»   » ಸಲ್ಮಾನ್ ಖಾನ್ ಜೈಲು ಸೇರಿದ್ದಕ್ಕೆ ಅತೀವ ಸಂತಸಗೊಂಡ ನಟಿ.!

ಸಲ್ಮಾನ್ ಖಾನ್ ಜೈಲು ಸೇರಿದ್ದಕ್ಕೆ ಅತೀವ ಸಂತಸಗೊಂಡ ನಟಿ.!

By Bharath Kumar
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್ ಖಾನ್ ಬಗ್ಗೆ ಇಡೀ ಬಾಲಿವುಡ್ ಬೇಸರ ವ್ಯಕ್ತಪಡಿಸಿದೆ. ಸಲ್ಲು ಅವರ ಸಮಾಜಿಕ ಕಳಕಳಿ ಮತ್ತು ಒಳ್ಳೆಯ ಕೆಲಸಗಳನ್ನ ಗಮನಿಸಿ ದೋ‍ಷಮುಕ್ತರಾಗಿ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಆದ್ರೆ, ಇಲ್ಲೊಬ್ಬ ನಟಿ ಸಲ್ಮಾನ್ ಖಾನ್ ಗೆ ಜೈಲು ಶಿಕ್ಷೆಯಾಗಿದ್ದರ ಬಗ್ಗೆ ತೀವ್ರ ಸಂತಸಗೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸಂತೋಷವನ್ನ ಹೊರಹಾಕಿದ್ದಾರೆ.

  ಸಲ್ಮಾನ್ ಗೆ ಜಾಮೀನು ಸಿಕ್ಕಿಲ್ಲ ಅಂದ್ರೆ 800 ಕೋಟಿ ನಷ್ಟ.! ಎಲ್ಲಿಂದ ಎಷ್ಟು ಕೋಟಿ.?

  ಹೌದು, ನಟಿ ಮಾಡೆಲ್ ಸೋಪಿಯಾ ಹಯತ್, ಬಾಲಿವುಡ್ ಸುಲ್ತಾನ್ ಬಗ್ಗೆ ಆಕ್ರೋಶದ ಮಾತುಗಳನ್ನಾಡಿದ್ದಾರೆ. ಇನ್ನು ಅಚ್ಚರಿ ಅಂದ್ರೆ, ಸೋಪಿಯಾ 'ಬಿಗ್ ಬಾಸ್' ಹಿಂದಿ ಕಾರ್ಯಕ್ರಮದ ಸ್ಪರ್ಧಿ ಕೂಡ ಆಗಿದ್ದರು. ಅಷ್ಟಕ್ಕೂ, ಸೋಪಿಗೆ ಸಲ್ಲು ಮೇಲೆ ಯಾಕೆ ಕೋಪ.? ಸಲ್ಲುಗೆ ಶಿಕ್ಷೆಯಾಗಿರುವುದರ ಬಗ್ಗೆ ಏನಂದ್ರು.? ಮುಂದೆ ಓದಿ....

  ಸಲ್ಲು ಕಂಡ್ರೆ ನನಗೆ ಭಯ ಇಲ್ಲ

  ''ಬಾಲಿವುಡ್ ನಲ್ಲಿ ಹಲವು ಜನ ಸಲ್ಮಾನ್ ಖಾನ್ ಅವರ ವಿರುದ್ಧ ಮಾತನಾಡಲು ಭಯ ಪಡ್ತಾರೆ. ಯಾಕಂದ್ರೆ, ಸಲ್ಮಾನ್ ಇಂಡಸ್ಟ್ರಿಯನ್ನ ನಿಯಂತ್ರಣ ಮಾಡ್ತಿದ್ದಾರೆ ಎಂಬ ಮಾತು. ಆದ್ರೆ, ನನಗೆ ಯಾವುದೇ ಭಯ, ಅಂಜಿಕೆ ಇಲ್ಲ. ಹೀಗಾಗಿ, ನಾನು ಮುಕ್ತವಾಗಿ ಸಲ್ಲು ಬಗ್ಗೆ ಮಾತನಾಡುತ್ತೇನೆ. ಸಲ್ಮಾನ್ ಖಾನ್ ಗೆ ಶಿಕ್ಷೆ ಆಗಿರುವುದು ನನಗೆ ತೀವ್ರ ಖುಷಿ ಕೊಟ್ಟಿದೆ''- ಸೋಪಿಯಾ, ನಟಿ

  ಸಲ್ಮಾನ್ ಕೃಷ್ಣಮೃಗ ಬೇಟೆಯಾಡಲು ಪ್ರಚೋದನೆ ನೀಡಿದ್ದೇ ಈ ನಟಿಯಂತೆ.!

  ಸಲ್ಮಾನ್ ಏನು ಹೇಳಲು ಹೊರಟಿದ್ದಾರೆ.?

