For Quick Alerts
  ALLOW NOTIFICATIONS  
  For Daily Alerts

  ಸಾರ್ವಜನಿಕವಾಗಿ ಪ್ರಿಯಕರನಿಗೆ ಮುತ್ತಿಕ್ಕಿದ ನಟಿ ಶ್ರುತಿ ಹಾಸನ್

  |

  ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಎಲ್ಲರಂತಲ್ಲ. ಶ್ರುತಿ ಅವರದ್ದು ಬಿಂದಾಸ್ ವ್ಯಕ್ತಿತ್ವ. ಅಂದುಕೊಂಡಿದ್ದನ್ನು ಹೇಳುವುದಕ್ಕೆ, ಇಷ್ಟವಾದಂತೆ ಬದುಕುವುದನ್ನು ಅವರ ತಂದೆಯೇ ಹೇಳಿಕೊಟ್ಟಿದ್ದಾರೆ.

  ಈ ಹಿಂದೆ ತಾವು ಮದ್ಯ ವ್ಯಸನಿ ಆಗಿದ್ದ ಬಗ್ಗೆ, ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಬಗ್ಗೆ, ಡಿಪ್ರೆಶನ್‌ಗೆ ಒಳಗಾಗಿ ಹೊರಬಂದ ಬಗ್ಗೆ ಎಲ್ಲ ಧೈರ್ಯದಿಂದ ಮಾತನಾಡಿದ್ದ ಶ್ರುತಿ ಹಾಸನ್, ತಮ್ಮ ಬಾಯ್‌ಫ್ರೆಂಡ್‌ ಬಗ್ಗೆಯೂ ಧೈರ್ಯಾಗಿಯೇ ಮಾತನಾಡುತ್ತಾರೆ.

  ಇದೀಗ ಶ್ರುತಿ ಹಾಸನ್ ಅವರ ಚಿತ್ರವೊಂದು ವೈರಲ್ ಆಗಿದ್ದು, ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಸಾರ್ವಜನಿಕ ಪ್ರದೇಶದಲ್ಲಿ ತಮ್ಮ ಪ್ರಿಯಕರನಿಗೆ ಮುತ್ತಿಕ್ಕುತ್ತಿದ್ದಾರೆ. ಈ ಫೊಟೊ ಸಖತ್ ವೈರಲ್ ಆಗಿದೆ. ಕೆಲವರು ನಟಿಯ ವರ್ತನೆ ಬಗ್ಗೆ ಅಸಮಾಧಾನ ಸಹ ಹೊರಗೆ ಹಾಕಿದ್ದಾರೆ.

  ಮುಂಬೈನಲ್ಲಿ ನೆಲೆಸಿರುವ ಶ್ರುತಿ ಹಾಸನ್‌ಗೆ ಶಂತನು ಹಜಾರಿಕಾ ಹೆಸರಿನ ಬಾಯ್‌ಫ್ರೆಂಡ್ ಇದ್ದಾರೆ. ಇತ್ತೀಚೆಗೆ ಮುಂಬೈನ ಸೂಪರ್ ಮಾರ್ಕೆಟ್ ಒಂದಕ್ಕೆ ಬಾಯ್‌ಫ್ರೆಂಡ್ ಶಂತನು ಹಾಗೂ ಆತ್ಮೀಯ ಗೆಳತಿ ಅಮೃತಾ ರಾಮ್ ಜೊತೆಗೆ ಶಾಪಿಂಗ್ ಹೋಗಿದ್ದಾಗ ಸೂಪರ್‌ ಮಾರ್ಕೆಟ್‌ನಲ್ಲಿಯೇ ಬಾಯ್‌ಫ್ರೆಂಡ್ ಶಂತನುಗೆ ಮುತ್ತುಕೊಟ್ಟಿದ್ದಾರೆ ಶ್ರುತಿ ಹಾಸನ್.

  ಪ್ರಚೋದನಾತ್ಮಕವಾಗಿದೆ ಈ ಚಿತ್ರ

  ಪ್ರಚೋದನಾತ್ಮಕವಾಗಿದೆ ಈ ಚಿತ್ರ

  ಶ್ರುತಿ ಹಾಸನ್, ಬಹಿರಂಗವಾಗಿ ಶಂತನುಗೆ ಮುತ್ತು ಕೊಡುತ್ತಿರುವ ಚಿತ್ರವನ್ನು ಅಮೃತಾ ರಾವ್ ಕ್ಲಿಕ್ಕಿಸಿದ್ದು, ಅದನ್ನು ಶ್ರುತಿ ಹಾಸನ್ ಹಂಚಿಕೊಂಡಿದ್ದಾರೆ. ಶ್ರುತಿ, ಶಂತನುಗೆ ಮುತ್ತು ಕೊಡುತ್ತಿರುವ ಚಿತ್ರ ತುಸು ಪ್ರಚೋದಕವಾಗಿಯೂ ಕಾಣುತ್ತಿದೆ.

  ವೈರಲ್ ಆಗಿರುವ ಚಿತ್ರಗಳು

  ವೈರಲ್ ಆಗಿರುವ ಚಿತ್ರಗಳು

  ಮತ್ತೊಂದು ಚಿತ್ರದಲ್ಲಿ ಶಂತನು ಅನ್ನು ಅಪ್ಪಿಕೊಂಡಿರುವ ಮಾದರಿಯಲ್ಲಿಯೇ ಗೆಳತಿ ಅಮೃತಾ ಅನ್ನು ಅಪ್ಪಿಕೊಂಡಿದ್ದಾರೆ ಶ್ರುತಿ ಹಾಸನ್. ಈ ಚಿತ್ರಗಳನ್ನೆಲ್ಲ ಜುಲೈ 17 ರಂದು ಕ್ಲಿಕ್ಕಿಸಲಾಗಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  ಯಾರು ಈ ಶಂತನು ಹಜಾರಿಕಾ?

  ಯಾರು ಈ ಶಂತನು ಹಜಾರಿಕಾ?

  ಶಂತನು ಡೂಡಲ್ ಕಲಾವಿದನಾಗಿದ್ದು ಜಿಎಪಿ (ಗುವಾಹಟಿ ಆರ್ಟ್ ಪ್ರಾಜೆಕ್ಟ್‌) ಸಂಸ್ಥಾಪಕರೂ ಆಗಿದ್ದಾರೆ. ಅವರ ಇನ್‌ಸ್ಟಾಗ್ರಾಂ ಮಾಹಿತಿ ಪ್ರಕಾರ 2014ರಲ್ಲಿ ಡೂಡಲ್ ಕಲೆಗೆ ಪ್ರಶಸ್ತಿಯನ್ನು ಸಹ ಅವರು ಪಡೆದಿದ್ದಾರೆ. ಜೊತೆಗೆ ಈಶಾನ್ಯ ಭಾರತದ ಕಲಾ ಪ್ರಕಾರಗಳ ಬಗ್ಗೆ ಸಂಶೋಧನೆ ಸಹ ಮಾಡುತ್ತಿದ್ದಾರೆ. ಜೊತೆಗೆ 'ರಫ್ತಾರ್' ಮತ್ತು 'ಡಿವೈನ್' ಜೊತೆಗೆ ರ್ಯಾಪರ್ ಆಗಿಯೂ ಕಾರ್ಯನಿರ್ವಸಿದ್ದಾರೆ.

  'ಸಲಾರ್'ನಲ್ಲಿ ಶ್ರುತಿ ಹಾಸನ್

  'ಸಲಾರ್'ನಲ್ಲಿ ಶ್ರುತಿ ಹಾಸನ್

  ನಟಿ ಶ್ರುತಿ ಹಾಸನ್ ಪ್ರಸ್ತುತ ಪ್ರಭಾಸ್ ಜೊತೆಗೆ 'ಸಲಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಇದರ ಹೊರತಾಗಿ ತಮಿಳಿನ 'ಲಾಭಂ' ಸಿನಿಮಾದಲ್ಲಿ ಈಗಾಗಲೇ ನಟಿಸಿ ಆಗಿದ್ದು ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಜೊತೆಗೆ ಹಿಂದಿಯ ವೆಬ್ ಸರಣಿಯಲ್ಲಿಯೂ ಶ್ರುತಿ ನಟಿಸುತ್ತಿದ್ದಾರೆ ಅದರ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.

  English summary
  Actress Shruti Haasan kissed her boyfriend Santanu Hazarika in public. Shruti kissed Santanu in a super market, pic went viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X