For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್‌ ಅನ್ನು ಕಠುವಾಗಿ ಟೀಕಿಸಿದ ನಟಿ: ಅಭಿಮಾನಿಗಳಿಂದ ಬೆದರಿಕೆ

  |

  ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಸೋಫಿಯಾ ಹಯಾತ್ ಸಲ್ಮಾನ್ ಖಾನ್ ಅನ್ನು ಕಠುವಾಗಿ ಟೀಕಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಲ್ಮಾನ್ ಖಾನ್ ಅಭಿಮಾನಿಗಳು ಸೋಫಿಯಾಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದಾರೆ.

  'ರಾಧೆ' ಸಿನಿಮಾ ನೋಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಸೋಫಿಯಾ, 'ಸಲ್ಮಾನ್ ತನ್ನ ಪ್ರತಿ ಸಿನಿಮಾಕ್ಕೂ ಒಂದೇ ತಂತ್ರ ಬಳಸುತ್ತಾರೆ. ಹಬ್ಬಗಳನ್ನು ಸಹ ಸಿನಿಮಾದ ಪ್ರಚಾರಕ್ಕೆ, ಹಣಗಳಿಸಲು ಬಳಸಿಕೊಳ್ಳುತ್ತಾರೆ. ವರ್ಷಗಳಿಂದಲೂ ಒಂದೇ ರೀತಿಯ ಕತೆಯುಳ್ಳ ಸಿನಿಮಾ ಮಾಡುತ್ತಿರುವ ಸಲ್ಮಾನ್, ನಾಯಕಿಯನ್ನಾಗಿ ಮಾತ್ರ ಕಿರಿಯ ವಯಸ್ಸಿನ ಮಾಡೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ' ಎಂದಿದ್ದಾರೆ.

  ಮುಂದುವರೆದು, 'ರಾಧೆ' ಸಿನಿಮಾದಲ್ಲಿಯೂ ಅದು ಮುಂದುವರೆದಿದೆ. ಸಿನಿಮಾದ ಟ್ರೇಲರ್‌ ನೋಡಿದಾಗಲೇ ನನಗೆ ಅನಿಸಿತ್ತು. ಇದನ್ನು ಮುಂಚೆಯೇ ನೋಡಿದ್ದೇನಲ್ಲ ಎಂದು. ವೀಕ್ಷಕರು ಬದಲಾಗಿದ್ದಾರೆ ಆದರೆ ಸಲ್ಮಾನ್ ಖಾನ್ ಬದಲಾಗಿಲ್ಲ. 'ರಾಧೆ' ಅಂತೂ ಅತ್ಯಂತ ಕೆಟ್ಟ ಸಿನಿಮಾ' ಎಂದಿದ್ದಾರೆ ಸೋಫಿಯಾ.

  ರಣದೀಪ್ ಹೂಡ ಪಾತ್ರ ಸಹ ಚೆನ್ನಾಗಿಲ್ಲ: ಸೋಫಿಯಾ

  ರಣದೀಪ್ ಹೂಡ ಪಾತ್ರ ಸಹ ಚೆನ್ನಾಗಿಲ್ಲ: ಸೋಫಿಯಾ

  'ರಣದೀಪ್ ಹೂಡ ಪಾತ್ರ ಸಹ ಚೆನ್ನಾಗಿಲ್ಲ. ಒಳ್ಳೆಯ ನಟರಾಗಿದ್ದರೂ ಕೆಟ್ಟ ಸಿನಿಮಾಕ್ಕಾಗಿ ತಮ್ಮ ಪ್ರತಿಭೆಯನ್ನು ಹಾಳು ಮಾಡಿಕೊಂಡಿದ್ದಾರೆ ರಣದೀಪ್. 'ರಾಧೆ' ಸಲ್ಮಾನ್ ಖಾನ್ ಸಿನಿಮಾ ಆಗಿರುವ ಕಾರಣಕ್ಕಷ್ಟೆ ರಣದೀಪ್ ಹೂಡ ಆ ಸಿನಿಮಾ ಒಪ್ಪಿಕೊಂಡಿದ್ದಾರೆ. ಆದರೆ ಇದರಿಂದ ಅವರಿಗೆ ಕೆಟ್ಟದ್ದಾಗಿದೆ' ಎಂದಿದ್ದಾರೆ ಸೋಫಿಯಾ.

