ಎಂದು ಪದೇ ಪದೇ ತೋರಿಸಿಕೊಳ್ಳುತ್ತಲೇ ಇರುತ್ತಾರೆ. ಇದಕ್ಕಾಗಿಯೇ ಇವರಿಗೆ ಪಿಆರ್‌ ಸಂಸ್ಥೆಗಳೂ ಸಹ ಇವೆ. ಆದರೆ ಅಪರೂಪಕ್ಕೊಬ್ಬ ಬಾಲಿವುಡ್ ಸ್ಟಾರ್ ನಟಿ ಸಾಮಾನ್ಯರಂತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಬಾಲಿವುಡ್‌ನ ಸ್ಟಾರ್ ಯುವಟಿಯೊಬ್ಬರು ತಮ್ಮ ಐಶಾರಾಮಿ ಕಾರು ಬಿಟ್ಟು ಆಟೋ ಏರಿ ಹೊರಟಿದ್ದಾರೆ. ಕೋಟ್ಯಂತರ ಬೆಲೆಯ ಕಾರುಗಳಲ್ಲೇ ಸುತ್ತಾಡುವ ನಟಿ ಸರಳ ಉಡುಗೆ ತೊಟ್ಟು ಆಟೋದಲ್ಲಿ ಹೋಗಿದ್ದು ನೋಡಿ ನೆಟ್ಟಿಗರು ಭೇಷ್ ಎಂದಿದ್ದಾರೆ.

ಆಟೋದಲ್ಲಿ ಪ್ರಯಾಣಿಸಿದ ಶ್ರದ್ಧಾ ಕಪೂರ್

ಆಟೋದಲ್ಲಿ ಪ್ರಯಾಣಿಸಿದ ಶ್ರದ್ಧಾ ಕಪೂರ್

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಇದೀಗ ತಮ್ಮ ಸರಳತೆಯಿಂದ ಗಮನ ಸೆಳೆದಿದ್ದಾರೆ. ನಿನ್ನೆ ರಾತ್ರಿ ಗೆಳತಿಯೊಬ್ಬರೊಟ್ಟಿಗೆ ಸಿನಿಮಾಕ್ಕೆ ಹೋಗಿದ್ದ ಶ್ರದ್ಧಾ ಕಪೂರ್ ಆಟೋ ಹಿಡಿದು ಮನೆಗೆ ವಾಪಸ್ಸಾಗಿದ್ದಾರೆ. ತಮ್ಮ ಐಶಾರಾಮಿ ಕಾರು, ಮ್ಯಾನೇಜರ್‌, ಬಾಡಿಗಾರ್ಡ್ ಯಾವುದೂ ಇಲ್ಲದೆ ಸರಳ ಉಡುಗೆಯಲ್ಲಿ ಮುಂಬೈ ಸುತ್ತಿದ ಶ್ರದ್ಧಾರ ವಿಡಿಯೋಗಳು ಇದೀಗ ವೈರಲ್ ಆಗಿದ್ದು ನೆಟ್ಟಿಗರಿಂದ ಪ್ರಶಂಸೆ ಗಳಿಸಿಕೊಂಡಿವೆ.

