»   »  ಸೈಫ್ ಅಲಿ ಖಾನ್ ಸಹೋದರಿ ಸೀರೆ ತೊಟ್ಟಿದ್ದೆ ದೊಡ್ಡ ತಪ್ಪಾಯಿತು.!

ಸೈಫ್ ಅಲಿ ಖಾನ್ ಸಹೋದರಿ ಸೀರೆ ತೊಟ್ಟಿದ್ದೆ ದೊಡ್ಡ ತಪ್ಪಾಯಿತು.!

Posted By:
Subscribe to Filmibeat Kannada

ಬಾಲಿವುಡ್ ನಟಿ, ಸೈಫ್ ಅಲಿ ಖಾನ್ ಸಹೋದರಿ ಸೋಹ ಅಲಿ ಖಾನ್ ಇತ್ತೀಚೆಗಷ್ಟೇ ತಮ್ಮ Instagram ನಲ್ಲಿ ಕಲರ್ ಫುಲ್ ಫೋಟೋಗಳನ್ನ ಪೋಸ್ಟ್ ಮಾಡಿದ್ದರು. ಈ ಫೋಟೋಗಳು ಆಕೆಯನ್ನ ವಿವಾದಕ್ಕೆ ಗುರಿ ಮಾಡುತ್ತೆ ಎಂಬ ನಿರೀಕ್ಷೆಯನ್ನ ಯಾರು ಮಾಡಿರಲಿಲ್ಲ.

ನಟ ಕುನಾಲ್ ಖೇಮ್ ಜೊತೆ ಸಪ್ತಪದಿ ತುಳಿದಿದ್ದ ಸೋಹ ಅಲಿ ಖಾನ್ ಈಗ ಗರ್ಭೀಣಿ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸೋಹ ದಂಪತಿ, ಇತ್ತೀಚೆಗಷ್ಟೇ ಸೀಮಂತ ಕಾರ್ಯಕ್ರಮವನ್ನ ಮಾಡಿಕೊಂಡಿದ್ದಾರೆ. ಹೀಗಾಗಿ, ಸಂಪ್ರದಾಯವಾಗಿ ಸೀರೆಯುಟ್ಟು, ತಲೆಗೆ ಹೂವು ಇಟ್ಟು ಸಂಪ್ರದಾಯಸ್ಥ ಹುಡುಗಿಯಂತೆ ಕಂಗೊಳಿಸಿದ್ದರು.

ಆದ್ರೆ, ಇದು ಮುಸ್ಲಿಂ ಸಮುದಾಯದ ಕೆಲವರ ಕೋಪಕ್ಕೆ ಗುರಿಯಾಗಿದೆ. ''ರಂಜಾನ್ ಸಂದರ್ಭದಲ್ಲಿ ಸೀರೆ ಉಟ್ಟಿದ್ದು ತಪ್ಪು, ಸೋಹಾಗೆ ಮುಸ್ಲಿಂ ಸಂಸ್ಕೃತಿಯೇ ಗೊತ್ತಿಲ್ಲ'' ಎಂದು ಸೋಹ ಅವರನ್ನ ಟೀಕಿಸಿದ್ದಾರೆ. ಮುಂದೆ ಓದಿ......

ಸೀರೆ ತೊಟ್ಟಿದ್ದಕ್ಕೆ ಟ್ರೋಲ್

ಗುಲಾಬಿ ಬಣ್ಣದ ಸೀರೆಯುಟ್ಟು ಪತಿಯ ಜೊತೆ ಕಂಗೊಳಿಸಿರುವ ಪೋಟೊವನ್ನು ಸೋಹಾ ಅವರು, ರಂಜಾನ್ ದಿನ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಭಿಮಾನಿಗಳಿಗೆ ಈದ್ ಮುಬಾರಕ್ ಶುಭಾಶಯ ಹೇಳಿದ್ದರು. ಇದು ಮುಸ್ಲಿಂ ಸಂಪ್ರದಾಯಸ್ಥರ ಕೋಪಕ್ಕೆ ಕಾರಣವಾಗಿದೆ.

ನೀನು ಮುಸ್ಲಿಂ ಅಲ್ಲಾ

ಈದ್ ಹಬ್ಬದ ದಿನ ಈ ರೀತಿಯಾಗಿ ಸೀರೆಯುಟ್ಟಿದ್ದಕ್ಕೆ ''ನಿನೊಬ್ಬಳ್ಳು ಮುಸ್ಲಿಂ ಅಲ್ಲ. ನೀನು ತೊಟ್ಟಿರುವ ಉಡುಗೆಗೂ ಮುಸ್ಲಿಂ ಸಂಪ್ರದಾಯಕ್ಕೂ ನಂಟಿಲ್ಲ. ಹಾಗೆಂದ ಮೇಲೆ ಶುಭಾಶಯ ಯಾಕೆ ಹೇಳುತ್ತೀಯಾ'' ಎಂದು ಕಿಡಿಕಾರಿದ್ದಾರೆ.

ಸೀಮಂತ ಕಾರ್ಯಕ್ರಮ ಇರಬಹುದು?

ಅಂದ್ಹಾಗೆ, ಸೋಹ ಆಲಿಖಾನ್ ಪೋಸ್ಟ್ ಮಾಡಿರುವ ಫೋಟೋಗಳು ಸೋಹ ಅವರ ಸೀಮಂತ ಕಾರ್ಯಕ್ರಮದ್ದು ಎಂದು ಹೇಳಲಾಗ್ತಿದೆ. ಇದು ನಡೆದಿದ್ದು ಯಾವಾಗ ಎಂಬುದರ ಬಗ್ಗೆ ನಿಖಿರವಾದ ಮಾಹಿತಿ ಇಲ್ಲವಾದರೂ, ಈದ್ ಹಬ್ಬಕ್ಕೆ ಪೋಸ್ಟ್ ಮಾಡಿ ಶುಭಾ ಕೋರಿದ್ದು ಮಾತ್ರ ತಪ್ಪು ಎಂದು ಬಿಂಬಿಸಲಾಗುತ್ತಿದೆ.

ಟ್ರೋಲ್ ಗೆ ಡೋಂಟ್ ಕೇರ್ ಎಂದ ನಟಿ

ಸೋಹಾ ಅಲಿ ಖಾನ್ ಮಾತ್ರ ಈ ಟೀಕೆಗಳಿಗೆಲ್ಲ ತಲೆಕೆಡಿಸಿಕೊಂಡಿಲ್ಲ. ಸೀಮಂತದ ಸಂಭ್ರಮವನ್ನು Instagramನಲ್ಲಿ ಹಂಚಿಕೊಂಡಿದ್ದಾರೆ. ''ಅಲಂಕಾರ ಮಾಡಿಕೊಳ್ಳಲು ಕುಟುಂಬದವರು ಹಾಗೂ ಸ್ನೇಹಿತರ ಪ್ರೀತಿಯೇ ಸಾಕು'' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೊಗಳಿಗೆ 60,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

English summary
Soha Ali Khan trolled for wearing sari, Soha Ali Khan recently posted a picture of what fans are guessing was a traditional Bengali baby shower.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada