Don't Miss!
- Sports
ಗ್ಲೆನ್ ಮ್ಯಾಕ್ಸ್ವೆಲ್ ಕೈಯಿಂದ ಆರೆಂಜ್ ಕ್ಯಾಪ್ ಕಸಿದುಕೊಂಡ ಧವನ್
- News
ಉತ್ತರ ಪ್ರದೇಶ ಕೊರೊನಾ ದಾಖಲೆ; ಭಾನುವಾರ ಲಾಕ್ಡೌನ್!
- Finance
ಕೊರೊನಾವೈರಸ್ ಎರಡನೇ ಅಲೆ: ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಬಹುದು!
- Automobiles
ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಲ್ಮಾನ್ ಖಾನ್ ಮದುವೆಯಾಗುವ ಏಕೈಕ ಉದ್ದೇಶಕ್ಕೆ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ನಟಿ ಸೋಮಿ ಅಲಿ
ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾ ವಿಚಾರಕ್ಕೆ ಎಷ್ಟು ಸುದ್ದಿಯಾಗಿದ್ದಾರೊ ಮದುವೆ ವಿಚಾರವಾಗಿಯೂ ಅಷ್ಟೆ ಸದ್ದು ಮಾಡುತ್ತಿರುತ್ತಾರೆ. ಅವರ ಪ್ರೀತಿ, ಪ್ರೇಮದ ವಿಚಾರಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುತ್ತೆ. ಸಲ್ಮಾನ್ ಖಾನ್ ಅವರ ಮೋಹದಿಂದ ಖ್ಯಾತ ನಟಿಯೊಬ್ಬರು ತನ್ನ ದೇಶ ಬಿಟ್ಟು ಭಾರತಕ್ಕೆ ಬಂದ ಸತ್ಯ ಕಥೆ ತಡವಾಗಿ ರಿವೀಲ್ ಆಗಿದೆ.
ಹೌದು, ಸೋಮಿ ಅಲಿ ಎನ್ನುವ ಪಾಕಿಸ್ತಾನದ ಮೂಲದ ನಟಿ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಬೇಕು ಎನ್ನುವ ಏಕೈಕ ಉದ್ದೇಶದಿಂದ ತನ್ನ ದೇಶ ಬಿಟ್ಟು ಭಾರತಕ್ಕೆ ಬಂದ ಕತೆಯನ್ನು ಈಗ ಬಹಿರಂಗ ಪಡಿಸಿದ್ದಾರೆ. ಸೋಮಿ ಅಲಿ 16ನೇ ವಯಸ್ಸಿನಲ್ಲೇ ಪಾಕಿಸ್ತಾನದಿಂದ ಮುಂಬೈ ಬರುತ್ತಾರೆ. ಈ ಬಗ್ಗೆ ಸೋಮಿ ಅಲಿ ಇತ್ತೀಚಿಗೆ ನೀಡಿದ ಸಂದರ್ಶನದವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

'ಮೈನೆ ಪ್ಯಾರ್ ಕಿಯಾ' ನೋಡಿ ಸಲ್ಮಾನ್ ಮದುವೆಯಾಗಬೇಕು ಎಂದುಕೊಂಡೆ
'ಅಂದು 1991. ನನಗೆ ಆಗಿನ್ನು 16 ವರ್ಷ. ನಾನು ಮೈನೆ ಪ್ಯಾರ್ ಕಿಯಾ ಸಿನಿಮಾ ನೋಡಿದೆ. ಸಿನಿಮಾ ನೋಡಿದ ಬಳಿಕ ಸಲ್ಮಾನ ಖಾನ್ ಅವರನ್ನು ಮದುವೆಯಾಗಬೇಕು ಎನಿಸಿತು. ನಾನು ಭಾರತಕ್ಕೆ ನಾಳೆ ಹೋಗುತ್ತೇನೆ ಎಂದು ನನ್ನ ತಾಯಿಗೆ ಹೇಳಿದೆ. ಆದರೆ ಅಮ್ಮ ಇದಕ್ಕೆ ಒಪ್ಪಲಿಲ್ಲ. ಆದರೆ ನಾನು ಭಾರತಕ್ಕೆ ಹೋಗಿ ಈ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ಹೇಳಿದೆ. ಆದರೆ ನನ್ನ ತಂದೆಗೆ ಈ ವಿಚಾರ ಹೇಳದೆ ಮನೆಯಿಂದ ಹೊರಟೆ' ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಗಾಗಿ ಬಾಲಿವುಡ್ ಸೇರಿದ ನಟಿ
ಬಳಿಕ ಭಾರತಕ್ಕೆ ಬಂದ ಸೋಮಿ ಅಲಿ ಪಂಚತಾರ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಾರೆ. ಆ ಸಮಯದಲ್ಲಿ ಸೋಮಿ ಅಲಿ ಇನ್ನು ಯುವ ನಟಿ. ಸಲ್ಮಾನ್ ಖಾನ್ ಪಡೆಯುವ ಆಸೆಯಿಂದ ಬಾಲಿವುಡ್ ನಲ್ಲಿ ನಟನೆಯನ್ನು ಪ್ರಾರಂಭ ಮಾಡುತ್ತಾರೆ. ಆದರೆ ನಟನೆ ಬಗ್ಗೆ ಅವರಿಗೆ ಆಸಕ್ತಿ ಇರಲಿಲ್ಲ. 'ನಿರ್ದೇಶಕರು ಹೇಳುವ ರಿಹರ್ಸಲ್ ಗಳಲ್ಲಿ ಭಾಗವಾಹಿಸುತ್ತಿರಲ್ಲಿಲ್ಲ. ನಾನು ಇತರರಿಗಂತ ಭಿನ್ನವಾಗಿದ್ದೆ. ಚಿತ್ರೋದ್ಯಮಕ್ಕೆ ನಾನು ಫಿಟ್ ಆಗುತ್ತಿರಲಿಲ್ಲ' ಎಂದು ಹೇಳಿದ್ದಾರೆ.