  ''ಈ ಭೂಮಿಗೆ ಪ್ರಾಣಿಗಳು ಅತಿ ಮುಖ್ಯ. ಅವರನ್ನ ಅನೇಕ ಮಕ್ಕಳು ನೋಡುತ್ತಿರುತ್ತಾರೆ. ಯುವಜನಾಂಗ ಅವರನ್ನ ಅನುಕರಣೆ ಮಾಡುತ್ತಾರೆ. ಹೀಗಾಗಿ, ಸಲ್ಲು ಈ ರೀತಿ ಮಾಡಿದ್ರೆ, ಅದು ಸಮಾಜಕ್ಕೆ ಏನು ಸಂದೇಶ ನೀಡುತ್ತೆ.? ಅವರ ಅಭಿಮಾನಿಗಳಿಗೆ ಏನು ಸಂದೇಶ ನೀಡುತ್ತಿದ್ದಾರೆ.? ಕಾನೂನು ಉಲ್ಲಂಘಿಸುವುದು, ಪ್ರಾಣಿಗಳನ್ನ ಕೊಲ್ಲುವುದು. ಅವರು ಸೆಲೆಬ್ರಿಟಿ ಎಂಬ ಕಾರಣಕ್ಕೆ ಏನೇ ಮಾಡಿದ್ರು ಅದು ಸರಿಯೇ....? ಎಂದು ಪ್ರಶ್ನಿಸಿದ್ದಾರೆ.

  ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯ: ನಾಳೆ ತೀರ್ಪು

  ಹಣದ ಮುಂದೆ ಕಾನೂನು ದೊಡ್ಡದಲ್ಲ ಎಂದುಕೊಂಡಿದ್ದೇ.!

  ''ವಿದೇಶಗಳಲ್ಲಿ ಏನಾದರೂ ಈ ರೀತಿ ಘಟನೆಗಳು ಆದ್ರೆ, ಅದಕ್ಕೆ ಅವರೇ ಕಾರಣರಾಗ್ತಾರೆ. ಖುದ್ದು ಅವರೇ ಅದರ ನಷ್ಟಪರಿಹಾರವನ್ನ ಕಟ್ಟಿಕೊಡಬೇಕಾಗುತ್ತೆ. ಭಾರತದಲ್ಲಿ ಕಾನೂನಿನ ಮುಂದೆ ಯಾರು ದೊಡ್ಡವರಿಲ್ಲ. ಎಲ್ಲರಿಗೂ ಒಂದೇ ಕಾನೂನು ಅಂತಾರೆ. ಆದ್ರೆ, ಜನರು ಪೊಲೀಸರ ಬಳಿ ಹೋಗಲು ಭಯ ಪಡುತ್ತಾರೆ. ಹಣದ ಮುಂದೆ ಬಡವರ ಕಷ್ಟ ನಡೆಯಲ್ಲ. ಲಾಯರ್ ಗಳು, ಜಡ್ಜ್ ಗಳು ಕೂಡ ಶ್ರೀಮಂತರ ಮುಂದೆ ಸೋತು ಹೋಗ್ತಾರೆ'' - ಸೋಪಿಯಾ, ನಟಿ

  ಹಿಂದೂಸ್ತಾನ್ ಜಿಂದಾಬಾದ್

  ''ಇದು ನನ್ನ ಜೀವನದಲ್ಲೇ ಆಗಿತ್ತು. ಪ್ರಕರಣವೊಂದರಲ್ಲಿ ಅರ್ಮಾನ್ ಕೊಹ್ಲಿ ಅವರು ನನ್ನ ವಕೀಲರಿಗೆ ದುಡ್ಡು ಕೊಟ್ಟು ಕೊಂಡುಕೊಂಡರು. ಆ ಪ್ರಕರಣವನ್ನ ನಾನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ರೆ, ಇಂದು ನ್ಯಾಯ ಗೆದ್ದಿದೆ. ಭಾರತದಲ್ಲಿ ನ್ಯಾಯಕ್ಕೆ ಬೆಲೆ ಇದೆ ಎಂದು ಪ್ರಪಂಚದ ಮುಂದೆ ತಲೆ ಎತ್ತಿ ನಡೆಯಬಹುದು ಎಂಬುದು ಈ ದಿನ ಸಾಬೀತಾಗಿದೆ. ನಾನು ಇಂದು ಹೆಮ್ಮೆಯಿಂದ ಹೇಳುತ್ತೇನೆ 'ಹಿಂದೂಸ್ತಾನ್ ಜಿಂದಬಾದ್'' - ಸೋಪಿಯಾ, ನಟಿ

  English summary
  The Jodhpur court on Thursday convicted Salman in the 1998 blackbuck poaching case and sentenced him to 5 years in jail. many Bollywood actors have been expressing support for Salman Khan. However, Sofia has said that she is happy about the superstar being jailed.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more