  ಸಲ್ಮಾನ್ ಖಾನ್‌ ಜೊತೆ ನಿಲ್ಲಲು ಇಷ್ಟವಾಗಲಿಲ್ಲ: ಸೋಫಿಯಾ

  ಸಲ್ಮಾನ್ ಖಾನ್‌ ಜೊತೆ ನಿಲ್ಲಲು ಇಷ್ಟವಾಗಲಿಲ್ಲ: ಸೋಫಿಯಾ

  'ನಾನು ಬಿಗ್‌ಬಾಸ್ ಶೋನ ಫೈನಲ್‌ನಲ್ಲಿ ಸಲ್ಮಾನ್ ಖಾನ್ ಜೊತೆ ನಿಲ್ಲದೇ ಇರಲು ನಿರ್ಧರಿಸಿದ್ದೆ. ಏಕೆಂದರೆ ಅದು ನನಗೆ ಇಷ್ಟವಿರಲಿಲ್ಲ. ನನ್ನ ಆದರ್ಶ, ಸತ್ಯಗಳೇ ನನಗೆ ಹೆಚ್ಚು ದೊಡ್ಡದಾಗಿದ್ದವು' ಎಂದಿರುವ ಸೋಫಿಯಾ, ದೇಶದ ಜನ ಬುದ್ಧಿವಂತರಾಗಿದ್ದಾರೆ, ಪ್ರತಿದಿನ ಪ್ರಗತಿ ಸಾಧಿಸುತ್ತಿದ್ದಾರೆ. ಸಲ್ಮಾನ್ ಸಹ ಬೆಳೆಯಬೇಕು, ಬುದ್ಧಿವಂತನಾಗಬೇಕು' ಎಂದಿದ್ದಾರೆ ಸೋಫಿಯಾ.

  ಬೆದರಿಕೆ ಹಾಕಿರುವ ಸಲ್ಮಾನ್ ಅಭಿಮಾನಿಗಳು

  ಬೆದರಿಕೆ ಹಾಕಿರುವ ಸಲ್ಮಾನ್ ಅಭಿಮಾನಿಗಳು

  ತಮ್ಮ ಅಭಿಮಾನದ ನಟನ ವಿರುದ್ಧ ಟೀಕೆ ಮಾಡಿರುವ ನಟಿಗೆ ಸಲ್ಲು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದಾರೆ. ಕೆಟ್ಟದಾಗಿ ಮೂದಲಿಸಿದ್ದಾರೆ. ಸಲ್ಮಾನ್ ಹೆಸರು ಬಳಸಿ ಪ್ರಚಾರ ಪಡೆಯಲು ಸೋಫಿಯಾ ಯತ್ನಿಸುತ್ತಿದ್ದಾರೆ. ಸಲ್ಮಾನ್ ಜೊತೆ ನಿಲ್ಲುವ ಯೋಗ್ಯತೆ ಆಕೆಗೆ ಇಲ್ಲವೆಂದು ಅಭಿಮಾನಿಗಳು ಹೇಳಿದ್ದಾರೆ. ಮೂದಲಿಕೆ ಕಮೆಂಟ್‌ಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಸೋಫಿಯಾ, ಅಭಿಮಾನಿಗಳ ವರ್ತನೆಯಿಂದ ನನಗೆ ಆಶ್ಚರ್ಯವೇನೂ ಆಗಿಲ್ಲ ಎಂದಿದ್ದಾರೆ.

  ನುಸ್ರತ್ ಜಹಾನ್& ನಿಖಿಲ್ ಜೈನ್ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣರಾದ್ರಾ?| Filmibeat Kannada
  ಹಿಂದು ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪ

  ಹಿಂದು ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪ

  ಸೋಫಿಯಾ ಹಯಾತ್‌ ತಮ್ಮ ಹಾಟ್ ಚಿತ್ರಗಳಿಂದ ಬಹಳ ಖ್ಯಾತರು. ಈ ಹಿಂದೆ ಕಾಳಿ ಮಾತೆಯ ನಗ್ನ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಸುದ್ದಿಯಾಗಿದ್ದರು. ಜೊತೆಗೆ ಬೆತ್ತಲಾಗಿ ಓಂಕಾರಕ್ಕೆ ಮನಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದು ಸಹ ಸುದ್ದಿಯಾಗಿತ್ತು. ಸೋಫಿಯಾ ಆಗಾಗ್ಗೆ ಇಂಥಹುದ್ದೇ ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ.

  English summary
  Actress, Bigg Boss former contestant Sofia Hayat criticize Salaman Khan. Bhai's fans get angry and threatened Sofia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X