ಮಾಸ್ಕ್ ಧರಿಸಿ ಓಡಾಡುತ್ತಿದ್ದ ಶ್ರದ್ಧಾ ಕಪೂರ್

ಮಾಸ್ಕ್ ಧರಿಸಿ ಓಡಾಡುತ್ತಿದ್ದ ಶ್ರದ್ಧಾ ಕಪೂರ್

ಜನ ತಮ್ಮನ್ನು ಗುರುತಿಸದಿರಲೆಂದು ಮಾಸ್ಕ್ ಧರಿಸಿಕೊಂಡು, ಅತ್ಯಂತ ಸರಳವಾದ ಉಡುಗೊರೆ ತೊಟ್ಟು ಗೆಳತಿ ತೇಜಸ್ವಿನಿ ಕೊಲ್ಹಾಪುರ್ ಅವರೊಟ್ಟಿಗೆ ಸಿನಿಮಾಕ್ಕೆ ಹೋಗಿದ್ದರು. ಆದರೆ ಪಾಪಾರಾಟ್ಜಿಗಳು ಶ್ರದ್ಧಾ ಅವರನ್ನು ಗುರುತು ಹಿಡಿದಿದ್ದು, ಅವರ ವಿಡಿಯೋ ಚಿತ್ರಗಳನ್ನು ತೆಗೆದಿದ್ದಾರೆ. ಆ ಸಮಯದಲ್ಲಿ ಶ್ರದ್ಧಾ ಕಪೂರ್ ಆಟೋ ಏರಿ ಮನೆಗೆ ತಲುಪಿರುವ ವಿಡಿಯೋ ಸಹ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶ್ರದ್ಧಾ ಬಳಿ ಹಲವು ಕಾರುಗಳಿವೆ

ಶ್ರದ್ಧಾ ಬಳಿ ಹಲವು ಕಾರುಗಳಿವೆ

ಶ್ರದ್ಧಾ ಕಪೂರ್, ಜನಪ್ರಿಯ ಹಾಸ್ಯ ನಟ ಶಕ್ತಿ ಕಪೂರ್ ಪುತ್ರಿ. ತೆಲುಗಿನಲ್ಲಿ ಪ್ರಭಾಸ್ ಜೊತೆ 'ಸಾಹೋ' ಸಿನಿಮಾದಲ್ಲಿಯೂ ನಟಿಸಿರುವ ಶ್ರದ್ಧಾ, ಹಿಂದಿಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರದ್ಧಾ ಬಳಿ ಆಡಿ ಕ್ಯೂ 7, ಮರ್ಸಿಡಿಸ್ ಬೆಂಜ್ ಜಿಎಲ್‌ಇ, ಬಿಎಂಡಬ್ಲು 7 ಸೀರೀಸ್, ಇನ್ನೊವಾ ಕ್ರಿಸ್ಟಾ, ಮಾರುತಿ ಸಿಯಾಜ್ ಇನ್ನೂ ಕೆಲವು ಕಾರುಗಳಿವೆ. ಸಾಮಾನ್ಯವಾಗಿ ತಮ್ಮ ಆಡಿ ಕ್ಯೂ 7, ಮರ್ಸಿಡಿಸ್ ಬೆಂಜ್ ಜಿಎಲ್‌ಇ, ಬಿಎಂಡಬ್ಲು 7 ಸೀರೀಸ್ ಕಾರುಗಳಲ್ಲಿ ಹೆಚ್ಚು ಪ್ರಯಾಣಿಸುತ್ತಾರೆ ಶ್ರದ್ಧಾ. ಆದರೆ ಈಗ ಆಟೋ ಹಿಡಿದಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿತ್ತು

ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿತ್ತು

ಶ್ರದ್ಧಾ ಕಪೂರ್‌ರ ಸಹೋದರ ಸಿದ್ಧಾಂತ್ ಕಪೂರ್ ಅನ್ನು ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಸಿದ್ಧಾಂತ್ ಕಪೂರ್ ನಿಷೇಧಿತ ಡ್ರಗ್ಸ್ ಸೇವಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಅವರ ರಕ್ತ ಪರೀಕ್ಷೆ ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯ್ತು. ಸ್ವತಃ ಶ್ರದ್ಧಾ ಕಪೂರ್ ಹೆಸರು ಸಹ ಬಾಲಿವುಡ್‌ ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಹೊರಬಿದ್ದ ಬಾಲಿವುಡ್ ಡ್ರಗ್ಸ್ ಪ್ರಕರಣದ ನಡುವೆ ಶ್ರದ್ಧಾ ಹೆಸರೂ ಕೇಳಿ ಬಂದಿತ್ತು, ಪ್ರಕರಣದ ತನಿಖೆ ನಡೆಸಿದ್ದ ಎನ್‌ಸಿಬಿ, ಶ್ರದ್ಧಾ ಕಪೂರ್ ಅನ್ನೂ ವಿಚಾರಣೆ ನಡೆಸಿದ್ದರು.

More from Filmibeat

English summary
Bollywood actress Shradha Kapoor traveled in auto instead of car. Her video of she traveling in auto getting viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X