ನಿಜವಾದ ಪ್ರೀತಿ ಹುಡುಕಿಕೊಂಡು ಹೋಗಿ ತಪ್ಪುಮಾಡಿದೆ
ಇಷ್ಟಾದರೂ ಸೋಮಿ ಅಲಿ ಬಾಲಿವುಡ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಏಕೈಕ ಗುರಿ ಸಲ್ಮಾನ್ ಖಾನ್ ಅವರನ್ನು ಮದುವೆಯಾಗುವುದು ಅಷ್ಟೆ. ಅವರ ಆಸೆಯಂತೆ ಸಲ್ಮಾನ್ ಖಾನ್ ಜೊತೆ ಸ್ನೇಹ ಬೆಳೆಸುತ್ತಾರೆ. ಇಬ್ಬರ ನಡುವೆ ಪ್ರೀತಿ ಪ್ರೇಮದ ವಿಚಾರ ಅಂದು ಸುದ್ದಿಯಾಗಿದ್ದು ಇದೆ. ಆದರೆ ಕೊನೆಗೂ ಸೋಮಿ ಸಲ್ಮಾನ್ ಖಾನ್ ಮದುವೆಯಾಗಲು ಸಾಧ್ಯವಾಗಿಲ್ಲ. ಈ ಬಗ್ಗೆ ಸೋನಿ 'ನಿಜವಾದ ಪ್ರೀತಿಯನ್ನು ಹುಡುಗಿಕೊಂಡು ಹೋಗಿ ತಪ್ಪು ಮಾಡಿದೆ. ಆದರೆ ಇದರ ಬಗ್ಗೆ ಪಶ್ಚಾತಾಪವಿಲ್ಲ. ಯಾಕೆಂದರೆ ನಾನು ಮನಸಾರೆ ಮಾಡಿದ್ದೆ' ಎಂದು ಹೇಳಿದ್ದಾರೆ.

ಬಾಲ್ಯದ ಕಷ್ಟಗಳ ಬಗ್ಗೆ ಸೋಮಿ ಅಲಿ ಮಾತು
1999ರಲ್ಲಿ ಸೋಮಿ ಅಲಿ ಭಾರತ ಬಿಟ್ಟು ವಾಪಸ್ ಹೋಗುತ್ತಾರೆ. ಇನ್ನೂ ಇದೇ ಸಮಯದಲ್ಲಿ ಬಾಲ್ಯದ ಕಷ್ಟದ ದಿನಗಳ ಬಗ್ಗೆಯೂ ಮಾತನಾಡಿದ್ದಾರೆ. ನಾನು ಪಾಕಿಸ್ತಾನದಲ್ಲಿ ಹುಟ್ಟಿ ಬೆಳೆದವಳು. ಅಲ್ಲಿ ನಮ್ಮ ಕುಟುಂಬ ದೌರ್ಜನ್ಯಕ್ಕೆ ಒಳಗಾಗಿತ್ತು. 5 ರಿಂದ 9 ವರ್ಷದವರೆಗೆ ನಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ಬಳಿಕ 11ನೇ ವಯಸ್ಸಿಗೆ ನಾನು ಯುಎಸ್ ಗೆ ಹೋದೆ, ಅಲ್ಲಿ ಅತ್ಯಾಚಾರಕ್ಕೆ ಬಲಿಯಾದೆ' ಎಂದು ಬಾಲ್ಯದ ದುರಂತ ಘಟನೆಗಳನ್ನು ರಿವೀಲ್ ಮಾಡಿದ್ದಾರೆ.

ಸಾಮಾಜಿಕ ಕೆಲಸಗಳಲ್ಲಿ ಸೋಮಿ ಅಲಿ ಬ್ಯುಸಿ
ಸೋಮಿ ಅಲಿ ಸದ್ಯ ಸಾಮಾಜಿಕ ಹೋರಾಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಮಹಿಳಾ ಹಕ್ಕುಗಳಿಗಾಗಿ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಎನ್ ಜಿ ಓ ನಡೆಸುತ್ತಿದ್ದಾರೆ. ಸಮಾಜಕ್ಕಾಗಿ ಕೆಲಸ ಮಾಡುವುದು ತುಂಬಾ ಸಂತೋಷವಿದೆ ಎಂದು ಹೇಳಿದ್ದಾರೆ.